Om Prakash : ನಿರ್ದೇಶಕ ಓಂ ಪ್ರಕಾಶ್ ಅವರಿಗೆ ‘ಕಿರಿಕ್ ಕೀರ್ತಿ’ ಸಿನಿಮಾ ಬಗ್ಗೆ ಬೆಚ್ಚಿಬೀಳಿಸೋ ಪ್ರಶ್ನೆ ಮಾಡಿದ ಕಿರಿಕ್ ಕೀರ್ತಿ!

Om Prakash : ಕನ್ನಡ ಪರ ಹೋರಾಟದ ಜೊತೆಗೆ ಖಡಕ್ ಮಾತುಗಳಿಂದಲೇ ಹೆಚ್ಚು ಮನೆ ಮಾತಾಗಿದ್ದ ಕಿರಿಕ್ ಕೀರ್ತಿ(Kirik Keerthi) ತಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಇಹ ಲೋಕಕ್ಕೆ ವಿದಾಯ ಹೇಳುವ ತೀರ್ಮಾನ ಕೂಡ ಮಾಡಿದ್ದರ ಕುರಿತು ಇತ್ತೀಚೆಗಷ್ಟೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಇದರ ನಡುವೆ ಕಿರಿಕ್ ಕೀರ್ತಿ ಪತ್ನಿ ನಡುವೆ ಕಿರಿಕ್ ಆಗಿ ಡೈವೋರ್ಸ್ ಹಂತಕ್ಕೆ ತಲುಪಿದೆ ಅನ್ನೋ ವಿಚಾರ ಎಲ್ಲೆಡೆ ಕೇಳಿಬರುತ್ತಿತ್ತು. ಇದ್ದಕ್ಕೆ ಪುಷ್ಟಿ ನೀಡುವಂತೆ ಒಗಟಾಗಿ ಉತ್ತರ ಕೂಡ ನೀಡಿದ್ದರು ಕೀರ್ತಿ. ಈ ನಡುವೆ ಓಂ ಪ್ರಕಾಶ್(Om Prakash) ಇತ್ತೀಚೆಗಷ್ಟೆ ಕಿರಿಕ್ ಕೀರ್ತಿ ಮೇಲೆ ಆರೋಪ ಮಾಡಿದ್ದು, ಇದಕ್ಕೆ ಕೀರ್ತಿ ಅವರು ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

 

ಬಿಗ್ ಬಾಸ್ ಸೀನಸ್ 4ರಲ್ಲಿ (Bigg Boss Season 4)ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚಿದ್ದ ಕಿರಿಕ್ ಕೀರ್ತಿ ಮತ್ತು ಓಂ ಪ್ರಕಾಶ್ ಸ್ಪರ್ಧಿಯಾಗಿ ಇವರಿಬ್ಬರ ನಡುವೆ ಒಳ್ಳೆಯ ಸ್ನೇಹ ಬಾಂಧವ್ಯ ಕೂಡ ಬೆಸೆದಿತ್ತು. ಈ ಸಂದರ್ಭ ಜೊತೆಯಾಗಿ ಸಿನಿಮಾ ಮಾಡಬೇಕು ಎಂಬ ಯೋಜನೆ ಕೂಡ ಹಾಕಿಕೊಂಡಿದ್ದರು.ಆದರೆ, ದೊಡ್ಮನೆಯಿಂದ ಹೊರ ಬಂದ ಮೇಲೆ ಏನಾಯ್ತು? ಈ ಪ್ಲಾನ್ ಯಾಕೆ ಕಾರ್ಯ ರೂಪಕ್ಕೆ ಬಂದಿಲ್ಲ ಎಂಬ ಪ್ರಶ್ನೆ ಜನರ ಮನದಲ್ಲಿ ಮೂಡಿತ್ತು.

ಖಾಸಗಿ ವಾಹಿನಿ ಸಂದರ್ಶನದ (Interview)ಸಂದರ್ಭ ನಿರ್ದೇಶಕ ಓಂ ಪ್ರಕಾಶ್ ತಮ್ಮ ಮುಂಬರುವ ಸಿನಿಮಾ ʼಕಿರಿಕ್ ಕೀರ್ತಿ’ ಬಿಡುಗಡೆಯಾಗಲೂ ವಿಳಂಬವಾಗುತ್ತಿರುವ ಬಗ್ಗೆ ಕಾರಣ ನೀಡಿದ್ದು, ಇದೇ ವೇಳೆ, ಕಿರಿಕ್ ಕೀರ್ತಿ ಮೇಲೆ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ, ಈ ಆರೋಪಕ್ಕೆ ಕಿರಿಕ್ ಕೀರ್ತಿ ಉತ್ತರ ನೀಡಿದ್ದಾರೆ.

ವೈಯಕ್ತಿಕ ಬದುಕಿನಲ್ಲಿ ಆಗುತ್ತಿರುವ ಘಟನೆಗಳಿಂದ ಮನನೊಂದ ಕಿರಿಕ್ ಕೀರ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿದ್ದರು. ಇದರ ನಡುವೆ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದು ಸಂಬಂಧ ಅವರ ವೈಯಕ್ತಿಕ ವಿಚಾರಗಳ ಕುರಿತು ಸಾಕಷ್ಟು ಟ್ರೋಲ್ ಆಗುತ್ತಿದ್ದು,( Kirik keerthi on Om Prakash)ಖ್ಯಾತ ನಿರ್ದೇಶಕ ಓಂ ಪ್ರಕಾಶ್ ಅವರ ಕುರಿತು ಕೀರ್ತಿ ಹೇಳಿರುವ ವಿಚಾರ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.

ಸಿನಿಮಾದಿಂದ ಸದ್ಯ ಯಾರೆಲ್ಲ ಹೊರ ಬಿದ್ದಿದ್ದಾರೆ? ಸಿನಿಮಾದಿಂದ ಯಾರನ್ನೆಲ್ಲ ತೆಗೆಯಲಾಗಿದೆ. ಅಷ್ಟಕ್ಕೂ ಸಿನಿಮಾ ಅರ್ಧಕ್ಕೆ ನಿಂತು ಹೋಗಿದ್ದು ಯಾಕೆ? ನಿರಂತರವಾಗಿ ಒಬ್ಬರ ಮೇಲೊಬ್ಬರಂತೆ ನಾಯಕಿಯರು ಯಾಕೆ ಚೇಂಜ್ ಆಗುತ್ತಾರೆ? ಇದರ ಬಗ್ಗೆ ದಯವಿಟ್ಟು ಚರ್ಚೆ ಮಾಡೋಣ ಎಂದು ಕಿರಿಕ್ ಕೀರ್ತಿ ಓಂ ಪ್ರಕಾಶ್ ಅವರಿಗೆ ವೀಡಿಯೋ ಮೂಲಕ ತಮ್ಮ ಮೇಲೆ ಆರೋಪಕ್ಕೆ ಸ್ಪಷ್ಟ ಉತ್ತರ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮುಂಚೆ ಯಾರು ಏನೇ ಮಾತನಾಡಿದ್ದರೂ ನಾನು ಉತ್ತರ ನೀಡಿಲ್ಲ ಎಂದಾದರೆ ಕೀರ್ತಿ ಮತ್ತಷ್ಟು ಕುಗ್ಗಿ ಹೋಗಿದ್ದಾನೆ ಎಂದುಕೊಳ್ಳುತ್ತಾರೆ. ಹೀಗಾಗಿ , ಉತ್ತರ ನೀಡಲು ನಾನು ರೆಡಿ. ನನ್ನ ಸವಾಲಿಗೆ ಉತ್ತರ ನೀಡಲು ನೀವು ರೆಡಿನಾ ಎಂಬಂತೆ ಕೀರ್ತಿ ಪ್ರಶ್ನೆ ಮಾಡಿರುವಂತಿದೆ.

ಸದ್ಯ ಕಿರಿಕ್ ಕೀರ್ತಿ ವಿಡಿಯೋ(video) ಒಂದನ್ನು ಶೇರ್ ಮಾಡಿದ್ದು, ಗೌರವಾನ್ವಿತ ಓಂ ಪ್ರಕಾಶ್ ಸರ್ ಅವರೇ ಸಿನಿಮಾ ಯಾಕೆ ನಿಂತ್ತು ಹೋಗಿದ್ದು? ನಾನು ಯಾಕೆ ಸಿನಿಮಾದಿಂದ ಹೊರ ಬಂದೆ? ಮೊದಲ ಹೀರೋಯಿನ್ ಸಿನಿಮಾದಿಂದ ಯಾಕೆ ಹೊರ ಬಿದ್ದಿದ್ದು? ಫೋಟೋಶೂಟ್ ದಿನ ಆಗಿದ್ದಾದರು ಏನು? ಬಿಗ್ ಬಾಸ್ ಮೈಸೂರು ಈವೆಂಟ್ ದಿನ ಯಾಕೆ ಗಲಾಟೆ ಆಗಿದ್ದು? ಇದರ ನಂತರ ಮೊದಲ ಹೀರೋಯಿನ್ ಯಾಕೆ ಬಿಟ್ಟು ಹೋಗಿದ್ದು? ಹೀಗೇ ಅನೇಕ ವಿಚಾರಗಳ ಕುರಿತಾಗಿ ಕಿರಿಕ್ ಕೀರ್ತಿ ಪ್ರಶ್ನೆ ಮಾಡಿದ್ದಾರೆ. ಇದಲ್ಲದೆ, ಸೆಂಕೆಂಡ್ ಹೀರೋಯಿನ್ ಅನ್ನು ಸೆಲೆಕ್ಟ್ ಮಾಡಿದ್ದು ಹೇಗೆ? ಮೈಸೂರಿನಲ್ಲಿ ಸ್ಕ್ರಿಪ್ಟ್ ಎಂದು ಹೇಳಿ ರೂಮಿನಲ್ಲಿ ಹಾಕಿದ ಮೇಲೆ ಏನಾಯ್ತು?ಆ ಬಳಿಕ ಸೆಕೆಂಡ್ ಹೀರೋಯಿನ್ ಸಿನಿಮಾದಿಂದ ಯಾಕೆ ಬಿಟ್ಟು ಹೋಗಿದ್ದು? ಇದೆಲ್ಲ ಆದ ಮೇಲೆ ನಾನು ನಿಮಗೆ ಏನು ಹೇಳಿ ಹೊರ ನಡೆದದ್ದು? ಈ ಎಲ್ಲ ವಿಚಾರವನ್ನು ನೇರ ನೇರ ಲೈವ್ ನಲ್ಲಿ ಚರ್ಚೆ ಮಾಡೋಣ ಏನಂತೀರಾ? ಎಂದು ಕಿರಿಕ್ ಕೀರ್ತಿ ಆರೋಪ ಮಾಡಿದ್ದ ಓಂ ಪ್ರಕಾಶ್ ಅವರಿಗೆ ಸವಾಲು ಹಾಕಿದ್ದಾರೆ.

 

ಇದನ್ನೂ ಓದಿ : Relieving Period Pain : ಮುಟ್ಟಾದಾಗ ಈ 5 ಪಾನೀಯ ಕುಡಿದರೆ, ನೋವು ನಿವಾರಣೆ ಖಂಡಿತ!

Leave A Reply

Your email address will not be published.