CUET : ಸಿಇಟಿ ಬಗ್ಗೆ ಗೊತ್ತಿರುವವರಿಗೆ ಸಿಯುಇಟಿಯ ಬಗ್ಗೆ ಗೊತ್ತಿದೆಯೇ? ಸೆಕೆಂಡ್‌ ಪಿಯುಸಿ ವಿದ್ಯಾರ್ಥಿಗಳಿಗೊಂದು ಮಹತ್ವದ ಮಾಹಿತಿ!

CUET: ಶಿಕ್ಷಣ(Education) ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪಿಯುಸಿ ಮುಗಿಯುತ್ತಿದ್ದಂತೆ ಮುಂದೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳಿಗೆ ಪೋಷಕರಿಗೆ ಕಾಡುವುದು ಸಹಜ. ನೀಟ್, ಜೆಇಇ, ಸಿಇಟಿ ಬಗ್ಗೆ ಮಾಹಿತಿ ಮತ್ತು ಆಸಕ್ತಿ ಹೊಂದಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಯುಇಟಿ ಬಗ್ಗೆ ಮಾಹಿತಿ ತಿಳಿದಿಲ್ಲ ಎಂದರೆ ತಪ್ಪಾಗದು.

 

ದ್ವಿತೀಯ ಪಿಯುಸಿ(Second Puc) ನಂತರ ಅನೇಕ ಸ್ಪರ್ಧಾತಕ ಪ್ರವೇಶಗಳಿದ್ದು, ಅದರಲ್ಲಿ ಹೆಚ್ಚಿನ ಪಾಲು ವಿಜ್ಞಾನ ವಿದ್ಯಾರ್ಥಿಗಳಿಗೆ ಮೀಸಲಾಗಿದೆ ಎಂಬ ಆರೋಪವನ್ನು ಕೇಳಿರಬಹುದು. ಆದರೆ, ಸಿಯುಇಟಿ ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸುತ್ತದೆ. ಈ ಮೂರು ವಿಭಾಗಗಳಲ್ಲಿ ಕೂಡ ಪದವಿ ಕೋರ್ಸುಗಳ ಜೊತೆಗೆ ಅನೇಕ ಸಮಗ್ರ ಪದವಿಗಳಿಗೂ (ಇಂಟೆಗ್ರೇಟೆಡ್​​ ಡಿಗ್ರಿ) ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳ ನೆರವಿಗಾಗಿ ಏಕೀಕರಿಸಲು ಶಿಕ್ಷಣ ಸಚಿವಾಲಯ ಯುಜಿಸಿಯೊಂದಿಗೆ ಸೇರಿ ಸಾಮಾನ್ಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ (CUET)(ಸಿಯುಇಟಿ) ಎಂಬ ವಿನೂತನ ಪರೀಕ್ಷೆಯನ್ನು ಪರಿಚಯಿಸಿದೆ.ಇದು ಭಾರತದ ಎಲ್ಲಾ ಕೇಂದ್ರೀಯ ಮತ್ತು ಪ್ರಖ್ಯಾತ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸುವ ಸಾಮಾನ್ಯ ಪರೀಕ್ಷೆಯಾಗಿದೆ.

ಈ ಪ್ರಕ್ರಿಯೆಯ ಆರಂಭದಲ್ಲಿ 90 ವಿಶ್ವವಿದ್ಯಾಲಯಗಳು ಭಾಗಿಯಾಗಿದ್ದು, ಈ ಶೈಕ್ಷಣಿಕ ವರ್ಷದಲ್ಲಿ 200ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಸಿಯುಇಟಿಗೆ ತಮ್ಮ ಸಹಭಾಗಿತ್ವವನ್ನು ಒದಗಿಸಿವೆ. ಇದರಿಂದಾಗಿ, ದೇಶದ ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಪದವಿಗಾಗಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಸಿಯುಇಟಿ(CUET) ಅತ್ಯಂತ ಮುಖ್ಯ ಪರೀಕ್ಷೆಯಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಸಿಯುಇಟಿ ಎಂಬ ಏಕರೂಪ ಪರೀಕ್ಷೆಯನ್ನು(Exams) ಪರಿಚಯಿಸಿರುವ ಹಿನ್ನೆಲೆ ಪರೀಕ್ಷೆಯ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಪ್ರಾಮುಖ್ಯತೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ವಿಶೇಷವಾಗಿ ವಿದ್ಯಾರ್ಥಿಗಳಿಗೆ(Students) ಸರಳ ಹಾಗೂ ಸುಲಭ ವಿಧಾನವಾಗಲಿದೆ. ಎಲ್ಲ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಗಮನಿಸಬೇಕಾದ ವಿಚಾರ ಇಲ್ಲಿದೆ.

ಈ ವರ್ಷದ ಸಿಯುಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್ 30 ಕೊನೆಯ ದಿನವಾಗಿದ್ದು, ವಿಶ್ವವಿದ್ಯಾನಿಲಯಗಳು ಹಾಗೂ ಕೋರ್ಸುಗಳ ಪಟ್ಟಿ, ಹತ್ತನೇ ತರಗತಿ ಹಾಗೂ ಪಿಯುಸಿ ರಿಜಿಸ್ಟ್ರೇಶನ್ ನಂಬರ್, ಸ್ಯಾನ್ ಮಾಡಿದ ಭಾವಚಿತ್ರ ಹಾಗೂ ಸಹಿ ಅರ್ಜಿ ಭರ್ತಿಮಾಡಲು ಅಗತ್ಯವಾದ ದಾಖಲೆಯಾಗಿದೆ. ಐಸಿಎಆರ್ (ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್) ಮಾನ್ಯತೆ ಪಡೆದ ದೇಶದ ಕೇಂದ್ರ / ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪದವಿಗೆ ಪ್ರವೇಶ ಬಯಸುವವರು ಸಿಯುಇಟಿ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿದೆ.

ಎಲ್ಲ ವಿದ್ಯಾರ್ಥಿಗಳಿಗೂ ಸಿಬಿಎಸ್ಸಿ ಶಾಲೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಅವಕಾಶ ದೊರೆಯದ ಹಿನ್ನೆಲೆ, ಸಿಯುಇಟಿ ಪರೀಕ್ಷೆಯಲ್ಲಿ ಕೇವಲ ಎನ್ಸಿಇಆರ್ಟಿ ಸಿಲೆಬಸ್ ಗಳಿಗೆ ಮಾನ್ಯತೆ ನೀಡಲಾಗಿ, ಯಾವುದೇ ಬೋರ್ಡಿನ ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತದೆ. ಸಿಯುಇಟಿ ಪರೀಕ್ಷೆಯಿಂದ ಏಕದಿನ ಪರೀಕ್ಷೆಯ ಜೊತೆಗೆ ಒಂದೇ ಶುಲ್ಕದಿಂದಾಗಿ ಆರ್ಥಿಕ ಹಿಂಜರಿತಕ್ಕೂ ಬ್ರೇಕ್ ನೀಡಿದಂತೆ ಆಗಲಿದೆ. ಭಾರತದಾತ್ಯಂತ ಪರೀಕ್ಷಾ ಕೇಂದ್ರಗಳು ಸಹ ಏಕ ಸಮಯದಲ್ಲಿ ಕಾರ್ಯನಿರ್ವಹಿಸುವುದರಿಂದ ವಿದ್ಯಾರ್ಥಿಗಳಿಗೆ ಪ್ರಯಾಣದ ಖರ್ಚು ತಗುತ್ತದೆ. ಹೀಗಾಗಿ,ದೆಹಲಿ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆ ಬರೆಯಲು ದೂರ ಅಲೆದಾಡಬೇಕಾದ ಅವಶ್ಯಕತೆ ಇಲ್ಲ. ತಮ್ಮ ಊರಿನಲ್ಲೇ ಪರೀಕ್ಷೆ ಬರೆಯಬಹುದು.

ಸಿಯುಇಟಿ ಪರೀಕ್ಷೆಯನ್ನು ಪರಿಚಯಿಸಿದ ಬಳಿಕ, ಬುಲೆಟಿನ್ನಲ್ಲಿ ಪ್ರವೇಶ ಪರೀಕ್ಷೆ, ದಿನಾಂಕ, ಪಠ್ಯಕ್ರಮ, ಪ್ರಶ್ನೆಗಳ ಕುರಿತ ಮಾಹಿತಿಯನ್ನೂ ನೀಡಲಾಗುತ್ತದೆ. ಹೀಗಾಗಿ, ವಿದ್ಯಾರ್ಥಿಯು ಕೇಂದ್ರೀಯ ವಿಶ್ವವಿದ್ಯಾಲಯಗಳ ಹಾಗೂ ಅವುಗಳು ಒದಗಿಸುವ ಕೋರ್ಸ್ ಗಳ ಪಟ್ಟಿಯೊಂದಿಗೆ ತನ್ನ ಅರ್ಹತೆ ಹಾಗೂ ಇಚ್ಛೆಯ ಅನುಸಾರ ಪರೀಕ್ಷೆ ಪಡೆಯಬಹುದು. ಪರೀಕ್ಷೆಗಳು ಪ್ರತ್ಯೇಕವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಲವು ವಿಶ್ವವಿದ್ಯಾಲಯಗಳಲ್ಲಿ ಒಎಂಆರ್ (OMR) ಬಳಕೆ ಮಾಡಲಾಗುತ್ತಿತ್ತು. ಹಲವು ವಿಶ್ವವಿದ್ಯಾಲಯಗಳು ಪರೀಕ್ಷೆಯನ್ನು ಲಿಖಿತ ಮಾದರಿಯಲ್ಲಿ ನಡೆಸುತ್ತಿದ್ದುದರಿಂದ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಗಳ ಸ್ವರೂಪವನ್ನ ಅರ್ಥೈಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಸಿಯುಇಟಿ ಪರೀಕ್ಷೆಯನ್ನು ಎನ್ಟಿಎ(National Testing Agency) ನಡೆಸುತ್ತಿದ್ದು ಸಂಪೂರ್ಣ ಗಣಕೀಕೃತವಾಗಿ ವಿದ್ಯಾರ್ಥಿ ಸರಿಯಾದ ಸಮಯದಲ್ಲಿ ಲಾಗಿನ್ ಆದಾಗ ಮಾತ್ರ ಪ್ರಶ್ನೆಪತ್ರಿಕೆ ಕಂಡುಬರುತ್ತದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ಕುರಿತ ಮಾಹಿತಿ ತಿಳಿದು ಈ ಕೋರ್ಸ್ ಪಡೆಯಬಹುದು.ಈ ವರ್ಷದ ಸಿಯುಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್ 30 ಕೊನೆಯ ದಿನವಾಗಿದೆ.

ಇದನ್ನೂ ಓದಿ: CPRI Recruitment 2023: ಪದವೀಧರರಿಗೆ ನಿಮಗಿದೋ ಉದ್ಯೋಗಾವಕಾಶ; ಮಾಸಿಕ 1.12 ಲಕ್ಷ ರೂ. ವೇತನ, ಈ ಕೂಡಲೇ ಅರ್ಜಿ ಸಲ್ಲಿಸಿ

Leave A Reply

Your email address will not be published.