Honda : ದೀಪಾವಳಿಗೂ ಮುನ್ನ ಬರಲಿದೆ ಹೊಂಡಾದಿಂದ ಅತ್ಯಾಕರ್ಷಕ ಮೂರು ಹೊಸ ವಾಹನ!

Share the Article

Honda Motorcycle : ದ್ವಿಚಕ್ರ ವಾಹನ ಪ್ರಿಯರಿಗೆ ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಡೆಯಿಂದ ಒಂದು ಸಿಹಿ ಸುದ್ದಿ ನೀಡಲಾಗಿದೆ. ಹೌದು, ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಈ ವರ್ಷ ದೀಪಾವಳಿಗೂ ಮುನ್ನ ಮೂರು ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ. ಅದಲ್ಲದೆ ಮೂರು ಹೊಸ ಮಾದರಿಗಳಲ್ಲಿ 125 ಸಿಸಿ ಸ್ಕೂಟರ್ ಮತ್ತು 160 ಸಿಸಿ ಮೋಟಾರ್‌ಸೈಕಲ್ ಬಿಡುಗಡೆಯಾಗಲಿವೆ.

ಹೋಂಡಾ ಮೋಟಾರ್‌ಸೈಕಲ್ (Honda Motorcycle) ಮತ್ತು ಸ್ಕೂಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಅತ್ಸುಶಿ ಒಗಾಟಾ ಈ ಕುರಿತು ಮಾಹಿತಿ ನೀಡಿದ್ದು, ಈ ಹೊಸ ಸ್ಕೂಟರ್​ಗಳ ಮೂರನೇ ಹೊಸ ಮಾದರಿಯು 350 ಸಿಸಿ ಮೋಟಾರ್‌ಸೈಕಲ್ ಆಗಿದ್ದು, ದೀಪಾವಳಿಯ ಮೊದಲು ಮಾರುಕಟ್ಟೆಗೆ ಬರಲಿದೆ ಎಂದರು.

ಇನ್ನು 350cc ಮೋಟಾರ್‌ಸೈಕಲ್ ಹೋಂಡಾ H’ness CB350 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಹೋಂಡಾದ ಸಮೂಹ-ವಿಭಾಗದ ಮೋಟಾರ್‌ಸೈಕಲ್ ಶ್ರೇಣಿಯು ಶೈನ್ 100, CD 110 ಡ್ರೀಮ್, ಲಿವೋ, ಶೈನ್ 125, SP125, ಯುನಿಕಾರ್ನ್, X-ಬ್ಲೇಡ್, ಹಾರ್ನೆಟ್ 2.0 ಮತ್ತು CB 200X ಅನ್ನು ಒಳಗೊಂಡಿದೆ.

Leave A Reply