5th, 8th Public Exam 2023 : ವಿದ್ಯಾರ್ಥಿಗಳೇ, ಇಲ್ಲಿದೆ 5, 8ನೇ ತರಗತಿ ಪರೀಕ್ಷೆಯ ಪರಿಷ್ಕೃತ ಗೈಡ್ ಲೈನ್ಸ್ !!

5th-8th Public Exam 2023 : ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಕಾರ್ಯವನ್ನು ನಡೆಸುವ ಕುರಿತು ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು (5th-8th Public Exam 2023) , 27-03-2023 ರಿಂದ ಮೌಲ್ಯಾಂಕನವನ್ನು ನಡೆಸಲು ಘನ ಉಚ್ಛ ನ್ಯಾಯಾಲಯವು ಅವಕಾಶ ಕಲ್ಪಿಸಿದೆ.

 

ಅಂತೆಯೇ 5ನೇ ತರಗತಿ ವಿದ್ಯಾರ್ಥಿಗಳಿಗೆ 27-03-2023 ರಿಂದ 30-03-2023 ರವರೆಗೆ ಮೌಲ್ಯಾಂಕನವನ್ನು ನಡೆಸಲಾಗುತ್ತದೆ. ಹಾಗೆಯೇ 8ನೇ ತರಗತಿ ವಿದ್ಯಾರ್ಥಿಗಳಿಗೆ 27-03-2023 ರಿಂದ 01-04-2023 ರವರೆಗೆ ಮೌಲ್ಯಾಂಕನವನ್ನು ನಡೆಸಲಾಗುತ್ತದೆ ಎನ್ನಲಾಗಿದೆ. ಈಗಾಗಲೇ ಪರಿಷ್ಕೃತ ವೇಳಾಪಟ್ಟಿಯನ್ನು https://kseab.karnataka.gov.in/ ಬಿಡುಗಡೆ ಮಾಡಲಾಗಿದೆ.

ಆಯಾ ಶಾಲೆಗಳನ್ನೇ ಮೌಲ್ಯಾಂಕ ಕೇಂದ್ರಗಳಾಗಿ ಪರಿಗಣಿಸಿದ್ದು,
ಆಯಾ ತರಗತಿಯ ಮೌಲ್ಯಾಂಕನ ಕಾರ್ಯ ಪೂರ್ಣಗೊಂಡ ನಂತರ ತಮ್ಮ ಬ್ಲಾಕ್ ಹಂತದ ಎಲ್ಲಾ ಶಾಲೆಗಳಿಂದ ಉತ್ತರಿಸಲಾದ ಎಲ್ಲಾ ವಿಷಯಗಳ ಬಂಡಲ್‌ಗಳನ್ನು ಪಡೆದು ತರಗತಿವಾರು ಪ್ರತ್ಯೇಕಿಸಿ ನಿಗದಿಪಡಿಸಲಾದ ಮೌಲ್ಯಮಾಪನ ಕೇಂದ್ರಕ್ಕೆ ರವಾನಿಸುವುದು.

ಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ನಂತರ ಮರುದಿನವೇ ಉತ್ತರ ಪತ್ರಿಕೆಗಳನ್ನು ಸಂಬಂಧಿಸಿದ ಶಾಲೆಗಳಿಗೆ ತಲುಪಿಸಲಾಗುದು. ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರು / ಪ್ರಾಂಶುಪಾಲರು ವಿದ್ಯಾರ್ಥಿಗಳು ಗಳಿಸಿರುವ ಅಂಕಗಳನ್ನು ಕ್ರೋಢೀಕರಿಸಿ ಗ್ರೇಡ್‌ಗಳಿಗೆ ಪರಿವರ್ತಿಸಿ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ನೀಡಲಾಗುವುದು. ಈ ಮೌಲ್ಯಾಂಕನದಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ. ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗುವುದು ಎಂದು ಹೇಳಲಾಗಿದೆ.

Leave A Reply

Your email address will not be published.