PMUY: ಮೋದಿ ಸರಕಾರ ನೀಡುತ್ತಿದೆ ಉಜ್ವಲ ಯೋಜನೆಯ 9 ಕೋಟಿ ಫಲಾನುಭವಿಗಳಿಗೆ ಭರ್ಜರಿ ಗಿಫ್ಟ್! ಏನದು?

Pradhan Mantri Ujjwala Yojana: 2016ರ ಮೇ ತಿಂಗಳಲ್ಲಿ ಸರ್ಕಾರವು ಬಡ ಕುಟುಂಬಗಳ ಮಹಿಳೆಯರಿಗೆ ಉಚಿತ ಎಲ್ಪಿಜಿ ಸಂಪರ್ಕಗಳನ್ನು ಒದಗಿಸಲು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (Pradhan Mantri Ujjwala Yojana) ಪ್ರಾರಂಭಿಸಿದ್ದು, ಇದರಿಂದ ಫಲಾನುಭವಿಗಳಿಗೆ ಹಲವಾರು ಪ್ರಯೋಜನಗಳು ಆಗಿವೆ.

ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳಿಗೆ ಸರ್ಕಾರ ಸುದ್ದಿ ನೀಡಿದ್ದು, ಸದ್ಯ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಪ್ರತಿ ಎಲ್‌’ಪಿಜಿ ಸಿಲಿಂಡರ್‌’ಗೆ ರೂ 200 ಸಬ್ಸಿಡಿಯನ್ನು ಸರ್ಕಾರ ಶುಕ್ರವಾರ ಒಂದು ವರ್ಷಕ್ಕೆ ವಿಸ್ತರಿಸಿದೆ.

ಈ ಯೋಜನೆಯು 9.6 ಕೋಟಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡಲಿದ್ದು, ಪಿಎಂಯುವೈ ಫಲಾನುಭವಿಗಳಿಗೆ ಪ್ರತಿ ಎಲ್‌’ಪಿಜಿ ಸಿಲಿಂಡರ್‌’ಗೆ 200 ರೂಪಾಯಿ ಸಬ್ಸಿಡಿ ನೀಡಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಈ ಸಹಾಯಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ವಿಭಿನ್ನ ಅಂತರಾಷ್ಟ್ರೀಯ ಘಟನೆಗಳಿಂದಾಗಿ ಎಲ್‌’ಪಿಜಿಯ ಅಂತರಾಷ್ಟ್ರೀಯ ಬೆಲೆ ವೇಗವಾಗಿ. ಇಂತಹ ಪರಿಸ್ಥಿತಿಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳನ್ನು ಎಲ್‌’ಪಿಜಿಯ ದುಬಾರಿ ಬೆಲೆಯಿಂದ ರಕ್ಷಿಸುವುದು ಅಗತ್ಯವಾಗಿದೆ. ಪಿಎಂಯುವೈ ಅಡಿಯಲ್ಲಿ ಗ್ರಾಹಕರಿಗೆ ಸಬ್ಸಿಡಿ ರೂಪದಲ್ಲಿ ಬೆಂಬಲವು ಎಲ್’ಪಿಜಿಯ ನಿರಂತರ ಬಳಕೆಗೆ ಅವರನ್ನು ಪ್ರೋತ್ಸಾಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಸಚಿವರ ಪ್ರಕಾರ ಸಬ್ಸಿಡಿಯನ್ನು ವರ್ಷಕ್ಕೆ 14.2 ಕೆಜಿಯ 12 ಎಲ್‌’ಪಿಜಿ ಸಿಲಿಂಡರ್‌ಗಳಿಗೆ ನೀಡಲಾಗುವುದು. ಮಾರ್ಚ್ 1, 2023 ಬಳಿಕ PMUY ಅಡಿಯಲ್ಲಿ 9.59 ಫಲಾನುಭವಿಗಳಿದ್ದರು. ಇದಕ್ಕೆ 2022-23ರಲ್ಲಿ 6,100 ಕೋಟಿ ಹಾಗೂ 2023-24ರಲ್ಲಿ 7,680 ಕೋಟಿ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.

PMUY ಗ್ರಾಹಕರ ಸರಾಸರಿ LPG ಬಳಕೆ 2019-20 ರಲ್ಲಿ 3.01 ರೀಫಿಲ್‌’ಗಳಿಂದ 2021-22 ರಲ್ಲಿ 3.68 ಕ್ಕೆ 20 ಶೇಕಡಾ ಹೆಚ್ಚಾಗಿದೆ. ಒಟ್ಟಿನಲ್ಲಿ ಎಲ್ಲಾ PMUY ಫಲಾನುಭವಿಗಳು ಈ ಸಬ್ಸಿಡಿಯನ್ನು ಪಡೆಯಬಹುದಾಗಿದೆ.

ಸದ್ಯ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭ ಪಡೆಯಲು ಎಲ್‌ಪಿಜಿ ವಿತರಣಾ ಏಜೆನ್ಸಿಯಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ಆಫ್‌ಲೈನ್ ಮೋಡ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೋಡ್‌ನಲ್ಲಿ ಅರ್ಜಿ ಸಲ್ಲಿಸುವುದಾದರೆ ಅರ್ಜಿದಾರರು ಅಧಿಕೃತ ವೆಬ್‌ಸೈಟ್ pmujjwalayojana.com ಗೆ ಹೋಗಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ನಂತರ ಈ ಫಾರ್ಮ್ ಅನ್ನು ಹತ್ತಿರದ ಎಲ್‌ಪಿಜಿ ಕೇಂದ್ರದಲ್ಲಿ ಸಲ್ಲಿಸಬೇಕಾಗುತ್ತದೆ.

Leave A Reply

Your email address will not be published.