Rashmika Mandanna : ನಾನು ಒಂದು ಮಾತಾಡಿದ್ರೆ 2-3 ಕಾಂಟ್ರವರ್ಸಿ ಆಗುತ್ತೆ ಎಂದಳು ರಶ್ಮಿಕಾ ಮಂದಣ್ಣ!

Rashmika-Mandanna: ಕಿರಿಕ್ ಪಾರ್ಟಿ (Kirik Party)ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ(Rashmika-Mandanna) ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋದು ಕಾಮನ್ ಆಗಿಬಿಟ್ಟಿದೆ. ತನ್ನ ಸಿನೆಮಾದ ವಿಚಾರಕ್ಕಿಂತಲೂ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಗಮನ ಸೆಳೆದಿರುವ ನಟಿ ಕಾಂಟ್ರವರ್ಸಿ ಲೇಡಿ(Controversy Lady)ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಹೆಚ್ಚು ಟ್ರೊಲಿಂಗ್ ಆಗುವ ವಿಚಾರದಲ್ಲಿಯೂ ಟಾಪ್ ಲಿಸ್ಟ್ ನಲ್ಲಿದ್ದಾರೆ. ಕಾಲಿವುಡ್, ಬಾಲಿವುಡ್(Bollywood) ಹೀಗೆ ಎಲ್ಲ ಭಾಷೆಯ ಸಿನಿಮಾ ರಂಗದಲ್ಲೂ ನಟಿಸುವ ಅವಕಾಶ ಲಭ್ಯವಾದರು ಕೂಡ ತೆಲುಗು(Telugu) ಚಿತ್ರರಂಗದಲ್ಲಿ ಸಿಕ್ಕಷ್ಟು ಯಶಸ್ಸು ಮತ್ತೆಲ್ಲೂ ಸಿಕ್ಕಿಲ್ಲ ಎನ್ನುವುದು ಅಷ್ಟೇ ಸತ್ಯ.

 

ತನ್ನ ಡ್ರೆಸ್ಸಿಂಗ್ ಸೆನ್ಸ್, ಮೋಹಕ ಮೈ ಮಾಟ ಕಾಣುವ ತುಂಡುಡುಗೆಯ ಜೊತೆಗೆ ವಿಭಿನ್ನ ವಸ್ತ್ರ ವಿನ್ಯಾಸ ಧರಿಸಿ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ನ್ಯಾಷನಲ್ ಕ್ರಷ್ ಪಡ್ಡೆ ಹುಡುಗರ ಎದೆ ಬಡಿತ ಜೋರಾಗುವಂತೆ ಮಾಡಿ ಹುಡುಗರ ನಿದ್ದೆ ಗೆಡಿಸುವುದು ಸಾಮಾನ್ಯ. ಹೀಗಾಗಿ ಟ್ರೊಲ್ ಆಗುವುದುಂಟು. ಏನೇ ಮಾಡಿದರೂ ಟ್ರೊಲ್ ಮಾಡುವ ಮಂದಿ ಇರುವಂತೆ ಕಿರಿಕ್ ಬೆಡಗಿಯನ್ನೂ ಮೆಚ್ಚಿಕೊಂಡು ಸಾಥ್ ನೀಡುವ ಅಭಿಮಾನಿಗಳು(Fans) ಕೂಡ ಅಷ್ಟೆ ಸಂಖ್ಯೆಯಲ್ಲಿದ್ದಾರೆ ಅನ್ನೋದು ಸುಳ್ಳಲ್ಲ. ಹೀಗಾಗಿ, ತಮ್ಮ ಪೋಸ್ಟ್ , ಫೋಟೊ ಮೂಲಕ ರಶ್ಮಿಕಾ ಅಭಿಮಾನಿಗಳಿಗೆ ಖುಷಿ ಪಡಿಸುವ ಪ್ರಯತ್ನ ನಡೆಸುತ್ತಲೇ ಇರುತ್ತಾರೆ.

ಮೈತ್ರಿ ಮೂವಿ ಮೇಕರ್ಸ್ (Maitri Movie Makers) ನಿರ್ಮಾಣದ ಪುಷ್ಪ ಸಿನಿಮಾದಲ್ಲಿ ನಟಿಸಿ ದೊಡ್ದ ನೇಮ್ ಫೇಮ್ ಪಡೆದುಕೊಂಡಿದ್ದಾರೆ. ನ್ಯಾಶನಲ್ ಕ್ರಷ್ ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ (Tollywood Shreevalli) ಆಗಿ ಸದ್ಯ ಪುಷ್ಪ 2ನಲ್ಲೂ (Pushpa 2) ಬಣ್ಣ ಹಚ್ಚುತ್ತಿದ್ದಾರೆ. ಇದರ ನಡುವೆ ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ (Maitri Movie) ಮೇಕರ್ಸ್ ತಯಾರಿಸುತ್ತಿರುವ ಮತ್ತೊಂದು ಹೊಸ ಚಿತ್ರಕ್ಕೆ ವೆಂಕಿ ನಿರ್ದೇಶನ ಮಾಡಲಿದ್ದು, ಇದರಲ್ಲಿ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದು, ಸದ್ಯ ಈ ವಿಚಾರ ಅಭಿಮಾನಿಗಳ ಪಾಲಿನ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. 2020ರಲ್ಲಿ ನಟ ನಿತಿನ್(Nithin), ರಶ್ಮಿಕಾ ಮಂದಣ್ಣ(Rashmika-Mandanna), ನಿರ್ದೇಶಕ ವೆಂಕಿ ಕುಡುಮುಲ ಸೇರಿ ಮಾಡಿದ್ದ ‘ಭೀಷ್ಮ’ ಸಿನಿಮಾ ದೊಡ್ದ ಯಶಸ್ಸು ಗಳಿಸಿತ್ತು. ಇದೀಗ, ಈ ತ್ರಿವಳಿಗಳು ಮತ್ತೊಮ್ಮೆ ಜೊತೆಯಾಗಿದ್ದು, ಹೀಗಾಗಿ ಈ ಸಿನಿಮಾ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಇದರ ವಿಶೇಷ ಪ್ರೋಮೋ ಒಂದನ್ನು ಚಿತ್ರ ತಂಡ ಹಂಚಿಕೊಂಡಿದೆ.

ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ನಿರ್ಮಾಣ ಮಾಡುತ್ತಿದ್ದು, ಪಬ್ಲಿಸಿಟಿ ಡಿಸೈನರ್ ಆಗಿ ಗೋಪಿ ಪ್ರಸನ್ನ, ಸಂಕಲನ ಪ್ರವೀಣ್ ಪುಡಿ, ಛಾಯಾಗ್ರಾಹಕರಾಗಿ ಸಾಯಿ ಶ್ರೀರಾಮ್ ಕಾರ್ಯನಿರ್ವ ಹಿಸುತ್ತಿದ್ದಾರೆ. ಈ ಚಿತ್ರದ ಕಲಾ ನಿರ್ದೇಶಕರಾಗಿ ರಾಮ್ ಕುಮಾರ್ ಅವರು ಕೆಲಸ ಮಾಡುತ್ತಿದ್ದಾರೆ. ಈ ಹೊಸ ಸಿನಿಮಾ ಹಾಸ್ಯದ ಎಳೆಯನ್ನ ಹೊಂದಿದ್ದು,ಹೊಸ ಸಿನಿಮಾದ ಘೋಷಣೆಗಾಗಿ ಫನ್ನಿ ವಿಡಿಯೋವೊಂದನ್ನು ಚಿತ್ರತಂಡ ಶೇರ್ ಮಾಡಿದೆ. ಈ ಸಂಭಾಷಣೆ ತಮಿಳಿನಲ್ಲಿದ್ದು (Tamil), ಇದರಲ್ಲಿ ಮೊದಲಿಗೆ ನಿತಿನ್‌ ಅವರು, ನಮ್ಮ ನಿರ್ದೇಶಕರು ಸ್ಕ್ರಿಪ್ಟ್‌ ಬರೆಯುವಾಗ ‘ಓಂ’ ಅಂತ ಬರೆಯುವ ಮೊದಲು ರಶ್ಮಿಕಾ ಎಂದೇ ಬರೆಯುತ್ತಾರೆ ಎನ್ನುವ ಮೂಲಕ ನ್ಯಾಷನಲ್ ಕ್ರಷ್ ಕಾಲೆಳೆಯುವ ಪ್ರಯತ್ನ ನಡೆಸಿದ್ದಾರೆ.

ಪ್ರಮೋಷನ್​ (Promotion)ಮಾಡುವ ಸಮಯಕ್ಕೂ ಮೊದಲೇ ಹಾಜರಾದ ಕಿರಿಕ್ ಬೆಡಗಿಯನ್ನ ಉದ್ದೇಶಿಸಿ ನಿತಿನ್​ ಅವರು, ‘ಇಷ್ಟು ಬೇಗ ಬಂದು ಏನ್ ಮಾಡ್ತಾ ಇದ್ದೀರಾ’ ಎಂದು ಕೇಳಿದ್ದಾರೆ. ಇದಕ್ಕೆ ರಶ್ಮಿಕಾ, ದೆಹಲಿ, ಬಾಂಬೆ ಫ್ಯಾನ್ಸ್ ಜೊತೆಗೆ ಇನ್‌ಸ್ಟಾಗ್ರಾಮ್‌ ಲೈವ್(Instagram Live) ಮಾಡುತ್ತಾ ಕೂತಿದ್ದೆ.ಈ ಶೂಟ್ ಆದ ಹಾಗೇ ಬೆಂಗಳೂರು, ಕೊಚ್ಚಿ, ಚೆನ್ನೈ….’ ಎಂದು ಇನ್ನೇನೋ ಕಥೆ ಹೇಳಬೇಕು ಅಷ್ಟರಲ್ಲಿ ನಿತಿನ್​, ಓಹೋ!! ಸಾಕು ಸಾಕು… ಏನೇ ಆದರೂ ನ್ಯಾಷನಲ್‌ ಕ್ರಷ್​ (National Crush) ಅಂದ ಮೇಲೆ ಹೀಗೆ ಇರುತ್ತದೆ ಎಂದು ಹೇಳಿ, ಬರೀ ಲೈವಾ ಅಥವಾ ಏನಾದ್ರೂ ಕಾಂಟ್ರವರ್ಸಿನಾ ಎಂದು ಪ್ರಶ್ನಿಸಿದ್ದಾರೆ.

ರಶ್ಮಿಕಾ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದು, ಇಲ್ಲಪ್ಪಾ ಇಲ್ಲ. ನಾನೇನೂ ಕಾಂಟ್ರವರ್ಸಿ ಮಾಡೋದಿಲ್ಲ. ಆದರೆ, ಏನು ಮಾಡೋಣ! ಉಫ್​… ನಾನು ಒಂದೇ ಒಂದು ಮಾತು ಹೇಳಿದ್ರೂ ಎರಡ್ಮೂರು ಕಾಂಟ್ರವರ್ಸಿ ತಂತಾನೇ ಆಗಿ ಬಿಡುತ್ತೆ. ಏನ್​ ಮಾಡೋಕಾಗತ್ತೆ ಎಂದು ನಿತಿನ್ ಅವರ ಬಳಿ ತಮ್ಮ ಯಶೋಗಾಥೆಯನ್ನ ಹಂಚಿಕೊಂಡಿದ್ದಾರೆ. ಅದಕ್ಕೆ ನಿತಿನ್​, ಇರ್ಲಿ, ನಿಮ್ಮದೇ ಬೆಸ್ಟ್!! ನಾನು ಒಂದು ಹಿಟ್ ನೀಡಿದ್ರೆ, ಎರಡ್ಮೂರು ಸಿನಿಮಾ ಫ್ಲಾಪ್ ಆಗ್ತಾವೆ ಎಂದು ಪ್ರತಿಕ್ರಯಿಸಿದ್ದಾರೆ. ನಿತಿನ್, ರಶ್ಮಿಕಾ ಹಾಸ್ಯದ ರೂಪದಲ್ಲಿ ಮಾತನಾಡಿಕೊಂಡಿದ್ದು, ಇಬ್ಬರೂ ಟ್ರೋಲಿಂಗ್​, ಫ್ಲಾಪ್​ ಇತ್ಯಾದಿ ವಿಷಯಗಳ ಕುರಿತು ಮಾತಾಡಿಕೊಂಡಿರುವ ಫನ್ನಿ ವೀಡಿಯೋ (Funny video) ಎಲ್ಲೆಡೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: Actress Parineeti Chopra : MP ಜೊತೆ ಬಾಲಿವುಡ್ ಬೆಡಗಿಯ ಪ್ರಣಯದಾಟ! ಇದು ಪ್ರೀತಿನಾ,ಸ್ನೇಹನಾ…ಸಖತ್ ವೈರಲ್ ಸುದ್ದಿ!

Leave A Reply

Your email address will not be published.