Toll Tax Booth : ವಾಹನ ಸವಾರರೇ ಇತ್ತ ಗಮನಿಸಿ : 6 ತಿಂಗಳಲ್ಲಿ ಟೋಲ್ ಪ್ಲಾಜಾ ತೆರವು!

Toll Tax Booth : ವಾಹನ ಸವಾರರೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ಇತ್ತೀಚೆಗಷ್ಟೇ, ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ಟೋಲ್ ಪಾವತಿ ಕುರಿತು (Toll Tax New Rule) ಕೇಂದ್ರ ಹೆದ್ಧಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಟೋಲ್ ಪಾವತಿ ಕುರಿತು ಮಹತ್ವದ ಮಾಹಿತಿ ನೀಡಿದ್ದರು.

 

ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಸ್ತುತ ಜಾರಿಯಲ್ಲಿರುವ ದೇಶದ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಿ ಸರ್ಕಾರವು ಮುಂದಿನ ಆರು ತಿಂಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ(Nitin Gadkari On Toll Tax) ಮಾಡುವ ಜೊತೆಗೆ ಇತರ ತಂತ್ರಜ್ಞಾನಗಳನ್ನ ಪರಿಚಯಿಸಲಿರುವ ಕುರಿತು ಮಾಹಿತಿ ನೀಡಿದ್ದಾರೆ.

ಹೆದ್ದಾರಿಯಲ್ಲಿ ಟೋಲ್ ಪ್ಲಾಜಾದಲ್ಲಿ ಜನರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಯಿರುವ ಹಿನ್ನೆಲೆ ಜನರು ಹೈರಾಣಾಗಿ ಹೋಗಿದ್ದಾರೆ. ಈ ಹಿನ್ನೆಲೆ ಟೋಲ್(Toll Tax Booth) ಪ್ಲಾಜಾದಲ್ಲಿ ತೆಗೆದುಕೊಳ್ಳುವ ಸರಾಸರಿ ಸಮಯವನ್ನು ಕಡಿತ ಮಾಡುವ ನಿಟ್ಟಿನಲ್ಲಿ ನಿರಂತರವಾಗಿ ಸರ್ಕಾರವು ಪ್ರಯತ್ನಿಸುತ್ತಿದೆ. ಹೀಗಾಗಿ, ದೇಶದ ಹೆದ್ದಾರಿಗಳಲ್ಲಿ ಅಸ್ತಿತ್ವದಲ್ಲಿರುವ ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಿ ಸರ್ಕಾರವು ಮುಂದಿನ ಆರು ತಿಂಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ(GPS Based Toll System) ಮತ್ತು ಇತರ ತಂತ್ರಜ್ಞಾನವನ್ನು ಪರಿಚಯಿಸುವ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ. ಹೆದ್ದಾರಿಗಳಲ್ಲಿ ವಾಹನಗಳನ್ನು ಜಾಮ್ ಆಗಿ ನಿಲ್ಲುವುದನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲು ಮುಂದಾಗಿರುವ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ವಾಹನಗಳನ್ನು ನಿಲ್ಲಿಸದೆಯೇ ಟೋಲ್ ಸಂಗ್ರಹಕ್ಕಾಗಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಸಿಸ್ಟಮ್ (Number Plate Recognition System)(ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾ) (Automatic Number Plate Reader Camera) ಗಾಗಿ ಪ್ರಾಯೋಗಿಕ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ, ವಾಹನಗಳನ್ನು ಎಲ್ಲಿಯೂ ಕೂಡ ನಿಲ್ಲಿಸದೆ ಟೋಲ್ ಸಂಗ್ರಹ ಮಾಡಲಾಗುತ್ತದೆ. 2018-19 ರ ಆರ್ಥಿಕ ವರ್ಷದಲ್ಲಿ, ಟೋಲ್ ಪ್ಲಾಜಾದಲ್ಲಿ ವಾಹನದ ಸರಾಸರಿ ನಿಲುಗಡೆ ಸಮಯ 8 ನಿಮಿಷವಾಗಿದ್ದರೆ, 2020-21 ಮತ್ತು 2021-22ರಲ್ಲಿ ಫಾಸ್ಟ್ಟ್ಯಾಗ್ ಪರಿಚಯಿಸಿದ ಬಳಿಕ, ಟೋಲ್ ಪ್ಲಾಜಾದಲ್ಲಿ ವಾಹನಗಳ ಸರಾಸರಿ ನಿಲುಗಡೆ ಸಮಯ 47 ಸೆಕೆಂಡುಗಳವರೆಗೆ ಇಳಿದಿರುವುದನ್ನ ಗಮನಿಸಬಹುದು.

ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಕಾರ್ಯಕ್ರಮದ ಸಂದರ್ಭ ಗಡ್ಕರಿ ಅವರು ಮಾಹಿತಿ ನೀಡಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಪ್ರಸ್ತುತ 40,000 ಕೋಟಿ ರೂಪಾಯಿಗಳ ಟೋಲ್ ಆದಾಯವನ್ನು ಒಳಗೊಂಡಿದೆ. ಮುಂದಿನ ಎರಡು ಇಲ್ಲವೇ ಮೂರು ವರ್ಷಗಳಲ್ಲಿ ಇದು 1.40 ಲಕ್ಷ ಕೋಟಿಗೆ ಹೆಚ್ಚಳವಾಗುವ ಭರವಸೆ ವ್ಯಕ್ತಪಡಿಸಿದ್ದಾರೆ. ದೇಶದ ಹೆದ್ದಾರಿಗಳಲ್ಲಿರುವ ಟೋಲ್ ಪ್ಲಾಜಾಗಳನ್ನು ತೆಗೆದುಹಾಕುವ ಜೊತೆಗೆ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯಂತಹ ತಂತ್ರಜ್ಞಾನವನ್ನು ತರಲು ಸರ್ಕಾರ ಯೋಜನೆ ಹಾಕಿದ್ದು, ಆರು ತಿಂಗಳಲ್ಲಿ ಹೊಸ ತಂತ್ರಜ್ಞಾನ ಜಾರಿಗೆ ತರುವ ಬಗ್ಗೆ ಇದೆ ವೇಳೆ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Employees DA Hike : ಕೊನೆಗೂ ದೊರಕಿತು ಸರಕಾರಿ ನೌಕರರಿಗೆ ಗುಡ್ ನ್ಯೂಸ್! ತುಟ್ಟಿಭತ್ಯೆ ಹೆಚ್ಚಳ!!!

Leave A Reply

Your email address will not be published.