DA Hike : ಡಿಎ ಹೆಚ್ಚಳ ಕುರಿತು ಸರಕಾರಿ ನೌಕರರಿಗೊಂದು ಸಿಹಿ ಸುದ್ದಿ!

DA Hike: ಇಂದು ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ದೇಶದ ಕೇಂದ್ರ ನೌಕರರಿಗೆ (government employees) ಸರ್ಕಾರ ಸಿಹಿ ಸುದ್ದಿ ನೀಡಲಿದೆ. ಏಳನೇ ವೇತನ ಆಯೋಗದಡಿ (7th Pay Commission) ತುಟ್ಟಿ ಭತ್ಯೆ ಹೆಚ್ಚಳ (DA hike) ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಘೋಷಣೆ ಆಗಲಿದೆ.

 

ಶುಕ್ರವಾರ ಸಂಜೆ (ಇಂದು) 6.30ಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆ ನಡೆಯಲಿದ್ದು, ಈ ವೇಳೆ ತುಟ್ಟಿ ಭತ್ಯೆ (DA) ಹೆಚ್ಚಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರದಿಂದ ಘೋಷಣೆ ಆಗಲಿದೆ. ಹಾಗೆಯೇ ಈ ಬಾರಿ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಕೇಂದ್ರ ನೌಕರರ ತುಟ್ಟಿ ಭತ್ಯೆ ವಿಚಾರ ಬಹಳ ದಿನಗಳಿಂದ ಚರ್ಚೆಯಲ್ಲಿದೆ. ನೌಕರರು ಡಿಎ ಹೆಚ್ಚಳದ ನಿರೀಕ್ಷೆಯಲ್ಲಿದ್ದರು. ಇಂದು ಈ ನಿರೀಕ್ಷೆಗೆ ತೆರೆ ಬೀಳಲಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಕುರಿತು ಅಂಕಿ-ಅಂಶಗಳನ್ನು ಪರಿಶೀಲಿಸಲಾಗುತ್ತದೆ. ನಂತರ ಸಂಜೆ ತುಟ್ಟಿಭತ್ಯೆ ಹೆಚ್ಚಳದ ಪ್ರಕಟಣೆಯಾಗುವುದು. ಸಂಪುಟದ ಅನುಮೋದನೆಯ ನಂತರ ಈ ಬಗ್ಗೆ ಹಣಕಾಸು ಸಚಿವಾಲಯ ಮಾಹಿತಿ ತಿಳಿಸುತ್ತದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಪ್ರಸ್ತುತ, ಕೇಂದ್ರ ನೌಕರರಿಗೆ ಶೇ. 38ರಷ್ಟು ತುಟ್ಟಿಭತ್ಯೆಯನ್ನು ನೀಡಲಾಗುತ್ತಿದೆ. ಆದರೆ, ನೌಕರರು ಇದರ ಹೆಚ್ಚಳದ ನಿರೀಕ್ಷೆಯಲ್ಲಿದ್ದರು. ಅಂತೆಯೇ ಈ ಬಾರಿ ತುಟ್ಟಿಭತ್ಯೆ ಶೇ.4 ರಷ್ಟು ಏರಿಕೆಯಾಗಲಿದೆ. ಈ ಹೆಚ್ಚಳದ ನಂತರ ಅದು 42% ಕ್ಕೆ ತಲುಪಲಿದೆ. ಮಾರ್ಚ್ ನಿಂದ ಸರ್ಕಾರ ಹೆಚ್ಚಿಸಿದ ಡಿಎ ನೀಡಲಿದೆ ಎಂದು ಹೇಳಲಾಗಿದೆ.

ಸದ್ಯ, ಜುಲೈ 2022 ರಿಂದ ಡಿಸೆಂಬರ್ 2022 ರವರೆಗೆ, ಎಐಸಿಪಿಐ ಸೂಚ್ಯಂಕದಲ್ಲಿ 2.6 ಅಂಕಗಳ ಹೆಚ್ಚಳವಾಗಿದೆ. ಇದರಲ್ಲಿ ಒಟ್ಟು ತುಟ್ಟಿ ಭತ್ಯೆಯಲ್ಲಿ ಶೇ.4.40ರಷ್ಟು ಹೆಚ್ಚಳವಾಗಿದೆ. ಡಿಸೆಂಬರ್ 2022 ರ AICPI ಸೂಚ್ಯಂಕದ ಪ್ರಕಾರ, 4 ಪ್ರತಿಶತದಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಆಗ ಕೇಂದ್ರ ನೌಕರರ ವೇತನವು ತಿಂಗಳಿಗೆ 720 ರೂ. ಹೆಚ್ಚಳವಾಗಲಿದೆ. ಈ ಹೆಚ್ಚಳವು ಗರಿಷ್ಠ ವೇತನ ಶ್ರೇಣಿಗೆ ತಿಂಗಳಿಗೆ 2276 ರೂ.ಗಳಷ್ಟು ಇರಲಿದೆ. ಲೆವೆಲ್-3ರ ಕನಿಷ್ಠ ಮೂಲ ವೇತನ ಶ್ರೇಣಿಯನ್ನು 18,000 ರೂ.ಗೆ ಲೆಕ್ಕ ಹಾಕಲಾಗುತ್ತದೆ.

ಲೆವೆಲ್-3ರ ಕನಿಷ್ಠ ಮೂಲ ವೇತನ ಶ್ರೇಣಿಯನ್ನು 18,000 ರೂ.ಗೆ ಲೆಕ್ಕ ಹಾಕಲಾಗುತ್ತದೆ. ಉದ್ಯೋಗಿಯ ಮೂಲ ವೇತನ 18,000 ರೂ ಆಗಿದ್ದು, ಹೊಸ ತುಟ್ಟಿಭತ್ಯೆ (42%) ರೂ.7560/ತಿಂಗಳು ಇದ್ದು,
ಈವರೆಗಿನ ತುಟ್ಟಿಭತ್ಯೆ (38%) ರೂ.6840/ತಿಂಗಳು ಆಗಿದೆ.
7560-6840 = ರೂ 720/ತಿಂಗಳು ತುಟ್ಟಿಭತ್ಯೆ ಹೆಚ್ಚಾಗಿದೆ.
ಹಾಗೆಯೇ ವಾರ್ಷಿಕ ವೇತನದಲ್ಲಿ 720X12 = 8640 ರೂ ಹೆಚ್ಚಳವಾಗಿದೆ.

42% ತುಟ್ಟಿಭತ್ಯೆಯೊಂದಿಗೆ, ಹಂತ-3 ರ ಗರಿಷ್ಠ ಮೂಲ ವೇತನವನ್ನು ರೂ 56,900 ಎಂದು ಲೆಕ್ಕಹಾಕಲಾಗುತ್ತದೆ. ಉದ್ಯೋಗಿಯ ಮೂಲ ವೇತನ ರೂ 56900 ಆಗಿದ್ದು, ಹೊಸ ತುಟ್ಟಿಭತ್ಯೆ (42%) ರೂ 23898/ತಿಂಗಳು ಇದ್ದು, ಈವರೆಗಿನ ತುಟ್ಟಿಭತ್ಯೆ (38%) ರೂ 21622/ತಿಂಗಳು ಆಗಿದೆ. ನಂತರ 23898-21622 = ರೂ 2276/ತಿಂಗಳು ತುಟ್ಟಿಭತ್ಯೆ ಎಷ್ಟು ಹೆಚ್ಚಿದೆ. ವಾರ್ಷಿಕ ವೇತನದಲ್ಲಿ 2276X12 = 27312 ರೂ ಹೆಚ್ಚಳವಾಗುತ್ತದೆ.

Leave A Reply

Your email address will not be published.