Damaged Notes : ನಮ್ಮಿಂದ ಪಡೆದ ಹರಿದ ನೋಟ್ ಬ್ಯಾಂಕ್‌ನವರು ಏನು ಮಾಡುತ್ತಾರೆ?
Exchange Damaged Notes : ಹರಿದುಹೋದ, ಹಾಳಾದ ಹಾಗೂ ಕೊಳೆಯಾದ ನೋಟುಗಳಿದ್ದರೆ (Damaged Notes) ಅವುಗಳನ್ನು ಸಾರ್ವಜನಿಕ ಬ್ಯಾಂಕುಗಳ ಯಾವುದೇ ಶಾಖೆಗಳಲ್ಲಿ ಈ ನೋಟುಗಳನ್ನು ಎಕ್ಸ್‌ಚೇಂಜ್ (Exchange Damaged Notes)ಮಾಡಿಕೊಳ್ಳಬಹುದು.
ಪ್ರಸ್ತುತ ಭಾರತದಲ್ಲಿ ಕಾಗದದ ನೋಟುಗಳಿವೆ. ಅನೇಕ ಬಾರಿ ನೋಟುಗಳು ಹರಿದುಹೋಗುವುದು ಅಥವಾ ಕೆಲವೊಮ್ಮೆ ಹಳೆಯದಾಗುವುದು ಮತ್ತು ಅವುಗಳನ್ನು ಮತ್ತೆ ಬಳಸಲು ಕಷ್ಟವಾಗುತ್ತದೆ. ಜನರು ಅಂತಹ ನೋಟುಗಳನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ಅಂತಹ ನೋಟುಗಳನ್ನು ನಾವು ಬ್ಯಾಂಕಿನಲ್ಲಿ ಬದಲಾಯಿಸುತ್ತೇವೆ. ಆದರೆ ಹರಿದ ನೋಟುಗಳನ್ನು ಬ್ಯಾಂಕ್‌ಗಳು ಏನು ಮಾಡುತ್ತವೆ ಎಂಬ ಬಗ್ಗೆ ನೀವು ಎಂದಾದರು ಯೋಚಿಸಿರುವಿರಾ. ಇಲ್ಲಿದೆ ನೋಡಿ ಉತ್ತರ.
ನೀವು ಸ್ವಲ್ಪ ಹರಿದ ಅಥವಾ ಎರಡಕ್ಕಿಂತ ಹೆಚ್ಚು ತುಂಡುಗಳಾಗಿರುವ ಯಾವುದೇ ನೋಟಾದರೂ ಅದನ್ನು ಬ್ಯಾಂಕ್‌ಗೆ ತೆಗೆದುಕೊಂಡು ಹೋಗಬಹುದು. ನೀವು ಕನಿಷ್ಟ 50 ಪ್ರತಿಶತದಷ್ಟಾದರೂ ನೋಟಿನ ಭಾಗವನ್ನು ಹೊಂದಿರಬೇಕು. ಅದರಲ್ಲಿ ನೀವು ಪೂರ್ಣ ಹಣವನ್ನು ಪಡೆಯುತ್ತೀರಿ. ಇಲ್ಲದಿದ್ದರೆ ನೀವು ಏನನ್ನೂ ಪಡೆಯುವುದಿಲ್ಲ. ಯಾರಾದರೂ ಒಂದು ದಿನದಲ್ಲಿ 20 ಕ್ಕಿಂತ ಹೆಚ್ಚು ಹರಿದ ನೋಟುಗಳನ್ನು ಬದಲಾಯಿಸಲು ಬಯಸಿದರೆ ಅಥವಾ ನೋಟುಗಳ ಒಟ್ಟು ಮೌಲ್ಯ 5000 ರೂ.ಗಿಂತ ಹೆಚ್ಚಿದ್ದರೆ, ಇದಕ್ಕಾಗಿ ವಹಿವಾಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ.
2000 ರೂಪಾಯಿ, 500 ರೂಪಾಯಿ, 200 ರೂಪಾಯಿ, 100 ರೂಪಾಯಿ, 50 ರೂ, 20 ರೂ, ಅಥವಾ 10 ರೂಪಾಯಿ ನೋಟಾಗಲಿ, ಹರಿದಿದ್ದರೆ ಅಂತಹ ನೋಟುಗಳನ್ನು ಆರ್‌ಬಿಐ ಚಲಾವಣೆಯಿಂದ ತೆಗೆದುಹಾಕುತ್ತದೆ. ಇದರ ಬದಲಾಗಿ ಅಂತಹ ನೋಟುಗಳನ್ನು ಮುದ್ರಿಸುವುದು ಆರ್‌ಬಿಐನ ಜವಾಬ್ದಾರಿಯಾಗಿದೆ.
ಮುಖ್ಯವಾಗಿ ಹಿಂದಿನ ಕಾಲದಲ್ಲಿ ಈ ನೋಟುಗಳನ್ನು ಸುಡಲಾಗುತ್ತಿತ್ತು ಮತ್ತು ಪ್ರಸ್ತುತ ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮರುಬಳಕೆ ಮಾಡಲಾಗುತ್ತದೆ. ಈ ನೋಟುಗಳಿಂದ ಕಾಗದದ ವಸ್ತುಗಳನ್ನು ತಯಾರಿಸಲಾಗುತ್ತದೆ. ಬಳಿಕ ಈ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.
ಒಟ್ಟಿನಲ್ಲಿ ನೋಟಿನ ಸ್ಥಿತಿ ಹದಗೆಟ್ಟಷ್ಟೂ ಅದರ ಮೌಲ್ಯ ಕಡಿಮೆಯಾಗುತ್ತದೆ. ಈ ಬಗ್ಗೆ ಎಲ್ಲಾ ಮಾಹಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ನೋಟು ಮರುಪಾವತಿ) ನಿಯಮಗಳು, 2009 ರ ಅಡಿಯಲ್ಲಿ ನೀಡಲಾಗಿದೆ.