

Shilpa Shetty as Satyavati : ಕನ್ನಡ ಚಲನಚಿತ್ರದಲ್ಲಿ (sandalwood film industry) ಜೋಗಿ ಚಲನಚಿತ್ರದ ಮೂಲಕ ಹೆಚ್ಚಿನ ಸಂಭಾವನೆ ಪಡೆದ ಪ್ರೇಮ್ (Prem) ಇದೀಗ ನಿರ್ದೇಶಿಸುತ್ತಿರುವ (direction) ‘KD’ ಚಲನಚಿತ್ರಕ್ಕೆ (KD film) ನಟಿ ಶಿಲ್ಪಾ ಶೆಟ್ಟಿ (Shilpa Shetty) ಬರ್ತಾರೆ ಅನ್ನೋ ವಿಷಯ ಸುದ್ದಿ ಆಗುತ್ತಲೇ ಬಂದಿದೆ.

ಕೆಲವು ದಿನಗಳ ಹಿಂದಷ್ಟೇ ಶಿಲ್ಪಾ ಶೆಟ್ಟಿ ಸಿನಿಮಾ ಸೆಟ್ಟಿಗೆ ಎಂಟ್ರಿ ಕೊಟ್ಟು ಶೂಟಿಂಗ್ ಮುಗಿಸಿ ಹೋಗಿದ್ದಾರೆ. ಆಗ ಶಿಲ್ಪಾ ಶೆಟ್ಟಿನೇ ಸತ್ಯವತಿ ಪಾತ್ರದಲ್ಲಿ (Shilpa Shetty as Satyavati) ನಟಿಸರಿದ್ದಾರೆ ಎಂಬ ಮಾತು ಹರಿದಾಡುತ್ತಿತ್ತು. ಹಾಗೆ ನೋಡಬೇಕೆಂದರೆ ಅದೇ ಲುಕ್ ಈಗ ರಿವೀಲ್ ಆಗಿದೆ ನೋಡಿ.
‘ಕೆಡಿ’ ಸಾಮ್ರಾಜ್ಯಕ್ಕೆ ಅಂದರೆ ಕೆಡಿ ಚಲನ ಚಿತ್ರಕ್ಕೆ ಸತ್ಯವತಿ ಎಂಟ್ರಿ ಕೊಟ್ಟಿದ್ದಾರೆಂದು ಜೋಗಿ ಪ್ರೇಮ್ ಮಾಹಿತಿಯನ್ನು ನೀಡಿದ್ದರು. ಹಾಗೆಯೇ ಹೊಸ ವರ್ಷದ ಯುಗಾದಿಯಂದು (ugadi) ಆ ನಟಿಯನ್ನು ರಿವೀಲ್ ಮಾಡುವುದಾಗಿಯೂ ಹೇಳಿದ್ದರು. ಜೋಗಿ ಪ್ರೇಮ್ ನುಡಿದಂತೆ ಇದೀಗ ಶಿಲ್ಪಾ ಶೆಟ್ಟಿ ಲುಕ್ ಈಗ ರಿವೀಲ್ (reveal) ಆಗಿದೆ. ಕೆಲವು ವರ್ಷಗಳು ಕಳೆದ ನಂತರ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡ ಚಿತ್ರರಂಗಕ್ಕೆ (sandalwood film industry) ತಮ್ಮ ಪಾದಾರ್ಪಣೆಯನ್ನು ಮಾಡುತ್ತಿದ್ದಾರೆ.
ಹೀಗಾಗಿ ಅವರನ್ನು ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಬೇವು ಬೆಲ್ಲದ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಸಂತಸವನ್ನು ನೀಡಿದ್ದಾರೆ. Kd ಚಲನಚಿತ್ರದಲ್ಲಿ ಶಿಲ್ಪಾಶೆಟ್ಟಿಯ ರೆಟ್ರೋ ಲುಕ್ (retro style) ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ.
ಜೋಗಿ ಪ್ರೇಮ್ ಅಂದ್ರೇನೆ ಹಾಗೇ, ಕೆಲವು ವಿಷಯಗಳನ್ನು ಯಾರಿಗೂ ತಿಳಿಸದೆ ಗುಟ್ಟಾಗಿ ಇಟ್ಟಿರುತ್ತಾರೆ. ಇದೀಗ ಶಿಲ್ಪಾ ಶೆಟ್ಟಿ ಬಂದೋಗಿರೋದು ಕೂಡ ರಹಸ್ಯವಾಗಿಯೇ ಇತ್ತು. ಯುಗಾದಿ ಹಬ್ಬದ ದಿನ ಅಭಿಮಾನಿಗಳಿಗೆ (fans)ಹೊಸ ರೀತಿಯ ಸಂತಸದ ಅಚ್ಚರಿಯನ್ನು ಮೂಡಿಸಿದ್ದಾರೆ. ಮಾಹಿತಿಯ ಪ್ರಕಾರ ಶಿಲ್ಪಾ ಶೆಟ್ಟಿ ಈಗಾಗಲೇ ‘ಕೆಡಿ’ ಅಡ್ಡಾಗೆ ಎಂಟ್ರಿ ಕೊಟ್ಟು ಆಗಿದೆ. ಮೂರು ದಿನ ಶೂಟಿಂಗ್ (shooting) ಮುಗಿಸಿ ಮತ್ತೆ ಮುಂಬೈಗೆ (Mumbai) ತೆರಳಿದ್ದಾರೆ.
ಪೂಜಾ ಗಾಂಧಿ ನಟಿಸಿರುವ ಅಭಿನೇತ್ರಿ (abhinetri) ಚಿತ್ರದಲ್ಲಿ ಕೂಲಿಂಗ್ ಗ್ಲಾಸ್ (cooling glass) ತೊಟ್ಟು ಸಕ್ಕತ್ತಾಗಿ ಲುಕ್ಕು ಕೊಟ್ಟ ಹಾಗೆ, ಕೆಡಿ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಕೂಲಿಂಗ್ ಗ್ಲಾಸ್ ತೊಟ್ಟು ಮಸ್ತ್ (mast) ಆಗಿ ಲುಕ್ ಕೊಟ್ಟಿದ್ದಾರೆ. ರೆಟ್ರೋ ಗೆಟಪ್‌ನಲ್ಲಿ ಸೀರೆಯುಟ್ಟು, ಅಭಿಮಾನಿಗಳಿಗೆ ಅದೇ ಗ್ಲಾಮರ್ ಲುಕ್ ಕೊಟ್ಟಿದ್ದಾರೆ.
ಬಾಲಿವುಡ್ ನಟಿಯ ಸತ್ಯವತಿ ಅವತಾರಕ್ಕೆ ಪಾಸಿಟಿವ್ ಓಪಿನಿಯನ್ ಸಿಗುತ್ತಿವೆ. ಆದರೆ, ಶಿಲ್ಪಾ ಶೆಟ್ಟಿ ಪಾತ್ರ ಹೇಗಿರುತ್ತೆ? ಯಾರಿಗೆ ಜೋಡಿ? ಇಂತಹ ಪ್ರಶ್ನೆಗಳಿಗೆ ಈಗಲೇ ಉತ್ತರ ಸಿಗೋದು ಡೌಟು. ಈ ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ (entry)ಕೊಟ್ಟಿರೋದು ಸಿನಿಪ್ರಿಯರಿಗಂತೂ ಇನ್ನಷ್ಟು ಖುಷಿಕೊಟ್ಟಿದೆ. ಯಾಕೆಂದರೆ ಶಿಲ್ಪಾ ಶೆಟ್ಟಿಗೆ ಇದು ನಾಲ್ಕನೇ ಸಿನಿಮಾ. ಈಗಾಗಲೇ ಮೂರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. 2005ರಲ್ಲಿ ತೆರೆಕಂಡ ‘ಆಟೋ ಶಂಕರ್’ ಶಿಲ್ಪಾ ಶೆಟ್ಟಿ ನಟಿಸಿದ ಕೊನೆಯ ಸಿನಿಮಾವಾಗಿತ್ತು. 1998ರಲ್ಲಿ ಶಿಲ್ಪ ಶೆಟ್ಟಿ ‘ಪ್ರೀತ್ಸೋದ್ ತಪ್ಪಾ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ರು. ಹಾಗೇ ‘ಒಂದಾಗೋಣ ಬಾ’ ದಲ್ಲೂ ನಟಿಸಿದ್ದರು. ಈಗ ಸತ್ಯವತಿಯಾಗಿ ಮತ್ತೆ ತನ್ನ ಅಭಿಮಾನಿಗಳಿಗೆ ಹುಚ್ಚು ಹಿಡಿಸಲು ಸ್ಯಾಂಡಲ್‌ವುಡ್‌ನ ಕಡೆ ಬರುತ್ತಿದ್ದಾರೆ ಇದು ಬಹಳ ಸಂತೋಷದ ವಿಷಯ ಎನ್ನಬಹುದು.
ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಧ್ರುವ ಸರ್ಜಾ (Dhruva sarja) ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ.’ಕೆಡಿ’ ಲುಕ್ ಕೊಟ್ಟು ಈಗಾಗಲೇ ಅಭಿಮಾನಿಗಳ ಕಾತುರತೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ
ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ (first look) ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ಈ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ಬೇರೆ ಚಿತ್ರರಂಗದ ಮಹಾನ್ ವ್ಯಕ್ತಿಗಳಿದ್ದಾರೆ. ಬಾಲಿವುಡ್‌ನಿಂದ ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಇದ್ದರೆ, ತಮಿಳು ಚಿತ್ರರಂಗದಿಂದ ವಿಜಯ್ ಸೇತುಪತಿ ಚಿತ್ರತಂಡ ಸೇರಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Relationship: 6 ಮಕ್ಕಳ ತಾಯಿ 20 ವರ್ಷ ಚಿಕ್ಕವನಾದ ಸೋದರಳಿಯನ ಜೊತೆ ಎಸ್ಕೇಪ್! ಗಂಡ ಶಾಕ್













