Shri Ram : ಒಂದು ಲಕ್ಷಕ್ಕೂ ಅಧಿಕ ಕಾಳುಗಳ ಮೇಲೆ ಶ್ರೀರಾಮನ ಹೆಸರು ಬರೆದ ಭಕ್ತೆ!
Shri Ram: ದೇವರನ್ನು ಹೀಗೆಯೇ ಪೂಜಿಸಬೇಕು ಎಂಬ ನಿಯಮ ಇಲ್ಲ. ಆದರೆ ಯಾವ ರೀತಿ ದೇವರನ್ನು ಪೂಜಿಸಿದರು ಭಕ್ತಿ ಪೂರ್ವಕವಾಗಿರುತ್ತದೆ. ಹಾಗೆಯೇ ತೆಲಂಗಾಣದಲ್ಲಿ ಮಹಿಳೆ ಭಕ್ತರೊಬ್ಬರು 1,01,116 ಅಕ್ಕಿ ಕಾಳುಗಳ ಮೇಲೆ ಶ್ರೀರಾಮನ (Shri Ram) ಹೆಸರನ್ನು ಬರೆದು ಭದ್ರಾದ್ರಿ ಶ್ರೀ ಸೀತಾ (Seetha) ರಾಮಚಂದ್ರ ಸ್ವಾಮಿ ದೇವಸ್ಥಾನದ ಅಧಿಕಾರಿಗಳಿಗೆ ಹಸ್ತಾಂತರಿಸಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯ ಪ್ರಕಾರ, ಆಧುನಿಕ ಜಗತ್ತಿನಲ್ಲಿ ಯುವಕರಲ್ಲಿ ಆಧ್ಯಾತ್ಮಿಕ ಭಾವನೆಯನ್ನು ತುಂಬುವ ಸಲುವಾಗಿ ಭತ್ತದ ಕಾಳುಗಳ ಮೇಲೆ ಭಗವಾನ್ ರಾಮನ ಹೆಸರನ್ನು ಬರೆಯುವ ಕಾರ್ಯಕ್ರಮವನ್ನು 2016 ರಲ್ಲಿ ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಅದಲ್ಲದೆ ಇಲ್ಲಿಯವರೆಗೆ 7,52,864 ಅಕ್ಕಿ ಕಾಳುಗಳ ಮೇಲೆ ಭಗವಾನ್ ರಾಮನ ಹೆಸರನ್ನು ಬರೆದಿರುವುದಾಗಿ ಹೇಳಿದ್ದಾರೆ.
ಸದ್ಯ ತೆಲಂಗಾಣದ ಹೈದರಾಬಾದ್‌ಗೆ ಸೇರಿದ ಶ್ರೀರಾಮನ ಭಕ್ತೆ ಮಲ್ಲಿ ವಿಷ್ಣು ವಂದನಾ ಅವರು ಏಳು ಲಕ್ಷ ಅಕ್ಕಿ ಕಾಳುಗಳ ಮೇಲೆ ಶ್ರೀರಾಮನ ಹೆಸರನ್ನು ಬರೆದು 1,01,116 ಅಕ್ಕಿ ಕಾಳುಗಳನ್ನು ಭಗವಂತನ ಹೆಸರಿನೊಂದಿಗೆ ಹಸ್ತಾಂತರಿಸಿದ್ದಾರೆ. ಈ ಅಕ್ಕಿ ಕಾಳುಗಳನ್ನು ಮಾರ್ಚ್ 30 ರಂದು ನಡೆಯಲಿರುವ ಭಗವಾನ್ ರಾಮ ಮತ್ತು ಸೀತಾ ದೇವಿಯ ವಿವಾಹದ ಸಮಯದಲ್ಲಿ ಪವಿತ್ರವಾದ ಅಕ್ಷತೆ ಕಾಳುಗಳನ್ನು ಎಂದು ಬಳಸಲಾಗುತ್ತದೆ. ಈ ರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ಮದುವೆ ಸಮಯದಲ್ಲಿ ಅಕ್ಷತೆ ಕಾಳುಗಳನ್ನು ಭಕ್ತರು ಹಾಕೋದು ಪ್ರಖ್ಯಾತಿ ಎಂದಿದ್ದಾರೆ.
ಅದಲ್ಲದೆ ಆಂಧ್ರಪ್ರದೇಶದ ಅಲ್ಲಗಡ್ಡಾ, ವಿಜಯನಗರಂನಲ್ಲಿರುವ ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಾಲಯಗಳು ಮತ್ತು ತೆಲಂಗಾಣದ ಕರೀಂನಗರ ಜಿಲ್ಲೆಯ ನೆರೆಡುಚರ್ಲಾ, ಹೈದರಾಬಾದ್, ಇಲ್ಲಂತುಕುಂಟಾ ದೇವಾಲಯಗಳ ಅಧಿಕಾರಿಗಳಿಗೆ ಶ್ರೀರಾಮನ ಹೆಸರಿನೊಂದಿಗೆ ಉಳಿದ ಭತ್ತದ ಕಾಳುಗಳನ್ನು ಹಸ್ತಾಂತರಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಮಲ್ಲಿ ವಿಷ್ಣು ವಂದನಾ ಅವರು ಬಾಲ್ಯದಿಂದಲೂ ತನಗೆ ದೈವಭಕ್ತಿಯಲ್ಲಿ ಸಹಜವಾಗಿಯೇ ಆಸಕ್ತಿಯಿದ್ದು, ಈ ಕಾರಣದಿಂದಲೇ ಸ್ವಾಮಿಯ ಹೆಸರನ್ನು ಈ ರೀತಿ ಅಕ್ಕಿ ಕಾಳುಗಳ ಮೇಲೆ ಬರೆದಿರುವುದಾಗಿದೆ ಎಂದು ಸ್ಪಷ್ಟಪಡಿಸಿದ್ದು, ಒಟ್ಟಿನಲ್ಲಿ ಆಧುನಿಕ ಕಾಲದಲ್ಲೂ ಇಂತಹ ಭಕ್ತರು ಇರುವುದು ಹೆಮ್ಮೆಯ ವಿಷಯ ಆಗಿದೆ.