Aadhar-Ration Card : ಪಡಿತರ ಚೀಟಿದಾರರಿಗೆ ಗುಡ್‌ನ್ಯೂಸ್‌!

Aadhar -Ration Card: ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಕೇಂದ್ರ ಸರ್ಕಾರ (Central Government) ಪಡಿತರ ವಿತರಣೆಗೆ(Ration Card) ಸಂಬಂಧಿಸಿದಂತೆ ದೇಶದಾದ್ಯಂತ ಹೊಸ ನಿಯಮ ಜಾರಿಗೆ(Ration Card Big Update) ತಂದಿದ್ದು, ಈ ನಡುವೆ ಪಡಿತರ ಚೀಟಿ ಫಲಾನುಭವಿಗಳಿಗೆ ಮುಖ್ಯ ಮಾಹಿತಿಯೊಂದು ಹೊರಬಿದ್ದಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಡಿತರ ಚೀಟಿ ಮೂಲಕ ಸಬ್ಸಿಡಿಯಲ್ಲಿ ಅಕ್ಕಿ ಮತ್ತು ಗೋಧಿಯಂತಹ ಅಗತ್ಯ ಪದಾರ್ಥಗಳನ್ನು ನೀಡುತ್ತಿದೆ. ಕೇಂದ್ರವು ಈಗಾಗಲೇ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದನ್ನ ಕಡ್ಡಾಯಗೊಳಿಸಿದ್ದು, ಇದರ ಜೊತೆಗೆ ಪಡಿತರ ಚೀಟಿಗೆ ಆಧಾರ್ ಕಾರ್ಡ್(Aadhar Card) ಲಿಂಕ್ ಮಾಡಲು ಕೇಂದ್ರ ಸರ್ಕಾರ(Central Government) ಈಗಾಗಲೇ ಘೋಷಣೆ ಮಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೇಂದ್ರವು ಪಡಿತರ ವಂಚನೆಗಳನ್ನ ತಡೆಯಲು ನಿಬಂಧನೆಯನ್ನು ತಂದಿದ್ದು, ನಕಲಿ ಪಡಿತರ ಚೀಟಿಗಳನ್ನ ಗುರುತಿಸುವುದರ ಜೊತೆಗೆ ನಿಜವಾದ ಅರ್ಹತೆ ಇರುವವರಿಗೆ ಮಾತ್ರ ಪ್ರಯೋಜನವನ್ನ ನೀಡಬಹುದು ಎಂದು ಕೇಂದ್ರವು ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗಾದ್ರೆ, ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್( Aadhar -Ration Card Link)ಮಾಡೋದು ಹೇಗೆ?ಎಂಬ ಮಾಹಿತಿ ಇಲ್ಲಿದೆ ನೋಡಿ.

ನೀವು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಪಡಿತರ ಕಾರ್ಡ್ ಮತ್ತು ಆಧಾರ್ ಕಾರ್ಡ್ (Aadhar -Ration Card)ಅನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡಬಹುದಾಗಿದೆ. ನೀವು ಆಫ್‌ಲೈನ್ ಮೋಡ್‌ನಲ್ಲಿ (Offline Mode) ನಿಮ್ಮ ಪಡಿತರ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಲು ಇಚ್ಛಿಸಿದರೆ, ಮನೆಯವರ ಎಲ್ಲಾ ಆಧಾರ್ ಕಾರ್ಡ್‌ಗಳ ಜೆರಾಕ್ಸ್, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್, ಪಾಸ್‌ಪೋರ್ಟ್ ಗಾತ್ರದ ಫೋಟೋ ಇತ್ಯಾದಿಗಳನ್ನ ಪಡಿತರ ಕಚೇರಿಗೆ ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮಾಲೀಕರಿಗೆ ಅಥವಾ ಪಡಿತರ ಅಂಗಡಿಗೆ ಒದಗಿಸಿದರೆ ಸಾಕಾಗುತ್ತದೆ.

ಒಂದು ವೇಳೆ, ನೀವು ಆನ್ಲೈನ್ ಮೂಲಕ ಲಿಂಕ್ ಮಾಡುವುದಾದರೆ ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು. ಮೊದಲು ರಾಜ್ಯಗಳ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಪೋರ್ಟಲ್‌ಗೆ ಹೋಗಬೇಕು. ಆ ಬಳಿಕ, ಆಧಾರ್ ಕಾರ್ಡ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ಮುಂತಾದ ವಿವರಗಳನ್ನು ನೀಡಬೇಕು. ನಂತರ, ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಬೇಕಾಗಿದ್ದು, ಈ ಮೂಲಕ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಬಹುದಾಗಿದೆ.

ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನಾಂಕ ಎಂದು ನಿಗದಿ ಮಾಡಿತ್ತು. ಆದರೆ, ಇತ್ತೀಚೆಗೆ ಸರ್ಕಾರ ಈ ಗಡುವನ್ನ ವಿಸ್ತರಿಸುವ ತೀರ್ಮಾನವನ್ನು ಪ್ರಕಟಿಸಿದ್ದು, ಆಧಾರ್, ಪಡಿತರ ಚೀಟಿ ಜೋಡಣೆ ಗಡುವು ಜೂನ್ 30ರವರೆಗೆ ವಿಸ್ತರಣೆಯಾಗಲಿದ್ದು, ಈ ಕುರಿತು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ.

Leave A Reply

Your email address will not be published.