Good News: ಈ ರೈತರಿಗೆ ಭರ್ಜರಿ ಸಿಹಿ ಸುದ್ಧಿ!! ಈ ರೈತರು ಪಡೆದ ಸಾಲವನ್ನು ಮರು ಪಾವತಿ ಮಾಡಬೇಕಾಗಿಲ್ಲ!!
Good News to formers : ರೈತರೇ ಗಮನಿಸಿ, ನಿಮಗೊಂದು ಭರ್ಜರಿ ಬೊಂಬಾಟ್ ಸಿಹಿ ಸುದ್ಧಿ (Good News to formers)ಇಲ್ಲಿದೆ. ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ (Agriculture Activity)ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ(PM Kisan Samman Yojana) ಮೂಲಕ ಆರ್ಥಿಕ ನೆರವನ್ನು ಕೂಡ ನೀಡುತ್ತಿರುವುದು ಗೊತ್ತಿರುವ ಸಂಗತಿ. ಈ ಯೋಜನೆಯ 13ನೇ ಕಂತು ಕಳೆದ ಫೆ.27ರಂದು ರೈತರ ಖಾತೆಗೆ ಜಮೆಯಾಗಿದೆ.
ರೈತರನ್ನು(Farmers)ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ರಾಜ್ಯ ಸಹಕಾರ ಸಂಘಗಳು ರೈತರಿಗೆ ಅಲ್ಪಾವಧಿ ಬೆಳೆ ಸಾಲದ ರೂಪದಲ್ಲಿ ಸಾಲ ಒದಗಿಸುತ್ತವೆ. ಇದೀಗ ಇಂತಹ ಸಾಲವನ್ನು ಈ ರಾಜ್ಯದ ರೈತರು ಮರುಪಾವತಿಸಬೇಕಾದ ಅವಶ್ಯಕತೆ ಇಲ್ಲ. ಈ ಪ್ರಯೋಜನ ಸಿಗುತ್ತಿರುವುದು ಪಂಜಾಬ್ ನಲ್ಲಿ(Punjab). ಮಳೆ(Rain) ಮತ್ತು ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪಡೆದಿರುವ ಸಾಲ ಮರುಪಾವತಿಗೆ ತಡೆ ನೀಡುವುದಾಗಿ ಪಂಜಾಬ್ ಸಿಎಂ ಭಗವಂತ ಮಾನ್(Bhagwant Mann) ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ಸುರಿದ ಅಕಾಲಿಕ ಮಳೆಯ ಹಿನ್ನೆಲೆ ರೈತರ ಬೆಳೆ ಹಾನಿಯಾದ ಹಿನ್ನೆಲೆ ರೈತರಿಗೆ (Farmers) ಆಗಿರುವ ನಷ್ಟದ ಪ್ರಮಾಣವನ್ನು ಅಂದಾಜು ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಈ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಕೈಗೊಂಡಿರುವ ಈ ಕ್ರಮದಿಂದ ರೈತರು ಕೊಂಚ ಮಟ್ಟಿಗೆ ರಿಲೀಫ್ ಆಗೋದು ಗ್ಯಾರಂಟಿ. ಇತ್ತೀಚಿಗೆ ಸುರಿದ ಅಕಾಲಿಕ ಮಳೆಗೆ ಸಂಭವಿಸಿದ ಹಾನಿಯನ್ನು ಪರಿಶೀಲನೆ ನಡೆಸಲು ಕೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇದರ ಜೊತೆಗೆ ಒಂದು ವಾರದೊಳಗಾಗಿ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಹೀಗಾಗಿ , ರೈತರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ರೈತರು ಈಗ ಆದ ನಷ್ಟದಿಂದ ಚೇತರಿಸಿಕೊಂಡ ಬಳಿಕ ಈ ಹಣವನ್ನು ಪಾವತಿ ಮಾಡಬಹುದು ಎಂದು ಮಾನ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಇದಲ್ಲದೇ, ಮುಂದಿನ ಬೆಳೆ ಹಂಗಾಮಿಗೆ ಸಾಲ ಪಡೆಯಲು ಈ ರೈತರು ಅರ್ಹರಾಗುತ್ತಾರೆ. ರಾಜ್ಯ ಸಹಕಾರ ಸಂಘಗಳು ರೈತರಿಗೆ ಅಲ್ಪಾವಧಿ ಬೆಳೆ ಸಾಲದ ರೂಪದಲ್ಲಿ ಸಾಲ ನೀಡುತ್ತವೆ.