Election Black Money Seized : ಕರ್ನಾಟಕದಲ್ಲಿ ಚುನಾವಣೆ ಭರ್ಜರಿ ರಣತಂತ್ರ; ಮತದಾರರಿಗೆ ಹಂಚೋದಕ್ಕೆ ದಾಖಲೆಯಿಲ್ಲದ ಕಂತೆ ಕಂತೆ ಹಣ ಸೀರೆ, ಮದ್ಯ ಜಪ್ತಿ

Election Black Money Seized : ಬೆಳಗಾವಿ : ಮುಂಬರುವ ವಿಧಾನಸಭಾ ಚುನಾವಣೆಗೆ (Election Black Money Seized ) ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಮತ್ತೊಂದೆಡೆ ಒಂದು ಪಕ್ಷದಿಂದ ಮತ್ತೊಂದು ಪಕ್ಷ ಪೈಪೊಟಿ ಶುರುವಾಗಿದೆ ಮತದಾರರನ್ನು ಸೆಳೆಯೋದಕ್ಕೆ ಭರ್ಜರಿ ರಣತಂತ್ರ ರೂಪಿಸಲಾಗುತ್ತಿದೆ.

 

ಗದಗ ಮುಳಗುಂದ ರಸ್ತೆಯ ಆರ್.ಕೆ.ನಗರ ಚೆಕ್ ಪೋಸ್ಟ್​​ನಲ್ಲಿ ದಾಖಲೆಯಿಲ್ಲದ ಕಂತೆ ಕಂತೆ ಹಣ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಸ್ಥಳಕ್ಕೆ ಭೇಟಿ ನೀಡಿದ ಡಿಸಿ ಹಾಗೂ ಎಸ್​ಪಿ ನೀಡಿ ಪರಿಶೀಲನೆ ನಡೆಸಿ ಸುಮಾರು 15 ಲಕ್ಷ ವಶಕ್ಕೆ ಪಡೆದರು. ಲಕ್ಷ್ಮೇಶ್ವರದ ರಾಮಗೇರಿ ಚೆಕ್ ಪೋಸ್ಟ್​ನಲ್ಲಿ ದಾಖಲೆಯಿಲ್ಲದ ಸುಮಾರು‌ 4.50 ಲಕ್ಷ ವಶಕ್ಕೆ ಪಡೆದುಕೊಂಡಿದ್ದಾರೆ. ದಾಖಲೆಯಿಲ್ಲದ 1.90 ಕೋಟಿ ರೂ. ನಗದು ಪತ್ತೆ

ಕಲಬುರಗಿಯ ಜೇವರ್ಗಿ ಮತ್ತು ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್ ಚೆಕ್ ಪೋಸ್ಟ್​ನಲ್ಲಿ ದಾಖಲೆಯಿಲ್ಲದ 1.90 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಚಿಗರಳ್ಳಿ ಚೆಕ್​ ಪೋಸ್ಟ್​ ಬಳಿ 50 ಲಕ್ಷ ರೂಪಾಯಿ ಪತ್ತೆಯಾಗಿದ್ದು ಜಪ್ತಿ ಮಾಡಲಾಗಿದೆ. ಕಾರು​ ಡಿಕ್ಕಿಯಲ್ಲಿ ಅಕ್ರಮ 13 ಲಕ್ಷ ರೂ. ಅತ್ತ ಬೆಳಗಾವಿಯ ಪೀಪಲಕಟ್ಟಾ ಚೆಕ್​ ಪೋಸ್ಟ್​ ಬಳಿ ಆಕ್ಟೀವಾ ಕಾರು​ ಡಿಕ್ಕಿಯಲ್ಲಿ ಸುಮಾರು 13 ಲಕ್ಷ ರೂಪಾಯಿ ಹಣ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿತ್ತು. ಇದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ

ರಾಯಚೂರು  ನಗರದ ತಿಮ್ಮಾಪೂರ ಪೇಟೆಯಲ್ಲಿ ಅಕ್ರಮ ಶೇಂಧಿ ತಯಾರಿಕೆ ಮಾಡುತ್ತಿದ್ದ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ವೇಳೆ 12 ಕೆ.ಜಿ ಸಿಹೆಚ್ ಪೌಡರ್, 2 ಲೀಟರ್​ ಶೇಂಧಿ, 2 ಮೊಬೈಲ್ ಸೇರಿದಂತೆ 86,100 ರೂಪಾಯಿ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ. ಶೇಂಧಿ ತಾಯಾರಿಕೆಯಲ್ಲಿ ತೊಡಗಿದ್ದ ನಾಲ್ವರ ವಿರುದ್ಧ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ನೇತೃತ್ವದದಲ್ಲಿ ಉಚಿತ ಹೊಲಿಗೆಯಂತ್ರ ವಿತರಣೆ ಆರೋಪದಡಿ ಪೊಲೀಸರು ದಾಳಿ ನಡೆಸಿದರು. ಹೊಲಿಗೆಯಂತ್ರದ ಮೇಲೆ ಯಾವುದೇ ಪಕ್ಷದ ಚಿಹ್ನೆಯಿಲ್ಲದ ಕಾರಣ ಕೇವಲ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗ್ತಿದೆ. ಶಾಸಕ ಅರವಿಂದ್ ಬೆಲ್ಲದ್ ಬೇಕಂತಲೇ ಪೊಲೀಸರನ್ನು ಕಳುಹಿಸಿದ್ದಾರೆ ಅನ್ನೋದು ದೀಪಕ್ ಚಿಂಚೋರೆ ಆರೋಪ.

ಚಿಕ್ಕಮಗಳೂರು ಜಯನಗರದಲ್ಲಿ  ಚುನಾವಣೆಗೆ ಸೀರೆ ಹಂಚಲು ಸಂಗ್ರಹಿಸಿದ್ದ ಗೋದಾಮಿನ ಮೇಲೆ ಪೋಲಿಸರು ದಾಳಿ ನಡೆಸಿದ್ದಾರೆ. ಲಕ್ಷಾಂತರ ಮೌಲ್ಯದ ಸಾವಿರಾರು ಸೀರೆಗಳು ಪತ್ತೆಯಾಗಿದೆ ನಕಲಿ ವಿಳಾಸ ಮೊಬೈಲ್‌ ನಂಬರ್‌ ನೀಡಿ ಸೀರೆ ತರಿಸಲಾಗಿದೆ. ಚಂದನ್‌ ಕುಮಾರ್‌ ಜೈನ್‌ ಹೆಸರಿನಲ್ಲಿ ಬಂದಿದ್ದ ಸೇರೆಗಳು ಎಂದು ಪತ್ತೆಯಾಗಿದೆ. ಸೂರತ್‌ ಪ್ಯಾಕ್ಟರಿಯಿಂದ ಸೀರೆಗಳನ್ನು ತರಿಸಲಾಗಿತ್ತು. ಚಂದನ್ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

Leave A Reply

Your email address will not be published.