Nitin Gadkari Announcement on Vehicle Parking : ಈ ರೂಲ್ಸ್‌ ಫಾಲೋ ಮಾಡಿದರೆ ನಿಮಗೆ ದೊರೆಯುತ್ತೆ ರೂ.500- ನಿತಿನ್‌ ಗಡ್ಕರಿ ಘೋಷಣೆ

Nitin Gadkari Announcement on Vehicle Parking: ಟ್ರಾಫಿಕ್ ರೂಲ್ಸ್ ಬ್ರೇಕ್ (traffic rules) ಮಾಡೋರು ಅದೆಷ್ಟೋ ಜನ. ಈ ಜನರಿಗಾಗಿ ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಹೊಸ ಕ್ರಮ ಕೈಗೊಂಡಿದ್ದಾರೆ. ಹೌದು, ಸಚಿವರು ರಸ್ತೆಗಳಲ್ಲಿ ತಪ್ಪಾಗಿ ನಿಲ್ಲಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಿದ್ದಾರೆ (Nitin Gadkari Announcement on Vehicle Parking).

 

ಆದರೆ ಇದು ಕಠಿಣ ಕ್ರಮವಲ್ಲ. ನಿಮಗೂ ಸಚಿವರ ಘೋಷಣೆ ಕೇಳಿ ಶಾಕ್ ಆಗಬಹುದು. ರಸ್ತೆಯಲ್ಲಿ ತಪ್ಪಾಗಿ ಪಾರ್ಕ್ (Vehicle Parking) ಮಾಡಿರುವ ವಾಹನದ ಚಿತ್ರ ಕಳುಹಿಸಿದರೆ ರೂ.500 ಬಹುಮಾನವನ್ನು ನೀಡುತ್ತೇವೆ ಎಂದು ನಿತಿನ್‌ ಗಡ್ಕರಿ ಘೋಷಣೆ ಮಾಡಿದ್ದಾರೆ.

“ತಪ್ಪಾಗಿ ವಾಹನ ಪಾರ್ಕ್ ಮಾಡುವ ಅಭ್ಯಾಸವನ್ನು ನಿಲ್ಲಿಸುವ ಉದ್ದೇಶದಿಂದ ಈ ನಿಯಮ ತರಲಾಗುತ್ತದೆ. ನಾನು ಕಾನೂನು ತರಲಿದ್ದೇನೆ. ಅದರ ಪ್ರಕಾರ ರಸ್ತೆಬದಿಯಲ್ಲಿ ವಾಹನವನ್ನು ನಿಲ್ಲಿಸುವವರಿಗೆ, ತಪ್ಪಾಗಿ ಪಾರ್ಕ್ ಮಾಡಿದವರಿಗೆ 1,000 ರೂ.ದಂಡ ವಿಧಿಸಲಾಗುತ್ತದೆ. ತಪ್ಪಾಗಿ ನಿಲ್ಲಿಸಿದ ವಾಹನದ ಚಿತ್ರವನ್ನು ಕಳುಹಿಸಿದ ವ್ಯಕ್ತಿಗೆ 500 ರೂಪಾಯಿ ಬಹುಮಾನವನ್ನು ನೀಡಲಾಗುತ್ತದೆ” ಎಂದು ಹೇಳಿದ್ದಾರೆ.

“ಜನರು ಲಕ್ಷ ಕೋಟಿ ಖರ್ಚು ಮಾಡಿ ವಾಹನ ಖರೀದಿಸುತ್ತಾರೆ. ಆದರೆ ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಾರೆ. ನನ್ನ ಅಡುಗೆಯವರು ನಾಗ್ಪುರದಲ್ಲಿ ಎರಡು ಹಳೆಯ ಕಾರುಗಳನ್ನು ತೆಗೆದುಕೊಂಡಿದ್ದಾರೆ. ಇಂದು ನಾಲ್ಕು ಜನರ ಕುಟುಂಬವು ಆರು ಕಾರುಗಳನ್ನು ಖರೀದಿ ಮಾಡುತ್ತಿದೆ. ನನ್ನ ಪ್ರಕಾರ ದಿಲ್ಲಿಯ ಜನರಿಗೆ ವಾಹನ ನಿಲ್ಲಿಸಲೆಂದೇ ರಸ್ತೆ ಮಾಡಿದ್ದೇವೆ ಏನೋ!” ಎಂದು ಕಾರ್ಯಕ್ರಮದಲ್ಲಿ ಸಚಿವರು ವ್ಯಂಗ್ಯವಾಡಿದ್ದಾರೆ.

ಸದ್ಯ ಈ ಘೋಷಣೆಯಿಂದ ಟ್ರಾಫಿಕ್ ರೂಲ್ ಬ್ರೇಕ್ ಮಾಡುವವರ ಸಂಖ್ಯೆ ಕಡಿಮೆಯಾಗಬಹುದು ಎನ್ನಲಾಗಿದೆ. ಈ ನಿಟ್ಟಿನಿಂದಲೇ ಸಚಿವರು ಈ ಕಾನೂನೂ ಜಾರಿ ತರಲಿದ್ದಾರೆ.

Leave A Reply

Your email address will not be published.