Kiran Raj Ronny First Look : ಕಿರುತೆರೆ ʼಕನ್ನಡತಿʼ ಸೀರಿಯಲ್‌ ಹೀರೋನ ರಗಡ್‌ ಲುಕ್‌ಗೆ ಮಾರು ಹೋದ ಸಿನಿರಸಿಕರು! ಕೂಲ್‌ಬಾಯ್‌ ಕಿರಣ್‌ರಾಜ್‌ ರಾನಿ ಲುಕ್‌ ವೈರಲ್‌!

Kiran Raj Ronny First Look: ಕಲರ್ಸ್ ಕನ್ನಡ ವಾಹಿನಿಯಲ್ಲಿ (colors kannada) ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ಕನ್ನಡತಿ’ (Kannadathi). ಈ ಸೀರಿಯಲ್‌ನಲ್ಲಿ ನಾಯಕನಾಗಿದ್ದ ಕಿರಣ್ ರಾಜ್ (Kiran Raj) ಇದೀಗ ಸಿನಿಮಾರಂಗದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ‘ಕನ್ನಡತಿ’ ಧಾರಾವಾಹಿ ಮುಕ್ತಾಯಗೊಂಡಿದ್ದು, ‘ಕನ್ನಡತಿ’ ಬಳಿಕ ಕಿರಣ್ ರಾಜ್ ಅವರ ಮುಂದಿನ ಪ್ರಾಜೆಕ್ಟ್‌ ಯಾವುದು ಎಂಬ ಪ್ರಶ್ನೆ ಅಭಿಮಾನಿಗಳದ್ದಾಗಿತ್ತು. ಇದೀಗ ಅದೇ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಕಿರಣ್ ರಾಜ್ ಅವರ ಮುಂದಿನ ಪ್ರಾಜೆಕ್ಟ್ ‘ರಾನಿ’ (Ronny). ಗುರುತೇಜ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ ನೂತನ ಚಿತ್ರ ‘ರಾನಿ’ಯಲ್ಲಿ ಕಿರಣ್ ರಾಜ್ ನಾಯಕರಾಗಿ ನಟಿಸುತ್ತಿದ್ದಾರೆ.

 

ಈಗಾಗಲೇ ಶೂಟಿಂಗ್‌ ಹಂತದಲ್ಲಿರುವ ಈ ಸಿನಿಮಾ ತಂಡ ಯುಗಾದಿ ಪ್ರಯುಕ್ತ ಫಸ್ಟ್‌ ಲುಕ್‌ ಬಿಡುಗಡೆ ಮಾಡಿತ್ತು. ಇದೀಗ ಈ ಸಿನಿಮಾದ ಕಿರಣ್‌ರಾಜ್‌ ರಾನಿ ಲುಕ್‌ (Kiran Raj Ronny First Look) ವೈರಲ್‌ ಆಗಿದೆ. ಕಿರುತೆರೆ ʼಕನ್ನಡತಿʼ ಸೀರಿಯಲ್‌ ಹೀರೋನ ರಗಡ್‌ ಲುಕ್‌ ಕಂಡು ಸಿನಿರಸಿಕರು ಮಾರು ಹೋಗಿದ್ದಾರೆ.

ಈ ಹಿಂದೆ ನಟ ಕಿರಣ್ ರಾಜ್ (Kiran Raj) ತಮ್ಮ ಸಿನಿಮಾ ರಾನಿ ಟೈಟಲ್ ಲಾಂಚ್ ಮಾಡಲು ರಿಸ್ಕ್ ತೆಗೆದುಕೊಂಡಿದ್ದಾರೆ. ಸ್ಕೈ ಡೈವ್ ಮೂಲಕ ತಮ್ಮ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ದುಬೈನಲ್ಲಿ (Dubai) ವಿಮಾನದಿಂದ 13,000 ಅಡಿ ಮೇಲಿಂದ ಜಿಗಿದು ರಾನಿ ಸಿನಿಮಾದ ಟೈಟಲ್ (Ronny movie title) ಅನಾವರಣ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ ರಾನಿ ಸಿನಿಮಾವೂ ಆಕ್ಷನ್ ಓರಿಯಂಟೆಡ್ ಸಿನಿಮಾ ಆಗಿದ್ದು, ಚಿತ್ರದಲ್ಲೂ ಮೈನವಿರೇಳಿಸುವ ಸಾಹಸ ದೃಶ್ಯಗಳಿರುತ್ತದೆ ಎಂದು ನಾಯಕ ಕಿರಣ್ ರಾಜ್ ಹೇಳಿಕೊಂಡಿದ್ದಾರೆ. ಅದಕ್ಕೆ ಟೈಟಲ್ ಲಾಂಚ್ ಸಹ ಸಾಹಸಮಯವಾಗಿ ಮಾಡಿದ್ದಾರೆ.

ಈ ಚಿತ್ರದ ನಾಲ್ಕು ಹಾಡುಗಳಿಗೆ ಕಾಂತಾರ (kantara) ಚಿತ್ರದ ಸಿಂಗಾರ ಸಿರಿಯೆ.. ಹಾಡು ಬರೆದಿರುವ ಪ್ರಮೋದ್ ಮರವಂತೆ ಅವರು ಸಾಹಿತ್ಯ ಒದಗಿಸಿದ್ದಾರೆ. ಸಂಗೀತ ಮಣಿಕಾಂತ್ ಕದ್ರಿ ಅವರದ್ದಾಗಿದೆ. ಈ ಚಿತ್ರ ಕರ್ನಾಟಕ ಹೊರತುಪಡಿಸಿ ಇನ್ನುಳಿದ ಕಡೆಗಳಲ್ಲಿಯೂ ಕನ್ನಡದಲ್ಲೇ ಈ ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ಸಿನಿಮಾ ಡಿಸೆಂಬರ್‌ನಲ್ಲಿ ರಿಲೀಸ್‌ ಆಗಲಿದೆ ಎಂದು ಹೇಳಲಾಗಿದೆ.

ಚಿತ್ರದಲ್ಲಿ ಕಿರಣ್‌ಗೆ ಮೂವರು ನಾಯಕಿಯರಿದ್ದಾರೆ. ಸ್ಟಾರ್ ಕ್ರಿಯೇಷನ್ಸ್ ಮೂಲಕ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ನಿರ್ಮಿಸಿರುವ ಈ ಚಿತ್ರವನ್ನು ಗುರುತೇಜ್ ಶೆಟ್ಟಿ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ರವಿಶಂಕರ್ (ravishankar), ಮೈಕೋ ನಾಗರಾಜ್, ನಾಗತಿಹಳ್ಳಿ ಚಂದ್ರಶೇಖರ್, ಬಿ. ಸುರೇಶ, ಉಗ್ರಂ ಮಂಜು, ಪೃಥ್ವಿರಾಜ್‌, ಯಶ್ ಶೆಟ್ಟಿ, ಉಮೇಶ್, ಸುಜಯ್ ಶಾಸ್ತ್ರಿ, ಲಕ್ಷ್ಮಿ ಸಿದ್ದಯ್ಯ, ಸಂದೀಪ್ ಮಲಾನಿ, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್ ಹೆಗ್ಡೆ, ಅನಿಲ್, ಧರ್ಮೆಂದ್ರ ಆರಸ್, ಮನಮೋಹನ್ ರೈ ಸೇರಿ ಹಲವರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: Samantha: ನಟಿ ಸಮಂತಾ ತೊಟ್ಟ ಈ ಸೀರೆ ಬೆಲೆ ಎಷ್ಟು ಗೊತ್ತಾ? ಬೆಲೆ ಕೇಳಿದ್ರೆ ಖಂಡಿತ ಶಾಕ್ ಆಗ್ತೀರಾ!!

Leave A Reply

Your email address will not be published.