Chanakya Niti : ಮಹಿಳೆಯರು ಈ ವಿಚಾರದಲ್ಲಿ ಗಂಡಸರಿಗಿಂತ ಮುಂದು!

Chanakya Niti : ಆಚಾರ್ಯ ಚಾಣಕ್ಯ ಮೇಧಾವಿ ಅರ್ಥಶಾಸ್ತ್ರಜ್ಞರು. ಇವರ ಜೀವನದ ಅನುಭವವೇ ನೀತಿ ಪಾಠ. ಇದನ್ನು ಪಾಲಿಸಿ ನಡೆದರೆ ಜೀವನದಲ್ಲಿ ಯಶಸ್ಸು ಸಾಧಿಸಿದವರು ಅನೇಕರು. ಮಹಿಳೆಯರು ಪುರುಷರಷ್ಟೇ ಸಾಮರ್ಥ್ಯ, ಧೈರ್ಯ ಹಾಗೂ ಶಕ್ತಿ ಉಳ್ಳವರು. ಆಚಾರ್ಯ ಚಾಣಕ್ಯರವರ (Chanakya Niti) ಪ್ರಕಾರ ಪುರುಷರಿಗಿಂತ ಮಹಿಳೆಯರೇ ಮುಂದಿದ್ದಾರೆ.

 

ಯಾವುದೆಲ್ಲ ವಿಚಾರದಲ್ಲಿ ಮಹಿಳೆಯರು ಪುರುಷರಿಕ್ಕಿಂತ ಮುಂದೆ ಎಂದು ತಿಳಿಯೋಣ.

• ಮಹಿಳೆಯರು ಎಂತಹ ಕಷ್ಟವಿದ್ದರೂ ಅದರಿಂದ ಹೇಗೆ ಪಾರಾಗುವುದು? ಆ ಸಮಸ್ಯೆ ಹೇಗೆ ಬಗೆಹರಿಸಿಕೊಳ್ಳುವುದು? ಎಂಬ ಬಗ್ಗೆ ಯೋಚನೆ ಮಾಡುತ್ತಾರೆ. ಆದರೆ ಪುರುಷರಿಗೆ ಇದು ತಿಳಿಯುದಿಲ್ಲ. ಆದರೆ ಮಹಿಳೆಯರು ಅದರ ಬಗ್ಗೆ ಯೋಚಿಸಿ ನಿರಾಳವಾಗಿ ಬುದ್ದಿವಂತಿಕೆಯಿಂದ ಸಮಸ್ಯೆ ಪರಿಹರಿಸಿಕೊಳ್ಳುತ್ತಾರೆ.

• ಪುರುಷರಿಗೆ ಎಷ್ಟೇ ಧೈರ್ಯವಿದ್ದರೂ ಕೆಲ ಸಮಯದಲ್ಲಿ ಧೃತಿಗೆಡುತ್ತಾರೆ. ಮಹಿಳೆಯರಿಗಿಂತ ಆರು ಪಟ್ಟು ಜಾಸ್ತಿ ಧೈರ್ಯವಿದ್ದರೂ ಪ್ರಯೋಜನವಾಗುವುದಿಲ್ಲ. ಧೈರ್ಯದಲ್ಲಿಯೂ ಮಹಿಳೆಯರೇ ಉತ್ತಮ.

• ಮಹಿಳೆಯರಿಗೆ ಹೆಚ್ಚಾಗಿ ಆರೋಗ್ಯದ ಸಮಸ್ಯೆ ಕಾಡುತ್ತದೆ. ಹಾಗಾಗಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಯ ಅಗತ್ಯವಿರುತ್ತದೆ. ಇಂದರಿಂದಾಗಿ ಹೆಚ್ಚಿನ ಹಸಿವಾಗುತ್ತೆ. ಹಾಗಾಗಿ ಆಹಾರವು ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಸೇವಿಸುತ್ತಾರೆ.

• ಮಹಿಳೆಯರು ಎಲ್ಲ ವಿಷಯದಲ್ಲಿಯೂ ಸೂಕ್ಷ್ಮತೆಯಾಗಿ ವಿಚಾರಿಸುತ್ತಾರೆ. ಹೀಗಾಗಿ ಅತಿಯಾಗಿ ದುಃಖ ನೋವು ಅನುಭವಿಸುತ್ತಾರೆ. ಸೂಕ್ಷ್ಮತೆಯಲ್ಲಿ ಎಂಟು ಪಟ್ಟು ಮಹಿಳೆಯರೇ ಮುಂದಿದ್ದಾರೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ . ಮಹಿಳೆ ಎಲ್ಲ ಸಾಧನೆಗಳ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ

Leave A Reply

Your email address will not be published.