Washing jeans : ಜೀನ್ಸ್ ಪ್ಯಾಂಟ್ ಹೇಗೆ, ಎಷ್ಟು ಬಾರಿ ತೊಳೆಯಬೇಕು ಗೊತ್ತಾ? ಇಲ್ಲಿದೆ ನೋಡಿ ಟಿಪ್ಸ್
washing jeans: ಇಂದಿನ ಆಧುನಿಕ ಯುಗದಲ್ಲಿ ಜೀನ್ಸ್ (jeans) ಒಂದು ಫ್ಯಾಷನ್ ದಿರಿಸಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಜೀನ್ಸ್ ಇಷ್ಟಪಡುತ್ತಾರೆ. ಯಾವುದೇ ಬಗೆಯ ಉಡುಪುಗಳಿಗೂ ಒಂದು ರೀತಿಯ ಸ್ಟೈಲಿಶ್ ನೋಟವನ್ನು ಜೀನ್ಸ್ ನೀಡುತ್ತದೆ. ನೀವು ಧರಿಸುವ ಉಡುಗೆ ಕುರ್ತಾ ಆಗಿರಲಿ, ಟಿ ಶರ್ಟ್ (T-shirt), ಶರ್ಟ್, ಕ್ರಾಪ್ ಟಾಪ್ (crop top) ಹೀಗೆ ಆಧುನಿಕ ಬಗೆಯ ಯಾವುದೇ ಬಟ್ಟೆಯಾದರೂ ಜೀನ್ಸ್ ಆ ಬಟ್ಟೆಯ ಲುಕ್ ಅನ್ನೇ ಬದಲಾಯಿಸಿ ಬಿಡುತ್ತದೆ. ಆದರೆ, ಜೀನ್ಸ್ ಪ್ಯಾಂಟ್‌ನ್ನು ಬೇಕಾಬಿಟ್ಟಿಯಾಗಿ ತೊಳೆದು ಹಾಕುವಂತಿಲ್ಲ. ಜೀನ್ಸ್ ಪ್ಯಾಂಟ್‌ನ್ನು ಯಾವ ರೀತಿ ತೊಳೆಯಬೇಕು (washing jeans) ಗೊತ್ತಾ? ಇಲ್ಲಿದೆ ನೋಡಿ ಟಿಪ್ಸ್.
ಡೆನಿಮ್ ಜೀನ್ಸ್ ತೊಳೆಯುವಾಗ ಈ ವಿಚಾರ ನೆನಪಿರಲಿ:
• ಈಗಿನ ಜೀನ್ಸ್‌ಗಳು ಅಲ್ಲಲ್ಲಿ ಹರಿದಿರುವ ಡಿಸೈನ್ ಹೊಂದಿರುತ್ತವೆ. ಅಂತಹ ಡಿಸೈನ್ ಹೊಂದಿರುವ ಜೀನ್ಸ್‌ನ್ನು ಕೈಯಲ್ಲೇ ತೊಳೆಯಿರಿ. ವಾಷಿಂಗ್ ಮೆಷಿನ್‌ನಲ್ಲಿ ಹಾಕಿದ್ರೆ ಅದರ ಸೂಕ್ಷ್ಮ ಎಳೆಗಳು ಹರಿಯುತ್ತವೆ.
• ನೀವು ಮೊದಲ ಬಾರಿಗೆ ಹೊಸ ಜೀನ್ಸ್ ಅನ್ನು ತೊಳೆಯುತ್ತಿದ್ದರೆ, ಯಾವಾಗಲೂ ತಣ್ಣೀರು ಮತ್ತು ಉಪ್ಪಿನಲ್ಲಿ ಅವುಗಳನ್ನು ಅದ್ದಿ ಇಡಿ.
• ಜೀನ್ಸ್‌ನಲ್ಲಿ ಕೆಲವು ಎಂಬ್ರಾಡರಿ ಡಿಸೈನ್ ಅಥವಾ ಮಿನುಗುವ ಡಿಸೈನ್‌ಗಳಿದ್ದರೆ ಅದನ್ನು ವಾಷಿಂಗ್ ಮೆಷಿನ್‌ನಲ್ಲಿ ತೊಳೆಯುವ ಬದಲು ಕೈಯಲ್ಲಿ ತೊಳೆಯಿರಿ.
• ಜೀನ್ಸ್ ತುಂಬಾ ಕೊಳಕು ಮತ್ತು ದುರ್ವಾಸನೆಯಿಲ್ಲದಿದ್ದರೆ ಅದನ್ನು ತೊಳೆಯುವ ಅಗತ್ಯವಿಲ್ಲ.
• ಹೆಚ್ಚು ಬಿಸಿಲು ನಿಮ್ಮ ಜೀನ್ಸ್‌ನ್ನುಡಲ್ ಆಗಿಸುವುದಲ್ಲದೆ ಬಟ್ಟೆಗೂ ಹಾನಿಯಾಗಿಸುತ್ತದೆ.
ಜೀನ್ಸ್ ಎಷ್ಟು ಬಾರಿ ತೊಳೆಯಬೇಕು?
ಜೀನ್ಸ್ ಅನ್ನು ಪದೇ ಪದೇ ಒಗೆಯುವುದರಿಂದ ಅದು ಹಾಳಾಗುತ್ತದೆ. ಹಾಗಾಗಿ ಇದನ್ನು ತಿಂಗಳಿಗೊಮ್ಮೆ ಅಥವಾ ಕನಿಷ್ಠ 10 ಬಾರಿ ಧರಿಸಿದ ನಂತರ ತೊಳೆಯಿರಿ. ಜೀನ್ಸ್‌ನಲ್ಲಿ ಏನಾದರೂ ಕಲೆಗಳಾಗಿದ್ದರೆ, ಕೊಳಕಾಗಿದ್ದರೆ ಆಗ ತೊಳೆಯಬಹುದು. ಆದರೆ ನಿಮ್ಮ ಡೆನಿಮ್ ಅನ್ನು ಸಾಧ್ಯವಾದಷ್ಟು ಕಡಿಮೆ ತೊಳೆಯಿರಿ. ಆಗ ಹೊಸತರಂತೆ ಇರುತ್ತದೆ.
ವಾಷಿಂಗ್ ಮೆಷಿನ್‌ನಲ್ಲಿ (washing machine) ಜೀನ್ಸ್ ತೊಳೆಯುವುದು ಹೇಗೆ ?
• ಮೊದಲು ಜೀನ್ಸ್‌ನ ಜಿಪ್ ಮತ್ತು ಬಟನ್ ಅನ್ನು ಹಾಕಿ.
• ನಂತರ ಜೀನ್ಸ್ ಅನ್ನು ಒಳಗೆ ತಿರುಗಿಸಿ.
• ಡಿಟರ್ಜೆಂಟ್ (detergent) ಅನ್ನು ಬಳಸಿ ಅಥವಾ ಬಿಳಿ ಬಟ್ಟಿ ಇಳಿಸಿದ ವಿನೆಗರ್ ಅನ್ನು ಸಹ ಬಳಸಬಹುದು.
• ನಂತರ ನಿಮ್ಮ ಜೀನ್ಸ್ ಅನ್ನು ಗಾಳಿಯಲ್ಲಿ ಒಣಗಿಸಿ. ಆದರೆ, ಡ್ರೈಯರ್‌ನಲ್ಲಿ ಒಣಗಿಸಬೇಡಿ. ಜೀನ್ಸ್‌ನ ಬಟ್ಟೆಗೆ ಹಾನಿಯಾಗುತ್ತದೆ.
• ಅಲ್ಲದೆ, ವಾಷಿಂಗ್ ಮೆಷಿನ್‌ನಲ್ಲಿ ಒಮ್ಮೆಗೆ ಎರಡು ಜೋಡಿಗಳಿಗಿಂತ ಹೆಚ್ಚು ಜೀನ್ಸ್ ಹಾಕಬೇಡಿ.
• ವಾಷಿಂಗ್ ಮೆಷಿನ್‌ನಲ್ಲಿ ಒಂದೇ ಬಣ್ಣದ ಜೀನ್ಸ್ ಅನ್ನು ಒಟ್ಟಿಗೆ ಹಾಕಿ.
ಜೀನ್ಸ್ ಅನ್ನು ಕೈಯಿಂದ ತೊಳೆಯುವುದು ಹೇಗೆ?
• ಮೊದಲು ಜೀನ್ಸ್‌ನ ಜಿಪ್ ಮತ್ತು ಬಟನ್ ಅನ್ನು ಹಾಕಿ.
• ನಂತರ ಜೀನ್ಸ್ ಅನ್ನು ಒಳಗೆ ತಿರುಗಿಸಿ.
• ಬಕೆಟ್ ನಲ್ಲಿ ನೀರು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಡಿಟರ್ಜೆಂಟ್‌ನ್ನು ಸೇರಿಸಿ.
• ನಂತರ ಜೀನ್ಸ್ ಕನಿಷ್ಠ 60 ನಿಮಿಷಗಳ ಕಾಲ ಅದರಲ್ಲಿ ನೆನೆಯಲು ಬಿಡಿ.
• ಜೀನ್ಸ್ ಅನ್ನು ಚೆನ್ನಾಗಿ ತೊಳೆಯಿರಿ. ಕೊನೆಗೆ ಜೀನ್ಸ್ ಅನ್ನು ವಾಷಿಂಗ್ ಮೆಷಿನ್‌ನಲ್ಲಿ ಹಾಕಿ ಒಣಗಿಸಿಲು ಸ್ಪಿನ್ ಮಾಡಿ.
ಇದನ್ನೂ ಓದಿ: Vastu Tips For Bathroom: ಸ್ನಾನ ಗೃಹ ಈ ಮೂಲೆಯಲ್ಲಿದ್ದರೆ ತಾಪತ್ರಯ ಕಟ್ಟಿಟ್ಟ ಬುತ್ತಿ!