JR NTR30 : ನಟ ಜೂ.ಎನ್ ಟಿಆರ್ ಗೆ ಕಾಡಿತು ಭಯ! ಈ ನಿರ್ಧಾರ ತಗೊಂಡ ಸಿನಿಮಾ ತಂಡ!
JR NTR30 : ವಿಎಫ್ಎಕ್ಸ್ ಬಳಕೆ ಮಾಡಿದ ಸಿನಿಮಾಗಳು ದೊಡ್ಡ ಮೊತ್ತದ ಸಿನಿಮಾವಾಗಿದ್ದು ಆ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಕೂಡ ಇರಿಸಲಾಗುತ್ತದೆ. ಆದರೆ, ಸ್ವಲ್ಪ ಎಡವಟ್ಟು ಆದರೂ ಜನರ ಬಾಯಿಗೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ. ಟ್ರೋಲ್ ಮೇಲೆ ಟ್ರೋಲ್ ಮಾಡಿ ಬಿಡುತ್ತಾರೆ.
ಈಗಾಗಲೇ ಪ್ರಭಾಸ್ ನಟನೆಯ ‘ಆದಿಪುರುಷ್’ (Adipurush) ಸಿನಿಮಾದ ಟೀಸರ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದು ಚಿತ್ರದ ದೊಡ್ಡ ಹಿನ್ನಡೆ ಗೆ ಕಾರಣ ಆಗಿದೆ . ‘ಆದಿಪುರುಷ್’ (Adipurush)ಟ್ರೋಲ್ ಆಗೋಕೆ ಪ್ರಮುಖ ಕಾರಣ ಕಳಪೆ ವಿಎಫ್ಎಕ್ಸ್ ಆಗಿದ್ದು, ಈ ವಿಚಾರದಲ್ಲಿ ಜೂನಿಯರ್ ಎನ್ಟಿಆರ್ಗೆ (Jr NTR) ಭಯ ಶುರುವಾಗಿದೆ. ಹೀಗಾಗಿ, ಅವರ ಮುಂದಿನ ಚಿತ್ರಕ್ಕೆ ವಿಎಫ್ಎಕ್ಸ್ ಕೆಲಸಕ್ಕೆ ಹಾಲಿವುಡ್ ದಿಗ್ಗಜನನ್ನು ಕರೆತರಲಾಗಿದೆ.
ಇನ್ನು ಕಳೆದ ವರ್ಷ ರಿಲೀಸ್ ಆದ ‘ಬ್ರಹ್ಮಾಸ್ತ್ರ’ ಸಿನಿಮಾದ ಗ್ರಾಫಿಕ್ಸ್ ಬಗ್ಗೆಯೂ ಟೀಕೆ ಎದುರಾಗಿತ್ತು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೊರಟಾಲ ಶಿವ ಹಾಗೂ ಜೂನಿಯರ್ ಎನ್ಟಿಆರ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಹೌದು, ಜೂನಿಯರ್ ಎನ್ಟಿಆರ್ 30ನೇ ಸಿನಿಮಾಗೆ ವಿಎಫ್ಎಕ್ಸ್ ಮೇಲ್ವಿಚಾರಕರಾಗಿ ಹಾಲಿವುಡ್ನ ಬ್ರಾಡ್ ಮಿನ್ನಿಚ್ ಅವರು ಆಗಮಿಸಿದ್ದಾರೆ. ಇವರು ಈ ಮೊದಲು ‘ದಿ ಗುಡ್ ಲಾರ್ಡ್ ಬರ್ಡ್’, ‘ಒಬಿ-ವ್ಯಾನ್ ಕೆನೋಬಿ’ ಮೊದಲಾದ ಹಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿ ಯಶಸ್ವಿ ಪಡೆದಿದ್ದಾರೆ.
ಜೂನಿಯರ್ ಎನ್ಟಿಆರ್ 30ನೇ ಸಿನಿಮಾಗೆ ಹಾಲಿವುಡ್ನ ಬ್ರಾಡ್ ಮಿನ್ನಿಚ್ ಗ್ರಾಫಿಕ್ಸ್ ನೀಡಲಿದ್ದು, ಅವರ ಟೀಂ ಈ ಚಿತ್ರಕ್ಕಾಗಿ ಕೆಲಸ ಮಾಡಲಿದೆ. ಜೂನಿಯರ್ ಎನ್ಟಿರ್ ನಟನೆಯ ಈ ಸಿನಿಮಾದಲ್ಲಿ ಗ್ರಾಫಿಕ್ಸ್ ಕೆಲಸಗಳು ಹೆಚ್ಚು ಇರಲಿದ್ದು, ಈ ಕಾರಣಕ್ಕೆ ನಿರ್ಮಾಪಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿ ಆಗಿದೆ.
ಸದ್ಯ ‘ಆರ್ಆರ್ಆರ್’ ಯಶಸ್ಸಿನ ಬಳಿಕ ಜೂನಿಯರ್ ಎನ್ಟಿಆರ್ ಒಪ್ಪಿಕೊಂಡಿರೋ ಸಿನಿಮಾ ಇದು. ಜೂನಿಯರ್ ಎನ್ಟಿಆರ್ ಹಾಗೂ ಕೊರಟಾಲ ಶಿವ ಕಾಂಬಿನೇಷನ್ನಲ್ಲಿ ಮೂಡಿಬಂದ ‘ಜನತಾ ಗ್ಯಾರೇಜ್’ ಸಿನಿಮಾ ಸೂಪರ್ ಹಿಟ್ ಆಯಿತು. ಈಗ ಇದೇ ಜೋಡಿ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಒಟ್ಟಿನಲ್ಲಿ ‘NTR30’ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದ್ದು, ಈ ಹಿನ್ನೆಲೆಯಲ್ಲಿ ಎನ್ಟಿಆರ್ 30ನೇ ಸಿನಿಮಾಗೆ ವಿಎಫ್ಎಕ್ಸ್ ಮೇಲ್ವಿಚಾರಕರಾಗಿ ಹಾಲಿವುಡ್ನ ಬ್ರಾಡ್ ಮಿನ್ನಿಚ್ ಅವರನ್ನು ಆಯ್ಕೆ ಮಾಡಲಾಗಿದೆ.