KSP KARP Mysuru Recruitment : ಪೊಲೀಸ್‌ ಇಲಾಖೆಯಿಂದ ಉದ್ಯೋಗವಕಾಶ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

KSP KARP Mysuru Recruitment : ಕೆ.ಎ.ಆರ್‌.ಪಿ ಮೌಂಟೆಡ್ ಕಂಪೆನಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು ಲಿಪಿಕ ವೃಂದ ಸೇರಿದಂತೆ (ನೇಮಕಾತಿ) ನಿಯಮಗಳು 2004 ರ ಹಾಗೂ ಸರ್ಕಾರದ ಅಧಿಸೂಚನೆಗಳನ್ವಯ
ಅರ್ಜಿ ಆಹ್ವಾನಿಸಿದೆ (KSP KARP Mysuru Recruitment ). ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

 

ಹುದ್ದೆಯ ಹೆಸರು:
• ಕರ್ನಾಟಕ ವಾದ್ಯವೃಂದದ ವಾದ್ಯಗಾರರ ಹುದ್ದೆಗಳ ಸಂಖ್ಯೆ : 04 (1 ಬ್ಯಾಕ್‌ಲಾಗ್)
• ಆಂಗ್ಲ ವಾದ್ಯವೃಂದದ ವಾದ್ಯಗಾರರ ಹುದ್ದೆಗಳ ಸಂಖ್ಯೆ : 06 (2 ಬ್ಯಾಕ್‌ಲಾಗ್)

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01-04-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-04-2023

ವಿದ್ಯಾರ್ಹತೆ:
• ಕರ್ನಾಟಕ ವಾದ್ಯಗಾರರ ಹುದ್ದೆಗೆ – ಕರ್ನಾಟಕ ಸಂಗೀತದಲ್ಲಿ ಸೀನಿಯರ್ ಗ್ರೇಡ್‌ ಪರೀಕ್ಷೆ ತೇರ್ಗಡೆ ಆಗಿರಬೇಕು.
• ಕಾನೂನಿನ ಅನ್ವಯ ಸ್ಥಾಪಿಸಲಾಗಿರುವ ವಿವಿಯ ಬಿ ಮ್ಯೂಸಿಕ್ ಪದವಿ ಪಡೆದಿರಬೇಕು.
• ಆಂಗ್ಲ ವಾದ್ಯವೃಂದದ ವಾದ್ಯಗಾರರ ಹುದ್ದೆಗೆ -ಲಂಡನ್‌ನ ಟ್ರಿನಿಟಿ ಸಂಗೀತ ಕಾಲೇಜ್‌ನ ಲಿನ್ಸಿಯೇಟ್‌ ಪರೀಕ್ಷೆಯಲ್ಲಿ ಪಾಸ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.
• ಎಲ್ಲಾ ರೀತಿಯ ದೊಡ್ಡ ಪ್ರಮಾಣದ, ಸಣ್ಣ ಪ್ರಮಾಣದ ಮತ್ತು ಕ್ರೊಮ್ಯಾಟಿಕ್ ಸ್ಕೇಲಿನ ವಾದ್ಯಗಳ ಬಗ್ಗೆ ತಿಳುವಳಿಕೆ ಇರಬೇಕು.
• ವಾದ್ಯೋಪಕರಣಗಳನ್ನು ಆ ಕ್ಷಣವೇ ಸರಾಗವಾಗಿ ನುಡಿಸುವ ಸಾಮರ್ಥ್ಯವಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷ ಗರಿಷ್ಠ 30 ವರ್ಷ.
ವೇತನ: ರೂ.23,500-47650.
ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಪ್ರಾಯೋಗಿಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:
• ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100. ಆಗಿದೆ.
• ಸಾಮಾನ್ಯ ವರ್ಗ, ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ರೂ.250. ಇರುತ್ತದೆ.

ಅರ್ಜಿ ಸಲ್ಲಿಕೆ: ಈ ಕೆಳಗಿನ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಿ.

ವಿಳಾಸ :
ಕಮಾಂಡೆಂಟ್,
ಕೆ.ಎ.ಆರ್‌.ಪಿ,
ಮೌಂಟೆಡ್ ಕಂಪನಿ,
ಲಲಿತಮಹಲ್ ರಸ್ತೆ,
ಮೈಸೂರು- 570 011

ಅರ್ಜಿ ನಮೂನೆಯನ್ನು ವೆಬ್ಸೈಟ್ ವಿಳಾಸ www.ksp.gov.in ಗೆ ಭೇಟಿ ನೀಡಿ, ಡೌನ್‌ಲೋಡ್‌ ಮಾಡಿಕೊಳ್ಳಬಹುದು.

Leave A Reply

Your email address will not be published.