Siddaramaiah : ರಾಜ್ಯದ ಮೊದಲ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ರೋಡ್ ಶೋ ವೇಳೆ ತಮಟೆ ಬಡಿಯುವವರಿಗೆ 1 ಸಾವಿರ ರೂ. ಕೊಟ್ಟು ಲಾಕ್ ಆದ ಸಿದ್ದರಾಮಯ್ಯ

Siddaramaiah road show : ಯಾವುದೇ ದೇಶದಲ್ಲಿ ಯಾವುದೇ ಚುನಾವಣೆ ಘೋಷಣೆಯಾದಾಗ ಅದರೊಂದಿಗೆ ಚುನಾವಣಾ ನೀತಿ ಸಂಹಿತೆಯೂ ಘೋಷಣೆಯಾಗುತ್ತದೆ. ಮತದಾರರಿಗೆ ಯಾವುದೇ ಪಕ್ಷದ ಅಭ್ಯರ್ಥಿಯು ಆಮಿಷಗಳನ್ನು ಒಡ್ಡುವಂತಾಗಬಾರದೆಂದು ಈ ಕಟ್ಟಳೆ. ಆದರೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ದಿನಾಂಕ ನಿರ್ಧಾರ ಆದ ದಿನವೇ ಈ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಇದೇ ಈ ಬಾರಿಯ ಮೊದಲ ನೀತಿ ಉಲ್ಲಂಘನೆಯಾಗಿದೆ.

 

ಚುನಾವಣೆ ಘೋಷಣೆಯಾಗುತ್ತಿರುವಾಗ ಮಾಜಿ ಸಿ ಎಂ ಸಿದ್ದರಾಮಯ್ಯನವರು (Siddaramaiah ) ವರುಣ ಕ್ಷೇತ್ರ ಪ್ರವಾಸ ಕೈಗೊಂಡಿದ್ದರು. ಅಲ್ಲೇ ತಾವು ಸ್ಪರ್ಧಿಸುವ ಕ್ಷೇತ್ರದ ಬಿಳುಗುಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಿದ್ದಾರೆ, ಜತೆಗೆ ಅಲ್ಲಿನ ಕಪಿಲಾ ನದಿಗೆ ನಿರ್ಮಿಸಿರುವ ಸೇತುವೆ ಉದ್ಘಾಟನೆ ಸಮಾರಂಭವು.ಕೂಡಾ ನೇರವೇರಿದೆ. ಅದೊಂದು ಬೃಹತ್ ಸಮಾವೇಶ ಆಗಿದ್ದು ಅಲ್ಲಿ ಅತ್ಯಂತ ಉತ್ಸಾಹದಿಂದ ಬೃಹತ್ ಸಮಾವೇಶದಲ್ಲಿ ಭಾಗಿಯಾದ್ದರು ಸಿದ್ದರಾಮಯ್ಯ. ಆಗ ಲಹರಿಗೆ ಬಿದ್ದ ತಮಟೆ ಬಾರಿಸುವವರು ತೋಳು ಬಿದ್ದು ಹೋಗುವವರೆಗೆ ತಮಟೆ ಬಾರಿಸಿದ್ದಾರೆ. ಅದರಿಂದ ಖುಷ್ ಆದ ಸಿದ್ದರಾಮಯ್ಯನವರು ರೋಡ್ ಶೋ ವೇಳೆ ತಮಟೆ ಬಡಿಯುವವರಿಗೆ ಒಂದು ಸಾವಿರ ರೂಪಾಯಿ ಹಣ ಕೊಟ್ಟಿದ್ದಾರೆ. ಈ ಮೂಲಕವಾಗಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.

ಇಂದಿನ ಉದ್ಘಾಟನೆ ಮತ್ತು ರೋಡ್ ಷೋ (Siddaramaiah road show) ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ಶಾಸಕ ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ, ಸುನೀಲ್ ಬೋಸ್ ಸೇರಿದಂತೆ ಹಲವು ಕೈ ನಾಯಕರು ಸಮಾವೇಶದಲ್ಲಿ ಭಾಗಿಯಾಗಿದ್ದರು. ಎಲ್ಲರ ಎದುರಿನಲ್ಲಿ ಸಿದ್ದು ದುಡ್ಡು ಬೀಸಿದ್ದಾರೆ.

Leave A Reply

Your email address will not be published.