Ghost Town Dhanushkoti : ಧನುಷ್ಕೋಟಿ ಎಂಬ ಈ ನಗರ ಘೋಸ್ಟ್ ಟೌನ್ ಗೆ ಪ್ರಖ್ಯಾತಿ! ಯಾಕೆ? ಇಲ್ಲಿದೆ ಕಾರಣ!
Ghost Town Dhanushkoti : ತಮಿಳುನಾಡಿನ(Tamil Nadu) ರಾಮೇಶ್ವರಂನಿಂದ(Rameswaram) 20 ಕಿ.ಮೀ ದೂರದಲ್ಲಿರುವ ಪಂಬನ್ ದ್ವೀಪದಲ್ಲಿನ ತುತ್ತತುದಿಯಲ್ಲಿರುವ ಧನುಷ್ಕೋಟಿ ಎಂಬ ಊರು ಭಾರತದಲ್ಲಿ ಎಲ್ಲಾ ರೀತಿಯಲ್ಲಿಯೂ ಅಭಿವೃದ್ಧಿಯಾಗಿದ್ದ ನಗರವಾಗಿದೆ. ಈ ನಗರದಲ್ಲಿ ಈ ಹಿಂದೆ ಘಟನೆಯೊಂದು ನಡೆದು ಜನರನ್ನೆಲ್ಲ ಬೆಚ್ಚಿ ಬೀಳಿಸಿತ್ತು. ಸುಂದರವಾದ ಈ ನಗರವನ್ನು ಇಂದಿಗೂ ‘ದಿ ಗೋಸ್ಟ್ ಟೌನ್’ ಎನ್ನಲಾಗುತ್ತದೆ. ಅರೇ!! ಅಷ್ಟಕ್ಕೂ ಅಲ್ಲಿ ನಡೆದ ದುರಂತವಾದರೂ ಏನು ಗೊತ್ತೇ?
ಧನುಷ್ಕೋಟಿ ಪ್ರವಾಸಿಗರ ನೆಚ್ಚಿನ( Tourist Places)ತಾಣವಾಗಿದ್ದು,ಈ ನಗರವನ್ನು ಧನುಷ್ಕೋಟಿ ಅಥವಾ ತಮಿಳಿನಲ್ಲಿ ಧನುಷ್ಕೋಡಿ ಎಂದು ಕರೆಯಲಾಗುತ್ತದೆ. ಧನುಷ್ಕೋಡಿ ತಮಿಳುನಾಡಿನ ಅರಬ್ಬೀ ಸಮುದ್ರ ಹಾಗೂ ಬಂಗಾಳಕೊಲ್ಲಿ ಎರಡರ ಗಡಿಯಲ್ಲಿ ಕಂಡುಬರುವ ತಾಣವಾಗಿದೆ. ಕೆಲವು ದಂತ ಕಥೆಯ ಅನುಸಾರ, ರಾಮ(Lord Sri Rama), ತನ್ನ ಬಿಲ್ಲಿನ ಒಂದು ತುದಿಯಿಂದ ಇಲ್ಲಿನ ಸೇತುವೆಯನ್ನು ಮುರಿದ ಹಿನ್ನೆಲೆ ಈ ಸ್ಥಳಕ್ಕೆ ಧನುಷ್ಕೋಡಿ ಎಂಬ ಹೆಸರು ಬಂತು ಎನ್ನಲಾಗುತ್ತದೆ. ಈ ಹಿಂದೆ ದಕ್ಷಿಣ ಭಾರತದಲ್ಲಿ ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿ ಅನೇಕ ದಂತಕಥೆಗಳ ಬಗ್ಗೆ ಅರಹುತ್ತಿದ್ದ ತಾಣ ಇಂದು ಅವಶೇಷಗಳ ಕಥೆಯನ್ನು ಸಾರುತ್ತಿದೆ.
ಧನುಷ್ಕೋಟಿ ಎಂಬ ಹೆಸರಿನಲ್ಲಿ ಧನುಷ್ ಎಂದರೆ ಬಿಲ್ಲು, ಕೋಡಿ ಎಂದರೆ ತುದಿ ಎಂಬ ಅರ್ಥವಂತೆ. ರಾಮನು ಈ ಸ್ಥಳವನ್ನು ಸೇತುವೆಯ ನಿರ್ಮಾಣಕ್ಕೆ ಸರಿಯಾದ ಸ್ಥಳವೆಂದು ತೀರ್ಮಾನಿಸಿ, ತನ್ನ ಕೀರ್ತಿವೆತ್ತ ಬಿಲ್ಲಿನ ತುದಿಯಿಂದ ಗುರುತು ಹಾಕಿದ ಎಂಬ ನಂಬಿಕೆ(Belive) ಕೂಡ ಇದೆಯಂತೆ. ಒಂದೇ ಸರಳರೇಖೆಯನ್ನು ಒಳಗೊಂಡ ಹಲವಾರು ಬಂಡೆಗಳು ಮತ್ತು ಪುಟ್ಟ ದ್ವೀಪಗಳ ಸಾಲನ್ನು ಹಳೆಯ ಸೇತುವೆಯ ಪಳಿಯುಳಿಕೆ ಎನ್ನುವ ಜೊತೆಗೆ ಇದನ್ನು ರಾಮಸೇತು (Ram Setu)ಎನ್ನಲಾಗುತ್ತದೆ. ಆದರೆ, ಇಷ್ಟೆಲ್ಲಾ ಇತಿಹಾಸ (History)ಹೇಳುವ ಸುಂದರವಾದ ಸ್ಥಳಕ್ಕೆ ಗೋಸ್ಟ್ ಟೌನ್(Harsha mudyana)(Ghost town in Karnataka) ಎಂಬ ಹೆಸರು ಬಂದದ್ದಾದರೂ ಹೇಗೆ ಎಂಬ ಪ್ರಶ್ನೆ ಕಾಡುವುದು ಸಹಜ!! ಹಾಗಿದ್ರೆ ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಧನುಷ್ಕೋಡಿಯು ಶ್ರೀಲಂಕಾದ(Srilanka)ತಲೈಮನ್ನಾರ್ ನ ಪಶ್ಚಿಮದಿಂದ ಸುಮಾರು 18 ಮೈಲಿಗಳ ಅಂತರದಲ್ಲಿದೆ. 1964ರಲ್ಲಿ ಪಾಂಬನ್ ನಿಲ್ದಾಣದಿಂದ ಸಾಗಿಬರುವ ರೈಲು ಹಳಿಗಳು ಚಂಡಮಾರುತದ(Tropical Cyclone) ದಾಳಿಗೆ ನಾಶವಾಗಿ ಹೋಯಿತಂತೆ. 1964ರಲ್ಲಿ ಡಿಸೆಂಬರ್ 22, ರಾತ್ರಿ 11.55ರ ಸಮಯದಲ್ಲಿ ಮಾಮೂಲಿಯಂತೆ 110 ಜನ ಪ್ರಯಾಣಿಕರು ಮತ್ತು 5 ರೈಲ್ವೇ ಸಿಬ್ಬಂದಿಗಳನ್ನು (Railway Passengers)ಹೊತ್ತು ಪ್ರಯಾಣ ಸಾಗುತ್ತಿತ್ತು. ಆದರೆ, ಧನುಷ್ಕೋಡಿಯನ್ನು ಪ್ರವೇಶಿಸುತ್ತಿದ್ದ ರೈಲು( Train) ಒಂದು ದೈತ್ಯ ಅಲೆಯ ಹೊಡೆತಕ್ಕೆ ತುತ್ತಾಗಿ, 100 ಪ್ರಯಾಣಿಕರನ್ನು ಒಯ್ಯುತ್ತಿದ್ದ ಆ ರೈಲು ಸಮುದ್ರದಲ್ಲಿ ಮುಳುಗಿಹೋಗಿದ್ದು ಮಾತ್ರವಲ್ಲ, ರೈಲಿನಲ್ಲಿದ್ದ 110 ಪ್ರಯಾಣಿಕರು ಪ್ರವಾಹದಲ್ಲಿ ಕೊಚ್ಚಿ ಹೋಗಿಬಿಟ್ಟರು. ಆ ಚಂಡಮಾರುತದಲ್ಲಿ ಒಟ್ಟಾರೆ 1800 ಜನರು ದುರಂತ ಅಂತ್ಯ ಕಂಡರಂತೆ.
ಧನುಷ್ಕೋಡಿಯ ಎಲ್ಲಾ ಮನೆಗಳು(House), ವಸತಿ ಗೃಹಗಳು ಮತ್ತು ಇತರ ಕಟ್ಟಡಗಳು ಚಂಡಮಾರುತದಲ್ಲಿ ಎದ್ದ ಅಲೆಗಳಲ್ಲಿ ಮುಳುಗಿಹೋಗಿದ್ದು, ದ್ವೀಪ ಹಾಗೂ ಮುಖ್ಯಭೂಮಿಯನ್ನು ಸಂಪರ್ಕಿಸಿದ್ದ ಪಾಂಬನ್ ಸೇತುವೆ ಕೂಡಾ ಪ್ರವಾಹದಲ್ಲಿ ನಾಶವಾಗಿ, 3000 ಮಂದಿ ಆಗ ಸಂಪರ್ಕ ಪಡೆಯಲಾಗದೆ ಪರದಾಡುವ ಸ್ಥಿತಿ ಎದುರಾಗಿತ್ತು. ಇದರಿಂದಾಗಿ ಇಡೀ ನಗರವೇ ನಾಶವಾಯಿತಂತೆ. ಆ ದುರಂತದ ಭಾಗವಾಗಿದ್ದ ಆ ರೈಲಿನ ಹಳಿಯಲ್ಲಿ ಇಂದಿಗೂ ಅಂತಿಮ ಘಟನೆಯ ನೆನಪನ್ನು ಬಿಂಬಿಸುವ ಪಳೆಯುಳಿಕೆಗಳು ಇಂದಿಗೂ ಸಾಕ್ಷಿಯಾಗಿ ಉಳಿದಿವೆಯಂತೆ.
ಧನುಷ್ಕೋಡಿ ಬಸ್ (Ghost Town Dhanushkoti) ನಿಲ್ದಾಣದ ಬಳಿ ಚಂಡಮಾರುತದಲ್ಲಿ ಮೃತಪಟ್ಟಿರುವವರಿಗಾಗಿ ಸ್ಮಾರಕ ಕಟ್ಟಲಾಗಿದ್ದು, ಚಂಡಮಾರುತದ ಅಬ್ಬರ ಧನುಷ್ಕೋಡಿ ಪಟ್ಟಣವನ್ನು ಡಿಸೆಂಬರ್ 22ನೆಯ 1964ರ ಮಧ್ಯರಾತ್ರಿಯಿಂದ 1964ರ ಡಿಸೆಂಬರ್ 25ರ ಸಾಯಂಕಾಲದವರೆಗೂ ಅಪ್ಪಳಿಸಿ ತೀವ್ರವಾದ ಹಾನಿಯನ್ನು ಉಂಟುಮಾಡಿದ ಪರಿಣಾಮ ಇಡೀ ಧನುಷ್ಕೋಡಿ ಪಟ್ಟಣವನ್ನೇ ನಾಶಗೊಳಿಸುದರ (Destroy) ಕುರಿತಾಗಿ ಸ್ಮಾರಕದಲ್ಲಿ ಸವಿವರವಾಗಿ ಬರೆಯಲಾಗಿದೆಯಂತೆ.
ಈ ದುರಂತ ಕಂಡ ಬಳಿಕ, ಮದ್ರಾಸ್ ಸರ್ಕಾರವು ಈ ಪಟ್ಟಣವನ್ನು ದೆವ್ವಗಳ ನಗರ (Ghost town)ಎಂದು ಘೋಷಿಸಿ, ಚಂಡಮಾರುತ ಕಾಣಿಸಿಕೊಂಡ ಬಳಿಕ ಈ ಪ್ರದೇಶವನ್ನು ವಾಸಿಸಲು ಅರ್ಹವಾದ ಸ್ಥಳವಲ್ಲ ಎಂದು ತೀರ್ಮಾನಿಸಲಾಯಿತು. ಚಂಡಮಾರುತ ಅಪ್ಪಳಿಸುವ ಮುನ್ನ ಧನುಷ್ಕೋಟಿಯು ಒಂದು ಉತ್ತಮ ಪ್ರವಾಸಿ ಹಾಗೂ ತೀರ್ಥಯಾತ್ರಾ ಸ್ಥಳವಾಗಿ ಗುರುತಿಸಿಕೊಂಡಿತ್ತು. ಈ ನಗರದ ಬಗ್ಗೆ ಆಸಕ್ತಿ ಇರುವ ಪ್ರವಾಸಿಗರು ಈಗಲೂ ಲಾರಿ, ಜೀಪುಗಳಲ್ಲಿ ಪ್ರಯಾಣ ಬೆಳೆಸುತ್ತಾರೆ.
ರಸ್ತೆಯ ಮೂಲಕ ಹೋಗ ಬಯಸುವ ಮಂದಿಗೆ ಬಯರಾಮೇಶ್ವರಂ ಧನುಷ್ಕೋಡಿಯಿಂದ 18 ಕಿಮೀ ದೂರದಲ್ಲಿರುವ ಸಮೀಪವಾದ ನಗರವಾಗಿದ್ದು, ರಾಮೇಶ್ವರಂ ಚೆನ್ನೈ ಮತ್ತು ಮಧುರೈನಂತಹ ಪ್ರಮುಖ ನಗರಗಳೊಂದಿಗೆ ರೈಲು ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಒಳಗೊಂಡಿದೆ. ಒಂದು ನಿರ್ದಿಷ್ಟ ಹಂತದ ಬಳಿಕ, ಟೆಂಪೋ ಟ್ರಾವೆಲರ್ ಅನ್ನು ಬಳಕೆ ಮಾಡಬೇಕಾಗುತ್ತದೆ. ಇದಲ್ಲದೇ, ರಾಮೇಶ್ವರಂ ಧನುಷ್ಕೋಡಿಯಿಂದ ಹತ್ತಿರದ ರೈಲು ನಿಲ್ದಾಣವಾಗಿದ್ದು, ಚೆನ್ನೈ ಮತ್ತು ಮಧುರೈನಿಂದ ಬೇಕಾದಷ್ಟು ರೈಲುಗಳು ಚಲಿಸುವುದರಿಂದ ರೈಲಿನಲ್ಲಿ ಕೂಡ ಪ್ರಯಾಣಿಸಬಹುದು. ವಿಮಾನದ ಮೂಲಕ ಹೋಗುವುದಾದರೆ, ಮಧುರೈ ವಿಮಾನ ನಿಲ್ದಾಣವು163 ಕಿಮೀ ದೂರದಲ್ಲಿರುವ ರಾಮೇಶ್ವರಂ ಮತ್ತು ನಂತರ ಧನುಷ್ಕೋಡಿಗೆ ಹತ್ತಿರದ ಏರ್ಸ್ಟ್ರಿಪ್ ಆಗಿದ್ದು, ಈ ಮೂಲಕ ಕೂಡ ಪ್ರಯಾಣಿಸಬಹುದು.
ಇದನ್ನೂ ಓದಿ: Rama Navami special : ರಾಮ ನವಮಿಯಂದು ಹೇಗೆ ಉಪವಾಸ ಮಾಡಬೇಕು? ಇದರಿಂದ ಆಗುವ ಪ್ರಯೋಜನಗಳು ನೂರಾರು