Fast Food : ನಿಮಗಿದು ಗೊತ್ತೇ? ಭಾರತೀಯ ರು ಹೆಚ್ಚು ಖುಷಿಯಾದರೆ ತಿನ್ನುವ ತಿಂಡಿ ಯಾವುದು ಗೊತ್ತೇ?

Fast food :ಜನರಿಗೆ ಖುಷಿಯಾದಾಗ, ಆಸೆಯಾದಾಗ ಏನಾದ್ರೂ ತಿನ್ಬೇಕೆಂಬ ಮನಸ್ಸಾಗುತ್ತೆ. ಆವಾಗ ಎಲ್ಲರೂ ಬಯಸೋದು ಬಾಯಿಗೆ ರುಚಿ ನೀಡುವ ತಿಂಡಿಗಳನ್ನು. ಹಾಗಾದರೆ ಜನರು ಹೆಚ್ಚಾಗಿ ಯಾವ ತಿಂಡಿ (Fast food)ತಿನ್ನುತ್ತಾರೆ ಎನ್ನುವ ಬಗ್ಗೆ ಮಾಹಿತಿ ಎಲ್ಲಿದೆ ನೋಡಿ.

 

ನಮ್ಮ ಭಾರತಿಯ ಜನರು ಹೆಚ್ಚಾಗಿ ಸ್ನ್ಯಾಕ್ಸ್ ಫುಡ್ ಸೇವನೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ಇತ್ತಿಚಿನ ದಿನಗಳಲ್ಲಿ ಭಾರತಿಯ ಜನರು ಖುಷಿಯಾಗಿ ಇದ್ದಾಗ ಫಾಸ್ಟ್ ಫುಡ್ ಗಳನ್ನು ತಿನ್ನುವ ಅಭ್ಯಾಸ ಆಗಿಹೋಗಿದೆ. ಮನೆಲಿ ಎಷ್ಟೇ ಒಳ್ಳೆಯ ಫುಡ್ ಇದ್ದರು ಅವರಿಗೆ ಫಾಸ್ಟ್ ಫುಡ್ ಬೇಕು. ಈ ವಿಷಯ ಸತ್ಯ ಎಂದು ಗ್ರಾಹಕರ ಮೇಲೆ ನಡೆಸಿದ ಅಧ್ಯಯನದಲ್ಲಿ ತಿಳಿದಿದೆ. ಶೇ 72ರಷ್ಟು ಭಾರತೀಯರು ತಾವು ಖುಷಿಯಾಗಿದ್ದಾಗ ಸ್ನ್ಯಾಕ್ಸ್ ಅನ್ನೇ ತಿನ್ನಲು ಇಷ್ಟಪಡುವುದಾಗಿ ತಿಳಿಸಿದ್ದಾರೆ.

ಸ್ನ್ಯಾಕ್ಸ್ (Snacks)ಎನ್ನುವುದು ಎಲ್ಲರ ಜೀವನದಲ್ಲಿ ಒಂದು ಮುಖ್ಯ ಪಾತ್ರ ವಹಿಸಿದೆ. ಸ್ನ್ಯಾಕ್ಸ್ ಇಲ್ಲದೆ ಕೆಲವರಿಗೆ ಜೀವನ ಸಾಗಿಸುವುದು ಕಷ್ಟವಾಗಿ ಹೋಗಿದೆ. ಜನರ ಮನಸ್ಥಿತಿ ಗೆ ಸರಿಯಾಗಿ ನಮ್ಮ ಆಹಾರದ ಪದ್ಧತಿ ಇರುತ್ತದೆ. ಇದೀಗ ಸ್ನ್ಯಾಕ್ಸ್ ಜೊತೆ ಮನುಷ್ಯನಿಗೆ ಇರುವ ಸಂಬಂಧದ ಮೇಲೆ ಅಧ್ಯಯನವನ್ನು ನಡೆಸಿದ್ದಾರೆ. ಈ ಅಧ್ಯಯನದ ಪ್ರಕಾರ, ಜನರ ಮನಸ್ಸಿನ ಸ್ಥಿತಿಗೂ ಮತ್ತು ಸ್ನ್ಯಾಕ್ಸ್ ಸೇವಿಸುವುದ ನಡುವೆ ಒಂದು ಅವಿನಾಭಾವ ಸಂಬಂಧವಿದೆ ಎಂದು ತಿಳಿದುಬಂದಿದೆ. ಹಾಗೂ ಇದನ್ನು ಭಾರತೀಯ ಹೆಚ್ಚು ಜನರು ಒಪ್ಪಿಕೊಂಡಿದ್ದಾರೆ. ಶೇ 70ರಷ್ಟು ಜನರು ಸ್ನ್ಯಾಕ್ಸ್ ತಿಂದ ನಂತರ ತುಂಬಾ ಸಂತೋಷ ಹಾಗೂ ಉತ್ಸಾಹದಿಂದ ಇರುತ್ತಾರೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಈ ಅಧ್ಯಯನವನ್ನು ಪೂರ್ವ, ಉತ್ತರ, ದಕ್ಷಿಣ, ಪಶ್ಚಿಮ ಹೀಗೆ ಎಲ್ಲ ಕಡೆಯು ನಡೆಸಲಾಗಿತ್ತು. ಇವುಗಳಲ್ಲಿ ಬೆಂಗಳೂರು, ದೆಲ್ಲಿ, ಕಲ್ಕತ್ತ ,ಮುಂಬೈ, ಪುಣಾ, ಅಹಮದಾಬಾದ್, ಜೈಪುರ, ಚೆನ್ನೈ ಹಾಗೂ ಮುಂತಾದ 10 ನಗರಗಳನ್ನು ಸೇರಿಸಿ ಇದ್ದರು.

ಅಧ್ಯಯನದ ಪ್ರಕಾರ ಶೇ 72ರಷ್ಟು ಭಾರತೀಯರು ಖುಷಿಯಾದಾಗ ಸ್ನ್ಯಾಕ್ಸ್ ತಿನ್ನಲು ಇಷ್ಟಪಡುತ್ತಾರೆ ಎಂದು ಸಂಪೂರ್ಣವಾಗಿ ತಿಳಿದಿದೆ. ಹಾಗೂ ಶೇ 56ರಷ್ಟು ಮಂದಿ ಬೇಸರವಾದಾಗ ಹೆಚ್ಚು ತಿಂಡಿ ತಿನ್ನುತ್ತಾರೆ ಎಂದು ಕೂಡ ತಿಳಿದಿದೆ. ಶೇ 40 ರಷ್ಟು ಭಾರತಿಯ ಜನರಿಗೆ ಸ್ನ್ಯಾಕ್ಸ್ ತಿನ್ನುವುದರ ಮೂಲಕ ಬೇಸರದಿಂದ ಹೊರಬರಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತೆ ಎಂದಿದ್ದಾರೆ. ಶೇ 81ರಷ್ಟು ದಿಲ್ಲಿಯ ಮಂದಿ ಖುಷಿಯಾದಾಗ ಹೆಚ್ಚು ಸ್ನ್ಯಾಕ್ಸ್ ತಿನ್ನುತ್ತಾರೆ. ಹಾಗೂ ಹೈದರಾಬಾದ್ ದ ಜನರು ಶೇ 77, ಚೆನ್ನೈನಲ್ಲಿ ಶೇ 77 ಮತ್ತು ಕಲ್ಕತ್ತಾದಲ್ಲಿ ಶೇ 75, ಮುಂಬೈ ನಲ್ಲಿ ಶೇ 68, ಅಹಮದಾಬಾದ್ ನಲ್ಲಿ ಶೇಕಡಾ 68, ಪುಣೆಯಲ್ಲಿ ಶೇಕಡಾ 66, ಬೆಂಗಳೂರಿನಲ್ಲಿ ಶೇಕಡಾ 66, ಲಖನೌನಲ್ಲಿ ಶೇಕಡಾ 62, ಜೈಪುರದಲ್ಲಿ ಶೇಕಡಾ 61 ಜನರು ಖುಷಿಯಾಗಿದ್ದಾರೆ ತಿನ್ನುತ್ತಾರೆ. ಹಾಗೂ ಶೇ 60 ಕ್ಕಿಂತ ಹೆಚ್ಚು ದೆಹಲಿ, ಲಾಖನೌ, ಚೆನ್ನೈ ನ ಜನರು ಬೇಸರದಲ್ಲಿ ಇದ್ದಾಗ ಸ್ನ್ಯಾಕ್ಸ್ ಸೇವಿಸುತ್ತಾರೆ ಎಂದು ತಿಳಿಸಿದ್ದಾರೆ. ಈ ಅಧ್ಯಯನ ದಲ್ಲಿ ರಾಜಸ್ತಾನದಲ್ಲಿನ ಜೈಪುರ ಕೊನೆಯ ಸ್ಥಾನದಲ್ಲಿದೆ.

ಒಟ್ಟಾರೆ ಭಾರತೀಯರ ಕೆಲವು ಜನರು ಫಾಸ್ಟ್ ಫುಡ್ ಅನ್ನು ಕೇವಲ ಸ್ನ್ಯಾಕ್ಸ್ ಆಗಿ ತಿಂದರೆ, ಇನ್ನೂ ಭಾರತದ ಹೆಚ್ಚು ಜನರು ಫುಲ್ ಮೀಲ್ಸ್ ತಿನ್ನುವ ಅಭ್ಯಾಸ ಹೊಂದಿದ್ದಾರೆ.

ಇದನ್ನೂ ಓದಿ : Airtel prepaid offers : ತಿಂಗಳಿಗೆ ಕೇವಲ 250 ರೂ ರಿಚಾರ್ಜ್ ಮಾಡುವ ಮೂಲಕ ಆನಂದಿಸಬಹುದು ವಾರ್ಷಿಕ ಮಾನ್ಯತೆಯೊಂದಿಗೆ ಕರೆ, ಡೇಟಾ!

Leave A Reply

Your email address will not be published.