Krishi Ashirvaad Yojana : 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಪ್ರತಿ ಎಕರೆಗೆ 5000 ರೂಪಾಯಿಗಳ ಆರ್ಥಿಕ ಸಹಾಯ!
Krishi Ashirvaad Yojana: ರೈತರೇ ಗಮನಿಸಿ, ನಿಮಗಿದೋ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. ಕೃಷಿಯನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ (Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ, ಈ ಊರಿನ ರೈತರಿಗೆ ಬಂಪರ್ ಸಿಹಿ ಸುದ್ದಿ ಇದ್ದು, ಕೃಷಿ ಆಶೀರ್ವಾದ ಯೋಜನೆಯನ್ನು(Krishi Ashirvaad Yojana) ಜಾರ್ಖಂಡ್ (Jharkhand) ಸರ್ಕಾರ ನಡೆಸುತ್ತಿದ್ದು, ಈ ರೈತರಿಗೆ ಸರ್ಕಾರ ಆರ್ಥಿಕ ನೆರವನ್ನು ನೀಡಲು ಮುಂದಾಗಿದೆ.
ಕೃಷಿ ಆಶೀರ್ವಾದ ಯೋಜನೆಯು(Krishi Ashirvaad Yojana) ಜಾರ್ಖಂಡ್ ಸರ್ಕಾರವು ನಡೆಸುತ್ತಿರುವ ಯೋಜನೆಯಾಗಿದ್ದು, ಈ ಯೋಜನೆಯ ಮೂಲಕ 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಪ್ರತಿ ಎಕರೆಗೆ 5000 ರೂಪಾಯಿಗಳ ಆರ್ಥಿಕವಾಗಿ ನೆರವನ್ನು ಒದಗಿಸಲಾಗುತ್ತದೆ. ಖಾರಿಫ್ ಹಂಗಾಮಿನ ಕೃಷಿಗೆ ಮೊದಲು ಈ ಹಣವನ್ನು(Amount) ರೈತರ(Farmers)ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಕೃಷಿ ಆಶೀರ್ವಾದ ಯೋಜನೆಯಡಿ 5 ಎಕರೆ ಜಮೀನು ಹೊಂದಿರುವ ರೈತರು ಗರಿಷ್ಠ 25,000 ರೂ. ಪಡೆಯಬಹುದು. ರಾಜ್ಯದಲ್ಲಿ ಪಿಎಂ ಕಿಸಾನ್ ನಿಧಿಯ(PM Kisan Samman Yojana Scheme) ಲಾಭ ಪಡೆಯುವ ರೈತರಿಗೆ ಕನಿಷ್ಠ 11,000 ರೂ. ಮತ್ತು ಗರಿಷ್ಠ 31,000 ರೂ. ಲಭ್ಯವಾಗುತ್ತದೆ.
ಈ ಯೋಜನೆಗೆ ಸಂಬಂಧಿಸಿ ಕೆಲ ಷರತ್ತುಗಳಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಕೃಷಿ ಆಶೀರ್ವಾದ್ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿಯನ್ನು ಸಾಗುವಳಿ ಮಾಡುವ ರೈತರಿಗೆ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. 22 ಲಕ್ಷ 47 ಸಾವಿರ ರೈತರಿಗೆ ಸರ್ಕಾರದ ಈ ಯೋಜನೆಯ ಲಾಭವನ್ನು ಒದಗಿಸಲಾಗುತ್ತದೆ.
ಈ ಯೋಜನೆಗೆ ಅರ್ಹರಾದ ರೈತರು ಹಂಗಾಮಿನ ಕಟಾವಿಗೆ ಮೊದಲೇ ಸರ್ಕಾರದಿಂದ 5000 ರೂ. ಪಡೆಯಬಹುದಾಗಿದ್ದು, ಪಿಎಂ ಕಿಸಾನ್ ಅಡಿಯಲ್ಲಿ ಈಗಾಗಲೇ ವಾರ್ಷಿಕ 6000 ರೂ.ಗಳ ಅನುಕೂಲವನ್ನು ಪಡೆಯುತ್ತಿದ್ದಾರೆ. ಈ ಮೂಲಕ ವರ್ಷದಲ್ಲಿ ಒಟ್ಟು 11,000 ರೂ. ಪಡೆದಂತಾಗುತ್ತದೆ. ಅದರಂತೇ,ರಾಜ್ಯ ಸರ್ಕಾರದಿಂದ 5 ಎಕರೆ ಕೃಷಿ ಭೂಮಿ ಹೊಂದಿರುವ ರೈತನ ಖಾತೆಗೆ 25 ಸಾವಿರ ರೂ. ಲಭ್ಯವಾದರೆ, ಕೇಂದ್ರ ಸರ್ಕಾರದಿಂದ ಆರು ಸಾವಿರ ದೊರೆಯಲಿದ್ದು, ಹೀಗೆ ಒಟ್ಟು 31 ಸಾವಿರ ರೂ. ರೈತರ ಕೈ ಸೇರಲಿದೆ.