Environment: ಮಣ್ಣು ನೀರಿನ ಉಳಿವಿಗೆ ಕೃಷಿ ಪದ್ಧತಿಯಲ್ಲಿ ಬದಲಾವಣೆ ಅವಶ್ಯಕ

Environment: ಪ್ರಕೃತಿ (Environment)ನಮಗೆ ದೊರೆತ ಅಮೂಲ್ಯ ವರದಾನವಾಗಿದ್ದು, ಮನುಷ್ಯನ ಅವಶ್ಯಕತೆಗೆ ತಕ್ಕಂತೆ ಅಭಿವೃದ್ಧಿ ನೆಪದಲ್ಲಿ ಜೀವಕ್ಕೆ ಅತ್ಯಗತ್ಯವಾದ ಶುದ್ಧ ಗಾಳಿಗೆ (Air) ಆಸರೆಯಾಗಿದ್ದ ಗಿಡ ಮರಗಳ (tree) ಮಾರಣಹೋಮ ಮಾಡುತ್ತಿರುವ ಹಿನ್ನೆಲೆ ಇಂದು ಪ್ರಕೃತಿಯಲ್ಲಿ ಆಗಿರುವ ಅಸಮತೋಲನವನ್ನು ಗಮನಿಸುತ್ತಿದ್ದೇವೆ. ಮನುಷ್ಯನ (Human) ಜೊತೆಗೆ ಪ್ರತಿ ಜೀವ ಸಂಕುಲ, (Animals )ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನೇ ಅವಲಂಬಿಸಿದ್ದು, ಇಂದು ಇಡೀ ಪರಿಸರ ಅಳಿವಿನ ಅಂಚಿನಲ್ಲಿದೆ.

 

ಪ್ರಕೃತಿಯಲ್ಲಿ (Nature)ಹೇರಳವಾಗಿದ್ದ ಅರಣ್ಯ ಸಂಪತ್ತನ್ನು ನಾಶ ಮಾಡಿ, ಕಾಲಕಾಲಕ್ಕೆ ಮಳೆಯಾಗಲು, ತಾಪಮಾನದ ಸಮತೋಲನವನ್ನು ಕಾಪಾಡಲು ನೆರವಾಗುತ್ತಿದ್ದ ವೃಕ್ಷ ರಾಶಿಯನ್ನು ನೆಲಕ್ಕುರುಳಿಸಿ ಗಗನವನ್ನೇ ಮುಟ್ಟುತ್ತದೆ ಎಂಬಂತೆ ಕಟ್ಟಡಗಳ ನಿರ್ಮಾಣ ಮಾಡಿ ಪ್ರಕೃತಿಯ ಮಡಿಲಲ್ಲಿ ಸಮೃದ್ಧಿ ಗೊಂಡಿದ್ದ ಸಂಪತ್ತನ್ನು ನಾಶ ಮಾಡಿ ಅಪಾಯಕ್ಕೆ ಆಹ್ವಾನ ಮಾಡಿಕೊಟ್ಟಿದ್ದು ನಾವೇ ಎಂಬ ಸತ್ಯ ಗೊತ್ತಿದ್ದರೂ ಕೂಡ ಪ್ರಕೃತಿಯ ಉಳಿವಿನ ಕಡೆಗೆ ಗಮನ ಕೊಡುವವರು ಕೇವಲ ಬೆರಳೆಣಿಕೆಯಷ್ಟು ಮಂದಿ ಎಂದರೆ ತಪ್ಪಾಗದು.

ಹೀಗಾಗಿಯೇ ಇಂದು ಜಗತ್ತು ಎಂದು ಕಂಡು ಕೇಳರಿಯದ ರೋಗಗಳು, ಸುನಾಮಿ, ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ ದಂತಹ ಅನೇಕ ಸಮಸ್ಯೆ ಕಾಣಿಸಿಕೊಳ್ಳಲು ನಾವು ಎಸಗಿರುವ ಕೃತ್ಯಗಳೆ ಕಾರಣ.ಇದರಿಂದ ಹವಾಮಾನ (Weather) ವೈಪರೀತ್ಯ, ಆರೋಗ್ಯ ಸಮಸ್ಯೆಗಳು (Health Problem) ಕಂಡು ಬರುತ್ತಿದೆ. ಹೀಗಾಗಿ, ಪ್ರಕೃತಿಯ ಉಳಿವಿಗಾಗಿ ಪ್ರತಿಯೊಬ್ಬರಲ್ಲಿಯೂ ಕೂಡ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಪರಿಸರ ದಿನ (World Environment Day)ವನ್ನು ಪ್ರತಿ ವರ್ಷ ಜೂನ್ 5ರಂದು ಆಚರಣೆ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಸಿರನ್ನು ಉಳಿಸಿ ಬೆಳೆಸುವ ಜೊತೆಗೆ ಭವಿಷ್ಯವನ್ನು (Future) ಸೃಷ್ಟಿಸುವ ಗುರಿಯನ್ನು ಒಳಗೊಂಡಿದ್ದು, ಈ ದಿನದಂದು ಪರಿಸರದ ಬಗ್ಗೆ ಜಾಗೃತಿ (Awareness) ಮೂಡಿಸಲು ಮತ್ತು ಪರಿಸರದ ರಕ್ಷಣೆಗೆ (Protection) ಹೆಚ್ಚಿನ ಮಹತ್ವ ನೀಡಲಾಗುತ್ತದೆ.

ಹುಣಸೂರು ತಾಲೂಕಿನ ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ಮಾದಳ್ಳಿ ಮಠದಲ್ಲಿ ಐಟಿಸಿ ಎಂಎಸ್‌ಕೆ ಮತ್ತು ಔಟ್‌ರೀಚ್‌ ಸಂಸ್ಥೆಯ ಆಶ್ರಯದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಯೋಜನೆಯಡಿ ಕೆರೆಗಳ ಸಮಗ್ರ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡು ನೀರು ತುಂಬಿರುವ ಕೆರೆಯನ್ನು ಉದ್ಘಾಟಿಸಿದ ಬಳಿಕ ಡಾ.ಎಂ.ಎ. ವೆಂಕಟೇಶ್‌ ಅವರು ಪ್ರಕೃತಿಯ ಉಳಿವಿನ ಕಡೆಗೆ ಗಮನ ಹರಿಸಬೇಕೆಂದು ತಿಳಿಸಿದ್ದಾರೆ. ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸಿ ಉಳಿವಿನ ಕಡೆಗೆ ಗಮನ ಕೊಡುವ ನಿಟ್ಟಿನಲ್ಲಿ ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಮಣ್ಣು ಮತ್ತು ನೀರಿನ ಸಂರಕ್ಷಣೆಯ ಮುಖಾಂತರ ಕೃಷಿ ಪದ್ಧತಿಯ ಬದಲಾವಣೆ ಮಾಡುವುದು ಇಂದಿನ ಮೂಲಭೂತ ಅವಶ್ಯಕತೆಯಾಗಿದೆ ಎಂಬುದನ್ನು ಜಲಾನಯನ ಇಲಾಖೆ ಆಯುಕ್ತ .ಎ. ವೆಂಕಟೇಶ್‌ ಅಭಿಪ್ರಾಯಪಟ್ಟಿದ್ದಾರೆ.

ಐಟಿಸಿ ಎಂಎಸ್‌ಕೆ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಹರೀಶ್‌ ಬಾಬು, ಕೃಷಿ ಇಲಾಖೆ ಉಪ ನಿರ್ದೇಶಕ ಕೆ.ರಾಜು, ಬನ್ನಿಕುಪ್ಪೆ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮಪುಟ್ಟನಾಯಕ, ಉಪಾಧ್ಯಕ್ಷೆ ಅಂಬಿಕಾ ರೇವಣ್ಣ, , ಐಟಿಸಿ ಕಂಪನಿಯ ಅಧಿಕಾರಿಗಳು ಜೊತೆಗೆ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಐಟಿಸಿ ಎಂಎಸ್‌ಕೆ ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ್‌ ಅವರು, ಮೈಸೂರು ಜಿಲ್ಲೆಯಲ್ಲಿ 330 ಕೆರೆಗಳ ಹೂಳೆತ್ತುವ ಕಾರ್ಯಕ್ರಮ, ಬದು ನಿರ್ಮಾಣ, ಕೃಷಿಹೊಂಡ ಕಾರ್ಯಕ್ರಮಗಳನ್ನು ರೈತರು ಉತ್ತಮ ರೀತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇದೇ ವೇಳೆ, ನಮ್ಮ ದೇಶದ ಭೂಮಿಯ ಶೇ. 56ಭಾಗದ ಮಣ್ಣು ಇಂದಿಗೂ ಉತ್ತಮ ಗುಣಮಟ್ಟಮತ್ತು ಫಲವತ್ತತೆಯನ್ನ ಹೊಂದಿದೆ. ಅತಿಯಾದ ರಸಗೊಬ್ಬರದ ಬಳಕೆ ಮತ್ತು ನೀರಿನ ಸಮರ್ಪಕ ನಿರ್ವಹಣೆ ಮಾಡದೇ ಇರುವುದರಿಂದ ಕೃಷಿಯಲ್ಲಿ ನಷ್ಟ ಕಂಡುಬರುತ್ತಿದೆ. ಕೃಷಿ ಪದ್ಧತಿಯ ಪರಿಕಲ್ಪನೆ ಬದಲಾವಣೆಯಾಗಿದ್ದು, ಇದನ್ನು ರೈತರು ತಿಳಿದುಕೊಂಡು ಅರ್ಥ ಮಾಡಿಕೊಂಡು ಪ್ರಕೃತಿಯ ಉಳಿವಿಗೆ ಕೈ ಜೋಡಿಸಬೇಕು. ನೀರು ಮತ್ತು ಮಣ್ಣು ನಮ್ಮ ಜೀವ ಮತ್ತು ಜೀವನಕ್ಕೆ ಅತೀ ಅವಶ್ಯಕ ಎಂಬುದು ತಿಳಿದಿರುವ ಸಂಗತಿ. ಆದರೆ, ಐಟಿಸಿ ಮತ್ತು ಔಟ್‌ರಿಚ್‌ ಕಂಪನಿಗಳು ಗ್ರಾಮೀಣ ಭಾಗದಲ್ಲಿ ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಜಾರಿಗೊಳಿಸಿರುವ ಬಗ್ಗೆ ಜಲಾನಯನ ಇಲಾಖೆ ಆಯುಕ್ತ .ಎ. ವೆಂಕಟೇಶ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.