Actress Ramya: ಆತ್ಮಹತ್ಯೆ ಮಾಡಬೇಕೆಂದು ಹೊರಟ ರಮ್ಯಾರ ಮನಸ್ಸನ್ನು ಬದಲಾಯಿಸಿದ್ದೇ ಆ ಓರ್ವ ವ್ಯಕ್ತಿ! ಅಷ್ಟಕ್ಕೂ ಸಾವಿಗೆ ನಿರ್ಧಾರ ಏಕೆ ಮಾಡಿದ್ದು?

Actress Ramya: ಸ್ಯಾಂಡಲ್ ವುಡ್ ಕ್ವೀನ್ ಮೋಹಕ ನಟಿಯಾಗಿ ಬಣ್ಣದ ಲೋಕದಲ್ಲಿ ತನ್ನದೇ ಛಾಪು ಮೂಡಿಸಿದ ನಟಿ ರಮ್ಯಾ(Ramya) ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡು ಸಾಕಷ್ಟು ಮಂದಿ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಅಷ್ಟೆ ಏಕೆ ಇತ್ತೀಚಿಗಷ್ಟೇ ವೀಕೆಂಡ್ ವಿತ್ ರಮೇಶ್(Weekend With Ranesh) ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಕೂಡ ಸ್ಥಾನ ಪಡೆದಿದ್ದಾರೆ. ಆದರೆ, ಇದೀಗ, ನಟಿ ರಮ್ಯಾ(Actress Ramya) ಅವರ ವೈಯಕ್ತಿಕ ಜೀವನದ ಕುರಿತ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.

 

ಜೀವನ ಎಂದ ಮೇಲೆ ಏರಿಳಿತಗಳು ಸಹಜ. ಪ್ರತಿಯೊಬ್ಬ ಸಾಧಕರು ಕೂಡ ಕಷ್ಟದ ಹಾದಿಯನ್ನ ದಾಟಿಯೇ ಮುಂದೆ ಬಂದಿರುತ್ತಾರೆ. ತಮ್ಮ ಜೀವನದ ಕಹಿ ನೆನಪುಗಳ ಬಗ್ಗೆ ಕೆಲವರು ಹೇಳ ಬಯಸಿದರೆ ಮತ್ತೆ ಕೆಲವರು ಅದೊಂದು ಕೆಟ್ಟ ಕನಸು ಎಂದುಕೊಂಡು ಮರೆತು ಮುಂದೆ ಸಾಗಿ ಬಿಡುತ್ತಾರೆ. ಅದೇ ರೀತಿ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟಿ ರಮ್ಯಾ ತನ್ನ ಜೀವನದಲ್ಲಿ ಎದುರಿಸಿದ ಅಡೆತಡೆಗಳ ಬಗ್ಗೆ ಕೂಡ ಮಾತನಾಡಿದ್ದಾರೆ. ಇದೇ ವೇಳೆ, ಜಗತ್ತಿಗೆ ತಿಳಿಯದ ವಿಚಾರವೊಂದನ್ನ ತಿಳಿಸಿದ್ದಾರೆ.

ನಟಿ ರಮ್ಯಾ(Actress Ramya) ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಂಗ್ಲೀಷ್ ಭಾಷೆಯಲ್ಲಿ ಮಾತಾಡಿದ್ದು ಕೇಳಿ ಹೆಚ್ಚಿನ ಮಂದಿ ಟ್ರೊಲ್ ಮಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ಬೆಳೆದು ಇಂಗ್ಲಿಷ್ ಹೆಚ್ಚು ಬಳಕೆ ಮಾಡಿದ್ದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಏನೇ ಹೇಳಿ, ಕನ್ನಡಿಗರು ವಿಶಾಲ ಹೃದಯದವರು. ಹೀಗಾಗಿ, ನಟಿಯ ಮೇಲೆ ಅಸಮಾಧಾನ ಇದ್ದರೂ ಕೂಡ ಅವರ ಮೇಲೆ ಅಷ್ಟೇ ಅಭಿಮಾನ ಕೂಡ ಇದೆ. ಈ ನಡುವೆ, ತಮ್ಮ ಜೀವನದ ಮುಖಪುಟಗಳ ತಿರುವುತ್ತಾ ತನ್ನ ರಾಜಕೀಯ ಜೀವನದ ಪಯಣದ ಕುರಿತು ಕೂಡ ರಮ್ಯಾ ಮಾಹಿತಿ ಹಂಚಿಕೊಂಡಿದ್ದಾರೆ. ನಟಿ ರಮ್ಯಾ ಮಂಡ್ಯ (Mandya) ಲೋಕಸಭಾ ಕ್ಷೇತ್ರದ ಮೂಲಕ ಲೋಕಸಭಾ ಸದಸ್ಯರಾಗಿ ಅವರು ಪಾರ್ಲಿಮೆಂಟ್ ಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು ಎನ್ನುವುದು ಹೆಚ್ಚಿನವರಿಗೆ ತಿಳಿದಿರುವ ವಿಚಾರ.

ರಾಜಕೀಯ(Politics) ಎನ್ನುವ ಒಂದು ದೊಡ್ಡ ರಣಾಂಗಣದಲ್ಲಿ ಅಡಿಯಿಟ್ಟ ಸಂದರ್ಭ ತನ್ನ ತಂದೆಯನ್ನು ಕಳೆದುಕೊಂಡ ರಮ್ಯಾ(Ramya) ಅವರ ಜೀವನದಲ್ಲಿ ದೊಡ್ಡ ಆಘಾತವನ್ನ ತಂದೊಡಿತ್ತು. ತಂದೆಯ ಅಗಲಿಕೆಯಿಂದ ತುಂಬಾ ದುಃಖಿತರಾದ ರಮ್ಯ ಒಂದೆಡೆ ರಾಜಕೀಯ ಜೀವನದ ಸವಾಲುಗಳು ಮತ್ತೊಂದೆಡೆ ತಂದೆಯ ಸಾವು ನಟಿಯ ಜೀವನದಲ್ಲಿ ಗಂಭೀರ ಪರಿಣಾಮ ಬೀರಲು ಕಾರಣವಾಯಿತು. ಈ ನೋವಿಂದ ರಮ್ಯಾ(Ramya) ಅವರಿಗೆ ಹೊರ ಬರಲಾಗದೆ ಸಾವಿಗೆ ಕೊರಲೊಡ್ಡುವ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಕೂಡ ಮಾಡಿದ್ದರಂತೆ. ಇಲ್ಲೊಂದು ಅಚ್ಚರಿಯ ಸಂಗತಿಯಿದೆ. ತುಂಬಾ ಕುಗ್ಗಿದ್ದ ರಮ್ಯಾ ಅವರಿಗೆ ಆಸರೆಯಾಗಿ ನಿಂತಿದ್ದು ಒಬ್ಬ ವ್ಯಕ್ತಿ!! ಆ ವ್ಯಕ್ತಿ ಯಾರು ಗೊತ್ತಾ? ಅದು ಕಾಂಗ್ರೆಸ್ ಪಕ್ಷದ ಮುಖಂಡ ಆಗಿರುವಂತಹ ರಾಹುಲ್ ಗಾಂಧಿ(Rahul Gandhi) ಎಂಬ ವಿಚಾರ ಯಾರಿಗೂ ತಿಳಿದಿಲ್ಲ.ಸದ್ಯ ,ರಮ್ಯಾ(Ramya) ಅವರು ಕಾಂಗ್ರೆಸ್ ಪಕ್ಷದ ನ್ಯಾಷನಲ್ ಸೋಶಿಯಲ್ ಮೀಡಿಯಾ ಹೆಡ್ ಆಗಿ ಕೂಡ ಕಾರ್ಯನಿರ್ವಹಿಸುತ್ತಿದ್ದು, ತಾನು ಇಂದು ಜೀವಂತವಾಗಿರಲು ರಾಹುಲ್ ಗಾಂಧಿಯವರು ಕಾರಣ ಎಂದು ತಮ್ಮ ಜೀವನದ ಕಹಿ ನೆನಪುಗಳ ಬಗ್ಗೆ ಮೆಲುಕು ಹಾಕುತ್ತಾ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಮ್ಯ ಅವರು ತನ್ನ ಜೀವನದ ನೆನಪುಗಳ ಮೆಲುಕು ಹಾಕುತ್ತಾ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Kabza in OTT : ಉಪೇಂದ್ರ-ಸುದೀಪ್- ಶಿವರಾಜ್ ಕುಮಾರ್ ಅಭಿನಯದ ‘ಕಬ್ಜ’ ಸಿನಿಮಾ ಒಟಿಟಿ ರಿಲೀಸ್ ಡೇಟ್ ಫಿಕ್ಸ್!

Leave A Reply

Your email address will not be published.