Sleeping Problem : ಹೀಗೆ ಮಾಡಿ ನೋಡಿ, ರಾತ್ರಿ ಮಲಗಿದ ಕೂಡಲೇ ನಿದ್ದೆ ಬರುತ್ತೆ!

Sleeping problem : ಆಹಾರ (food ) ಸೇವನೆಯಷ್ಟೇ ನಿದ್ರೆಯೂ ಕೂಡಾ ನಮಗೆ ಮುಖ್ಯವಾಗಿದೆ. ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಆರೋಗ್ಯವಾಗಿರಲು ಪ್ರತಿನಿತ್ಯ ಎಂಟು ಗಂಟೆಗಳ ನಿದ್ರೆ ಅತ್ಯವಶ್ಯಕ. ಮನುಷ್ಯರೂ ಸೇರಿದಂತೆ ಭೂಮಿಯಲ್ಲಿ ವಾಸಿಸುವ ಎಲ್ಲಾ ಜೀವಿಗಳಿಗೆ ಆಹಾರ, ನೀರು (water) ಮತ್ತು ಗಾಳಿಯಂತೆ ಸಾಕಷ್ಟು ನಿದ್ರೆ ಆರೋಗ್ಯಕ್ಕೆ ಬಹಳ ಮುಖ್ಯ.

 

ನಿದ್ರೆ ಸರಿಯಾಗಿ ಬರದೇ ಇರದಿರುವುದರಿಂದ ಸದಾಕಾಲ ಮಂಪರಿನ ಸ್ಥಿತಿ, ಶಕ್ತಿಯ ಕೊರತೆ, ಇರಿಸುಮುರಿಸು, ಖಿನ್ನತೆ ಉಂಟಾಗಬಹುದು. ನಿದ್ರಾಹೀನತೆಯು ಅಲ್ಪಕಾಲಿಕ ಅಥವಾ ದೀರ್ಘಕಾಲಿಕವಾಗಿ ಕಾಡಬಹುದು.

ಇನ್ನು ಮಾನಸಿಕ ಒತ್ತಡ, ಯೋಚನೆ, ಎದೆಯುರಿ, ಔಷಧಗಳು, ಮದ್ಯಪಾನ ಅಥವಾ ಬೇರೆ ಮಾದಕವಸ್ತುಗಳ ಪರಿಣಾಮ, ಇತರ ಅಭ್ಯಾಸ, ಮೊಬೈಲ್, ಟಿವಿ ವೀಕ್ಷಣೆ, ಸರಿಯಾದ ಸಮಯಕ್ಕೆ ನಿದ್ರಿಸದೇ ಇರುವುದು ಅಥವಾ ಅನಿಯಮಿತ ಕೆಲಸದ ಅವಧಿ ಅಥವಾ ನೈಟ್ ಶಿಫ್ಟ್ ನಿದ್ರಾಹೀನತೆಗೆ (Sleeping problem)ಸಾಮಾನ್ಯ ಕಾರಣಗಳಾಗಿದೆ.

ಸದ್ಯ ಒಂದೆರಡು ದಿನಗಳಿಂದ ಸರಿಯಾಗಿ ರಾತ್ರಿ ನಿದ್ರೆ ಬರುತ್ತಿಲ್ಲ ಎಂದರೆ ತಕ್ಷಣ ನೀವು ಈ ಕೆಳಗಿನಂತೆ ಆಹಾರ ತಜ್ಞರಾದ ಲವ್ನೀತ್ ತಿಳಿಸಿರುವ ನೈಸರ್ಗಿಕ ಕ್ರಮಗಳನ್ನು ಅನುಸರಿಸುವುದು ಸೂಕ್ತ.

ಬಾದಾಮಿ ಬೀಜಗಳು:
ಬಾದಾಮಿ ಬೀಜಗಳಲ್ಲಿ ನಾರಿನ ಅಂಶ ಮತ್ತು ಅತ್ಯುತ್ತಮ ಕೊಬ್ಬಿನ ಪ್ರಮಾಣ ಇರುತ್ತದೆ. ಇದರಲ್ಲಿ ಮೆಗ್ನೀಷಿಯಂ ಪ್ರಮಾಣ ಇರಲಿದ್ದು, ಮಾಂಸ ಖಂಡಗಳನ್ನು ಶಾಂತ ಪಡಿಸುವಲ್ಲಿ ಇದು ಕೆಲಸ ಮಾಡುತ್ತದೆ. ಮಲಗುವ ಮುಂಚೆ ಬಾದಾಮಿ ಹಾಲು ಕುಡಿದು ಮಲಗುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ. ಹಸಿ ಬಾದಾಮಿಗಳಿಗಿಂತ ನೆನೆಹಾಕಿದ ಮತ್ತು ಸಿಪ್ಪೆ ಸುಲಿದ ಬಾದಾಮಿ ಬೀಜಗಳು ಉತ್ತಮ.

ಅಶ್ವಗಂಧ:
ಅಶ್ವಗಂಧ ಇದರಲ್ಲಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಂತಹ ಮತ್ತು ದೇಹಕ್ಕೆ ವಿಶ್ರಾಂತಿ ನೀಡಿ ರಾತ್ರಿಯ ಸಮಯದಲ್ಲಿ ಕಣ್ಣುಗಳಿಗೆ ಒಳ್ಳೆಯ ನಿದ್ರೆ ಬರುವಂತೆ ಮಾಡುವ ಗುಣಲಕ್ಷಣಗಳು ಇವೆ. ರಾತ್ರಿ ಮಲಗುವ ಅರ್ಧ ಗಂಟೆ ಮುಂಚೆ ನೀವು ಇದನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಚಾಮೋಮೈಲ್ ಚಹಾ:
ಚಾಮೋಮೈಲ್ ಚಹಾ ಕುಡಿಯುವುದು
ಇದರಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿದ್ದು, ಮೆದುಳಿನ ನರಮಂಡಲಗಳನ್ನು ಶಾಂತಗೊಳಿಸಿ ನಿದ್ರೆ ಬರುವಂತೆ ಮಾಡುತ್ತದೆ. ಪ್ರಮುಖವಾಗಿ apigenin ಎಂಬ ಆಂಟಿ ಆಕ್ಸಿಡೆಂಟ್ ನಿದ್ರೆಯ ವಿಷಯದಲ್ಲಿ ಸಹಕಾರಿಯಾಗಿ ಕೆಲಸ ಮಾಡುತ್ತದೆ.

ಕುಂಬಳಕಾಯಿ ಬೀಜಗಳು
ಕುಂಬಳಕಾಯಿ ಬೀಜಗಳಲ್ಲಿ ಜಿಂಕ್ ಮತ್ತು ಟ್ರಿಪ್ಟೊಫ್ಯಾನ್ ಪ್ರಮಾಣ ಇರಲಿದ್ದು, ಮೆದುಳು ಇದನ್ನು ಸೆರೋಟನಿನ್ ಆಗಿ ಬದಲಿಸಿ ನಿದ್ರೆ ಬರುವಂತೆ ಮಾಡುತ್ತದೆ.

ಅಂಜೂರದ ಹಾಲು:
ಅಂಜೂರ ಕೂಡ ನಿದ್ರೆಯ ಗುಣಮಟ್ಟವನ್ನು ಹೆಚ್ಚು ಮಾಡುವಲ್ಲಿ ಕೆಲಸ ಮಾಡುತ್ತದೆ. ಏಕೆಂದರೆ ಇದು ಸಹ ನಮ್ಮ ದೇಹದಲ್ಲಿ ಸೆರೋಟೋನಿನ್ ಮತ್ತು ಮೇಲಟೋನಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ನಿದ್ರೆ ಬರುವಂತೆ ಮಾಡುತ್ತದೆ.

ಇನ್ನು ಇತರ ಪ್ರಮುಖ ಸಲಹೆ ಮೊಬೈಲ್, ಕಂಪ್ಯೂಟರ್, ಟಿವಿಯಿಂದ ದೂರವಿದ್ದು, ಮಲಗುವ ಒಂದೆರಡು ಗಂಟೆ ಮುಂಚೆಯೇ ಮೊಬೈಲ್, ಕಂಪ್ಯೂಟರ್, ಟಿವಿಯಿಂದ ದೂರ ಸರಿಯಿರಿ. ಎಲೆಕ್ಟ್ರಾನಿಕ್ ಉಪಕರಣಗಳಿಂದ ಹೊರಬರುವ ವಿಕಿರಣಗಳು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುವುದರಿಂದ ನಿದ್ದೆಗೆ ತೊಂದರೆ ಆಗಲಿದೆ.

ಆದ್ದರಿಂದ ನೀವು ಹೆಚ್ಚಿನ ದಿನಗಳಲ್ಲಿ ರಾತ್ರಿಯ ಸಮಯದಲ್ಲಿ ನಿದ್ರೆ ಬಾರದೇ ನಿದ್ರಾಹೀನತೆಯ ತೊಂದರೆಯಿಂದ ಬಳಲುತ್ತಿದ್ದರೆ, ಈ ಮೇಲಿನ ಆಹಾರ ಪದಾರ್ಥಗಳನ್ನು ಸೇವಿಸಬಹುದು.

Leave A Reply

Your email address will not be published.