State Bank of India : SBI ಗ್ರಾಹಕರೇ ನಿಮಗಾಗಿ ಉಚಿತವಾಗಿ ದೊರೆಯುತ್ತೆ ಈ 10 ಸೇವೆ!

SBI free service : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಉಳಿತಾಯ ಖಾತೆಗಳು, ಗೃಹ ಸಾಲಗಳು ಮತ್ತು ಕಾರು ಸಾಲಗಳು, ಕ್ರೆಡಿಟ್ ಕಾರ್ಡ್‌ಗಳು, ಸ್ಥಿರ ಠೇವಣಿಗಳು, ಹೂಡಿಕೆ ಸೇವೆಗಳು ಮುಂತಾದ ಅನೇಕ ಹಣಕಾಸು ಸೇವೆಗಳನ್ನು ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಒದಗಿಸುತ್ತಿದೆ. ಅದಲ್ಲದೆ ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಿದೆ.

ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಗ್ರಾಹಕರಿಗೆ ಮೊಬೈಲ್ ಮೂಲಕವೇ ಹಲವಾರು ಸೇವೆಗಳನ್ನು ಉಚಿತವಾಗಿ (SBI free service) ನೀಡುತ್ತಿದೆ.

ಮೊಬೈಲ್ ಫೋನ್ ಮೂಲಕ ಎಸ್‌ಬಿಐ ಗ್ರಾಹಕರು ಉಚಿತವಾಗಿ ಪಡೆಯಬಹುದಾದ ಸೇವೆಗಳ ಪಟ್ಟಿ ಇಂತಿವೆ :

ಬ್ಯಾಲೆನ್ಸ್ ವಿಚಾರಣೆ : 919223766666ಗೆ ಮಿಸ್ಡ್‌ ಕಾಲ್ ಅಥವಾ ‘BAL’ ಎಂದು ಎಸ್‌ಎಂಎಸ್ ಮಾಡಬೇಕು. ನಂತರ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದು.

ಮಿನಿ ಸ್ಟೇಟ್ಮೆಂಟ್ : 919223766666ಗೆ ಮಿಸ್ಡ್‌ ಕಾಲ್ ಅಥವಾ ‘MSTMT’ ಎಂದು ಎಸ್‌ಎಂಎಸ್ ಮಾಡಬೇಕು.

ಚೆಕ್ ಬುಕ್ ವಿನಂತಿಯ ಸ್ವೀಕೃತಿ : 917208933145ಗೆ “CHQREQ” ಎಂದು ಎಸ್‌ಎಂಎಸ್ ಮಾಡಬೇಕು.

ಚೆಕ್‌ಬುಕ್ ವಿನಂತಿ : 917208933145ಗೆ “CHQREQ” ಎಂದು ಎಸ್‌ಎಂಎಸ್ ಮಾಡಬೇಕು.

ಕಳೆದ ಆರು ತಿಂಗಳ ಇ-ಸ್ಟೇಟ್ಮೆಂಟ್ : ಕಳೆದ ಆರು ತಿಂಗಳ ಇ-ಸ್ಟೇಟ್ಮೆಂಟ್‌ ಅನ್ನು ನಿಮ್ಮ ನೋಂದಾಯಿತ ಇ-ಮೇಲ್ ವಿಳಾಸಕ್ಕೆ ಪಾಸ್‌ವರ್ಡ್ ರಕ್ಷಿತ ಪಿಡಿಎಫ್ ಫೈಲ್ ಮೂಲಕ ಕಳುಹಿಸಲಾಗುವುದು. ಇದಕ್ಕಾಗಿ ನೀವು ‘ESTMT ಎಂದು 917208933145ಗೆ ಎಸ್‌ಎಂಎಸ್‌ ಮಾಡಬೇಕು.

ಶಿಕ್ಷಣ ಸಾಲದ ಬಡ್ಡಿಯ ಪ್ರಮಾಣ ಪತ್ರ : 917208933145ಗೆ ELI ಎಂದು ಎಸ್‌ಎಂಎಸ್ ಮಾಡಬೇಕು.

ಮನೆ ಸಾಲ ಬಡ್ಡಿ ಪ್ರಮಾಣ ಪತ್ರ : 917208933145ಗೆ HLI ಎಂದು ಎಸ್‌ಎಂಎಸ್ ಮಾಡಬೇಕು.

ಸಕಾರಾತ್ಮಕ ಪಾವತಿ ವ್ಯವಸ್ಥೆಗೆ (ಪಿಪಿಎಸ್‌) ನೋಂದಾಯಿತರಾಗಲು : ಈ ವ್ಯವಸ್ಥೆಯನ್ನು ಬಳಸಲು ಮೊದಲಿಗೆ ‘ಒನ್ ಟೈಂ’ನೋಂದಣಿಯಾಗಬೇಕು. ಬಳಿಕ ಮೊಬೈಲ್ ಮೂಲಕ ಪಿಪಿಎಸ್‌ ಸೇವೆಗಳನ್ನು ಪಡೆಯಬಹುದು.

ಸೇವೆಗಳ ಪೂರ್ಣ ಪಟ್ಟಿ : “917208933145”ಗೆ “HELP” ಎಂದು ಎಸ್‌ಎಂಎಸ್ ಮಾಡಬೇಕು.

ಭಾಷೆ ಬದಲಾವಣೆಗೆ : 917208933148 ಗೆ ಹಿಂದಿ ಅಥವಾ ಇಂಗ್ಲಿಷ್ ಎಂದು, ಇಚ್ಛೆಯ ಭಾಷೆಯನ್ನು ಟೈಪ್ ಮಾಡಿ ಕಳುಹಿಸಬೇಕು.

ಈ ಸೇವೆಗಳನ್ನು ಪಡೆಯಲು ಮೊದಲು ನಿಮ್ಮ ಖಾತೆಯ ವಿವರಗಳಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿ, ಎಸ್‌ಬಿಐ ಕ್ವಿಕ್ ಸೇವೆಗೆ ನೋಂದಣಿಯಾಗಬೇಕಾಗುತ್ತದೆ. ಆಂಡ್ರಾಯ್ಡ್ ಅಥವಾ ಐಓಎಸ್ ಅಥವಾ ಬ್ಲಾಕ್‌ಬೆರ‍್ರಿ ಫೋನ್‌ಗಳಲ್ಲಿ ಎಸ್‌ಬಿಐ ಕ್ವಿಕ್ ಅಪ್ಲಿಕೇಶನ್‌ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಮುಖ್ಯವಾಗಿ ಎಸ್‌ಬಿಐ ಮೂಲಕ ಎಲ್ಲಾ ಸಂಪರ್ಕಗಳು ಎಸ್‌ಎಂಎಸ್ ಅಥವಾ ಮಿಸ್ಡ್‌ ಕಾಲ್‌ಗಳ ಮೂಲಕ ಆಗುವ ಕಾರಣ ಒಮ್ಮೆ ಅಳವಡಿಸಿಕೊಂಡ ಬಳಿಕ ಅಂತರ್ಜಾಲದ ಸಂಪರ್ಕ ಬೇಕಾಗುವುದಿಲ್ಲ.

ಈ ಮೇಲಿನಂತೆ ಎಸ್‌ಬಿಐ ಕ್ವಿಕ್ – ಮಿಸ್ಡ್‌ ಕಾಲ್ ಬ್ಯಾಂಕಿಂಗ್ ಮೂಲಕ ನೀವು ನಿಮ್ಮ ಅಕೌಂಟ್ ಬ್ಯಾಲೆಕ್ಸ್‌, ಮಿನಿ ಸ್ಟೇಟ್ಮೆಂಟ್ ಸೇರಿದಂತೆ ಅನೇಕ ವಿಚಾರಗಳನ್ನು ನಿಮ್ಮ ನೋಂದಾಯಿತ ಮೊಬೈಲ್‌ನಿಂದ ಎಸ್‌ಎಂಎಸ್ ಕಳಿಸುವ ಮೂಲಕ ಪಡೆಯಬಹುದಾಗಿದೆ.

ಇದನ್ನೂ ಓದಿ: NPS Scheme : ಎನ್ ಪಿಎಸ್ ಕುರಿತು ಸರಕಾರ ‌ನೀಡಿದೆ ಮಹತ್ವದ ಮಾಹಿತಿ!

Leave A Reply

Your email address will not be published.