KPSC Junior Accounts Assistants Application : KPSC ಇಂದ ಜೂನಿಯರ್ ಅಕೌಂಟ್ಸ್‌ ಅಸಿಸ್ಟಂಟ್‌ ನೇಮಕ! ಆನ್‌ಲೈನ್‌ ಅರ್ಜಿಗೆ ಲಿಂಕ್ ಬಿಡುಗಡೆ!!

KPSC Junior Accounts Assistants Application : ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ರಾಜ್ಯ ಆಡಿಟ್ ಅಂಡ್ ಅಕೌಂಟ್ಸ್‌ ಡಿಪಾರ್ಟ್‌ಮೆಂಟ್‌ನ 67 ಆಪಿಸಿ ಕಿರಿಯ ಲೆಕ್ಕ ಸಹಾಯಕರು (KPSC Junior Accounts Assistants Application) (ಜೂನಿಯರ್ ಅಕೌಂಟ್ಸ್‌ ಅಸಿಸ್ಟಂಟ್) ಹುದ್ದೆಗಳ ಭರ್ತಿಗೆ ಈಗಾಗಲೇ ಆನ್‌ಲೈನ್‌ ಅಪ್ಲಿಕೇಶನ್‌ ಲಿಂಕ್ ಬಿಡುಗಡೆ ಮಾಡಿಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 25 ರ ರಾತ್ರಿ 11-59 ಗಂಟೆವರೆಗೆ ಅವಕಾಶ ನೀಡಲಾಗಿದ್ದು, ಆಸಕ್ತರು ಅರ್ಜಿ ಹಾಕಲು ಈ ಕೆಳಗಿನ ವಿಧಾನವನ್ನು ಅನುಸರಿಸಲು ಸೂಚಿಸಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಕೆಳಗಿನ 3 ಹಂತಗಳನ್ನು ಫಾಲೋ ಮಾಡಬೇಕು.
ಮೊದಲನೇ ಹಂತ : ಪ್ರೊಫೈಲ್ ಕ್ರಿಯೇಟ್‌ / ಅಪ್‌ಡೇಟ್‌
ಎರಡನೇ ಹಂತ : ಅಪ್ಲಿಕೇಶನ್ ಸಬ್‌ಮಿಷನ್
ಮೂರನೇ ಹಂತ : ಅಪ್ಲಿಕೇಶನ್‌ ಶುಲ್ಕ ಪಾವತಿ ಮಾಡುವುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
> ಅರ್ಜಿದಾರರ ಹೆಸರು
> ತಂದೆ – ತಾಯಿ ಹೆಸರು
> ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ / ಅಂಕಗಳು
> ಪಿಯುಸಿ ಅಂಕಪಟ್ಟಿ / ಅಂಕಗಳು
> ಜಾತಿ ಮತ್ತು ಆದಾಯ ಪ್ರಮಾಣ ಪತ್ರ
> ಆಧಾರ್ ಕಾರ್ಡ್‌
> ಇ-ಮೇಲ್ ವಿಳಾಸ
> ಮೊಬೈಲ್ ನಂಬರ್
ಇತ್ಯಾದಿ

ಕೆಎಸ್‌ಎಎಡಿ ಜೂನಿಯರ್ ಅಕೌಂಟ್ಸ್‌ ಅಸಿಸ್ಟಂಟ್ ಹುದ್ದೆಗೆ ಅರ್ಜಿ ಹಾಕುವ ವಿಧಾನ : ಕೆಪಿಎಸ್‌ಸಿ ವೆಬ್‌ಸೈಟ್‌ ‘http://www.kpsc.kar.nic.in/’ ಗೆ ಭೇಟಿ ನೀಡಿ.
> ಓಪನ್ ಆದ ಪೇಜ್‌ನಲ್ಲಿ ‘Apply Online for Various Notifications’ ಎಂದಿರುವಲ್ಲಿ ಕ್ಲಿಕ್ ಮಾಡಿ.
> ನಂತರ ತೆರೆಯುವ ವೆಬ್‌ ಪೇಜ್‌ನಲ್ಲಿ ‘ CLICK HERE TO APPLY ONLINE FOR THE POST OF JUNIOR ACCOUNTS ASSISTANT IN THE DEPARTMENT OF KARNATAKA STATE ACCOUNTS & AUDIT ‘ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
> ಈಗಾಗಲೇ ಕೆಪಿಎಸ್‌ಸಿ ವೆಬ್‌ನಲ್ಲಿ ರಿಜಿಸ್ಟ್ರೇಷನ್‌ ಮಾಡಿದ್ದಲ್ಲಿ, ಯೂಸರ್ ನೇಮ್, ಪಾಸ್‌ವರ್ಡ್‌ ನೀಡಿ ಲಾಗಿನ್ ಆಗಿ.
> ನಂತರ ಸದರಿ ಹುದ್ದೆಗೆ ಅಪ್ಲಿಕೇಶ್ ಸಲ್ಲಿಸಬಹುದು.
> ಅಭ್ಯರ್ಥಿಗಳು ಮೊದಲ ಬಾರಿಗೆ ಆಯೋಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ ‘Click Here for One Time Registration’ ಲಿಂಕ್ ಮಾಡಿ
> ಆಯೋಗದ ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ. ಇಲ್ಲಿ ಪ್ರೊಫೈಲ್‌ ಕ್ರಿಯೇಟ್‌ ಮಾಡಿ, ರಿಜಿಸ್ಟ್ರೇಷನ್ ಪಡೆಯಿರಿ.
> ನಂತರ ಅರ್ಜಿ ಸಲ್ಲಿಸಿ.
> ಶುಲ್ಕ ಪಾವತಿ ನಂತರ, ಮುಂದಿನ ರೆಫರೆನ್ಸ್‌ಗಾಗಿ ಅಪ್ಲಿಕೇಶನ್‌ ಡೌನ್‌ಲೊಡ್ ಮಾಡಿ, ಪ್ರಿಂಟ್ ತೆಗೆದುಕೊಳ್ಳಿ.

ಈ ಮೇಲಿನ ನಿಯಮನುಸಾರ ಕ್ರಮದಂತೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಮಾಹಿತಿ ನೀಡಲಾಗಿದೆ.

Leave A Reply

Your email address will not be published.