Vastu Tips For Bathroom: ಸ್ನಾನ ಗೃಹ ಈ ಮೂಲೆಯಲ್ಲಿದ್ದರೆ ತಾಪತ್ರಯ ಕಟ್ಟಿಟ್ಟ ಬುತ್ತಿ!
Vastu Tips For Bathroom: ಪ್ರತಿಯೊಬ್ಬರು ಮನೆಯಲ್ಲಿ ಶಾಂತಿ(Peace) ನೆಮ್ಮದಿ, ಅದೃಷ್ಟ(Luck) ಸಮೃದ್ಧಿಯಾಗಲಿ ಎಂದು ನಾನಾ ಬಗೆಯ ಪೂಜೆ (Pooja)ಪುನಸ್ಕಾರಗಳನ್ನ ಮಾಡಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು (Negative Energy)ಭಾವನೆಗಳು ಕಡಿಮೆಯಾಗಿ,ಸಕರಾತ್ಮಕತೆ(Positivity)ವೃದ್ದಿಯಾಗಬೇಕೆಂದು ಬಯಸುವುದಲ್ಲದೆ ಅದೃಷ್ಟ ಹೆಚ್ಚಿಸಲು ವಾಸ್ತು ಪ್ರಕಾರ (Vastu Tips For Luck)ಕೆಲ ಸಲಹೆಗಳನ್ನು ಕೇಳುವುದುಂಟು. ಮನೆಯಲ್ಲಿ ವಾಸ್ತು ಗಿಡ, ತುಳಸಿ,ಮನಿ ಪ್ಲಾಂಟ್ (money plant) ಹೀಗೆ ವಿಭಿನ್ನ ತಂತ್ರಗಳನ್ನು ಬಳಸುವುದು ವಾಡಿಕೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆ ಕಟ್ಟಿದರೆ ಆ ಮನೆಯಲ್ಲಿ ಸದಾ ಸುಖ-ಸಮೃದ್ಧಿಯಾಗುತ್ತದೆ ಎಂಬುದು ಬಲ್ಲವರ ಅಭಿಪ್ರಾಯ. ಹೀಗಾಗಿ, ಮನೆಯ ಪ್ರತಿ ಕೋಣೆಯ ಜೊತೆಗೆ(Vastu Tips For Bathroom) ಸ್ನಾನಗೃಹವನ್ನು ಕೂಡ ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ದಿಕ್ಕಿನಲ್ಲಿ ನಿರ್ಮಿಸುವುದು ಕೂಡ ಮುಖ್ಯವಾಗುತ್ತದೆ. ಸಮಸ್ಯೆ ಯಾರಿಗಿಲ್ಲ ಹೇಳಿ! ಪ್ರತಿಯೊಬ್ಬರಿಗೂ ಅವರದ್ದೇ ಆದ ತರಹೇವಾರಿ ಸಮಸ್ಯೆಗಳಿಂದ ಪರಿಹಾರ ಸಿಕ್ಕರೆ ಸಾಕು ಎಂದು ಪರದಾಡುತ್ತಿರುತ್ತಾರೆ. ನಮ್ಮ ಅದೆಷ್ಟೋ ತೊಂದರೆಗಳಿಗೆ ಪರಿಹಾರವೆಂಬ ಕೀಲಿಕೈ ಜ್ಯೋತಿಷ್ಯ ಶಾಸ್ತ್ರ ಹಾಗೂ ನಮ್ಮ ವಾಸ್ತುವಿನಲ್ಲಿದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.
ಜ್ಯೋತಿಷ್ಯ ಶಾಸ್ತ್ರ (Astrology) ಹಾಗೂ ವಾಸ್ತು ಸಲಹೆ (Vastu Tips) ಆರ್ಥಿಕ, ಸಾಮಾಜಿಕ ಮತ್ತು ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಅನೇಕ ಸರಳ ಮತ್ತು ಪರಿಣಾಮಕಾರಿ ಮಾರ್ಗಗಳನ್ನು ಒಳಗೊಂಡಿದೆ. ಹೀಗಾಗಿ, ನೀವು ನಿಮ್ಮ ಜೀವನ ಶೈಲಿಯಲ್ಲಿ ಕೆಲ ಸರಳ ವಿಧಾನ ಅನುಸರಿಸಿ ಪರಿಹಾರ ನೀವೇ ಕಂಡುಕೊಳ್ಳಿ. ಮನೆ ಕಟ್ಟುವಾಗ ವಾಸ್ತು ಶಾಸ್ತ್ರದ (Vastu Shastra Tips)ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಮನೆಯಲ್ಲಿ ನಾವು ಇರಿಸುವ ಪ್ರತಿ ವಸ್ತು ಕೂಡ ಮನೆಯವರ ಮೇಲೆ ಪ್ರಭಾವ ಬೀರುತ್ತದೆ. ವಾಸ್ತು ಶಾಸ್ತ್ರದ ಅನುಸಾರ, ವಾಯುವ್ಯ ದಿಕ್ಕಿನಲ್ಲಿ ಸ್ನಾನಗೃಹವಿದ್ದರೆ ಉತ್ತಮ ಎನ್ನಲಾಗಿದೆ. ಆದರೆ, ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ನಾನಗೃಹ ಇರುವುದು ಅಶುಭ ಎನ್ನಲಾಗಿದ್ದು, ಈ ದಿಕ್ಕಿನಲ್ಲಿ ಸ್ನಾನಗೃಹವಿದ್ದರೆ, ಆ ಮನೆಯಲ್ಲಿ ವಿವಿಧ ರೀತಿಯ ಸಮಸ್ಯೆ ತೊಂದರೆಗಳು ಕಾಡುತ್ತವೆ.
ಸ್ನಾನಗೃಹದ (Bathroom)ಒಳಗಿನ ಮುಖದ ಕನ್ನಡಿಯನ್ನು(Bathroom Mirror) ಯಾವಾಗಲೂ ಉತ್ತರ ಇಲ್ಲವೇ ಪೂರ್ವ ದಿಕ್ಕಿನಲ್ಲಿ ಇಡಬೇಕಾಗುತ್ತದೆ. ಇದರ ಹೊರತಾಗಿ ತಾಮ್ರದಿಂದ ಮಾಡಿದ ಯಾವುದನ್ನೂ ಸ್ನಾನಗೃಹದ ಒಳಗೆ ಇಡುವುದು ಒಳ್ಳೆಯದಲ್ಲ. ಸ್ನಾನಗೃಹದ ಸುತ್ತಲೂ ದೇವಸ್ಥಾನ (Temple)ಇಲ್ಲವೇ ದೇವರ ಗುಡಿ(Pooja Room) ಇರುವ ಕೋಣೆಯಲ್ಲಿ ಬಾತ್ ರೂಂ ಕಟ್ಟುವುದು ಒಳ್ಳೆಯದಲ್ಲ. ಮನೆ ಕಟ್ಟುವಾಗ ಈ ವಿಚಾರಗಳ ಕುರಿತು ವಿಶೇಷ ಗಮನ ಹರಿಸಬೇಕು. ಮನೆಯಲ್ಲಿ ಎಲ್ಲವೂ ಸರಿಯಾದ ದಿಕ್ಕಿನಲ್ಲಿದ್ದರೆ, ಯಾವುದೇ ಸಮಸ್ಯೆ ಎದುರಾಗದು. ಸ್ನಾನಗೃಹದಲ್ಲಿ ಸರಿಯಾದ ದಿಕ್ಕಿನಲ್ಲಿ ಸ್ನಾನ ಮಾಡುವುದು ಕೂಡ ಮುಖ್ಯ ವಿಚಾರವಾಗಿದ್ದು, ಶವರನ್ನು ಯಾವಾಗಲೂ ಉತ್ತರ ದಿಕ್ಕಿನಲ್ಲಿಡ ಬೇಕಾಗಿದ್ದು, ಬಾತ್ರೂಮ್ ಒಳಗಿನ ನಲ್ಲಿಗಳು ಉತ್ತಮ ಗುಣಮಟ್ಟದ್ದಾಗಿರಬೇಕಾಗುತ್ತದೆ. ಇವುಗಳಿಂದ ನೀರು ಹರಿಯುವುದು ಒಳ್ಳೆಯದಲ್ಲ. ಹೀಗೆ ನೀರು ಜಿನುಗಿದರೆ ಹಣದ ಪೋಲಾಗುತ್ತದೆ ಎಂಬ ನಂಬಿಕೆಯಿದೆ.
ಇದನ್ನೂ ಓದಿ: Hair and nails : ಕೂದಲು, ಉಗುರುಗಳನ್ನು ಕತ್ತರಿಸಲು ಯಾವ ದಿನ ಉತ್ತಮ?