Hardeep singh Puri : ‘ಕುದುರೆ ರೇಸ್ ನಲ್ಲಿ ಓಡಲು ನೀವು ಕತ್ತೆಯನ್ನು ಕರ್ಕೊಂಡ್ ಬಂದಿದ್ದೀರಿ’: ರಾಹುಲ್ ಗಾಂಧಿಯನ್ನು ಕತ್ತೆಗೆ ಹೋಲಿಸಿದ ಕೇಂದ್ರ ಸಚಿವ ಪುರಿ ವ್ಯಂಗ್ಯ

Hardeep singh Puri :ಕೇಂದ್ರ ಮಂತ್ರಿಯೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಕತ್ತೆಗೆ (Rahul Gandhi) ಹೋಲಿಸಿದ್ದಾರೆ. ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಕೋರ್ಟ್ ನಿಂದ ಶಿಕ್ಷೆಗೆ ಗುರಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವ ಹಿನ್ನೆಲೆಗೆ ಸಂಬಂಧಪಟ್ಟಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

 

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep singh Puri) ಪ್ರತಿಕ್ರಿಯಿಸಿ, ನೀವು ಕುದುರೆಯ ಓಟ ನಡೆಸಲು ಕತ್ತೆಯನ್ನು ತರುತ್ತಿದ್ದೀರಿ, ಅವ್ರು ನಿಜವಾಗಿಯೂ ಗಂಭೀರವಾದ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಅವರ ಬಗ್ಗೆ ಭಾರತದ ಜನ ತೀರ್ಮಾನಿಸುತ್ತಾರೆ. ನ್ಯಾಯಾಲಯದ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿ. ಇಲ್ಲಿ ನೀವು ಮಹಾಭಾರತ ಮತ್ತು ಸಾವರ್ಕರ್ ಅವರ ಹೆಸರುಗಳನ್ನು ಏಕೆ ಎಳೆದು ತರುತ್ತೀರಿ ?” ಎಂದು ಪುರಿಯವರು ಕೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು, “ಯಾವುದೇ ವ್ಯಕ್ತಿ ದೇಶದಿಂದ ಹೊರಗೆ ಹೋದರೆ ಅವರಿಗೆ ಮಾತನಾಡುವ ಸ್ವಾತಂತ್ರ್ಯವಿದೆ ಆದರೆ ಆ ಸ್ವಾತಂತ್ರ್ಯದ ಜೊತೆಗೆ ಜವಾಬ್ದಾರಿಯ ಪ್ರಜ್ಞೆಯ ಅವಶ್ಯಕತೆಯಿದೆ. ನಾವು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಹೊಂದಿರುವ ದೇಶದಲ್ಲಿದ್ದೇವೆ. ಆದರೆ ರಾಹುಲ್ ಗಾಂಧಿಯವರು ಇಂಗ್ಲೆಂಡಿಗೆ ಹೋಗಿ ಭಾರತೀಯ ಪ್ರಜಾಪ್ರಭುತ್ವವು ಮೂಲಭೂತ ರಚನೆಯ ಮೇಲೆ ವಾಗ್ದಾಳಿ ನಡೆಸುತ್ತಾರೆ, ಕೆಟ್ಟ ಮಾತುಗಳನ್ನು ಹೇಳುತ್ತಾರೆ ಎಂದರು. ತಕ್ಷಣ ಅವರು ತಮ್ಮ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಇಂದಿರಾಗಾಂಧಿ ಆಡಳಿತದಲ್ಲಿ ನಾಗರಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದ್ದನ್ನು ನೆನಪಿಸಿದ ಪುರಿ ಅವರು ಕಾಂಗ್ರೆಸ್‌ ಅನ್ನು ತೀಕ್ಷ್ಣ ಶಬ್ದಗಳಿಂದ ನೀಡಿದರು.

ಚೀನಾದ ಬೆಲ್ಟ್ ಮತ್ತು ರೋಡ್ ಕಾರ್ಯಕ್ರಮವನ್ನು ರಾಹುಲ್ ಗಾಂಧಿ ದೂರದೃಷ್ಟಿಯ ಹೆಜ್ಜೆ ಎಂದು ಶ್ಲಾಘಿಸುತ್ತಾರೆ. “ಚೀನಾದ BRI ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಹೋಗುತ್ತದೆ ಎಂದು ಅವರಿಗೆ ತಿಳಿದಿದೆಯೇ, ಕಾನೂನುಬದ್ಧವಾಗಿ ಚುನಾಯಿತ ರಾಜ್ಯ ಸರ್ಕಾರಗಳನ್ನು ಅಮಾನತುಗೊಳಿಸಲು ಮತ್ತು ವಜಾಗೊಳಿಸಲು ಅವರ ಅಜ್ಜಿ 356 ನೇ ವಿಧಿಯನ್ನು 150 ಬಾರಿ ಅನ್ವಯಿಸಿದ್ದರು ಎಂದಿದ್ದಾರೆ ಮಂತ್ರಿ ಪುರಿ ಅವರು.
ಸಾವರ್ಕರ್ ಅವರು ಬ್ರಿಟಿಷ್ ವಸಾಹತುಶಾಹಿಗಳ “ಕ್ಷಮಾಪಣೆ” ಮತ್ತು ಬಿಜೆಪಿ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಅವರು ಎಂದಿಗೂ ವಿಷಾದ ವ್ಯಕ್ತಪಡಿಸುವುದಿಲ್ಲ ಎಂದು ರಾಹುಲ್ ಗಾಂಧಿಯವರ ಸಮರ್ಥನೆಗೆ ಠಾಕೂರ್ ಪ್ರತಿಕ್ರಿಯಿಸಿದ್ದರು.

ಮೊನ್ನೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, ರಾಹುಲ್ ಅವರು ತನ್ನ “ಅತ್ಯುತ್ತಮ ಕನಸಿನಲ್ಲೂ” ವೀರ್ ಸಾವರ್ಕರ್ ಆಗಲು ಸಾಧ್ಯವಿಲ್ಲ, ಏಕೆಂದರೆ ಅದಕ್ಕೆ ಬಲವಾದ ನಿರ್ಣಯ ಮತ್ತು ದೇಶದ ಬಗ್ಗೆ ಪ್ರೀತಿಯ ಅಗತ್ಯವಿರುತ್ತದೆ ಎಂದಿದ್ದರು.

Leave A Reply

Your email address will not be published.