Weekend With Ramesh : ವೀಕೆಂಡ್‌ ವಿತ್‌ ರಮೇಶ್‌ ಶೋನ ಗೆಸ್ಟ್‌ ಲಿಸ್ಟ್‌ ಬಹಿರಂಗ ಪಡಿಸಿದ ರಮೇಶ್‌ ಅರವಿಂದ್!‌ ಇಲ್ಲಿದೆ ಸಂಪೂರ್ಣ ಪಟ್ಟಿ

Weekend with Ramesh Season 5 :ಕಿರುತೆರೆಯ ಹಲವು ಜನಪ್ರಿಯ ರಿಯಾಲಿಟಿ ಶೋಗಳಿಗೆ (Reality Show) ಪೈಪೋಟಿ ನೀಡುತ್ತಾ, ಜನಮನ ಗೆಲ್ಲುತ್ತಾ, ‘ವೀಕೆಂಡ್ ವಿಥ್ ರಮೇಶ್’ ಶೋ (Weekend With Ramesh Season 5) ಅತಿ ಎತ್ತರದ ಸ್ಥಾನ ಗಳಿಸಿದೆ. ಇದು ಕಿರುತೆರೆಯ ಜನಪ್ರಿಯ ಶೋಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಈಗಾಗಲೇ ನಾಲ್ಕು ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿದ್ದು, 5ನೇ ಸೀಸನ್‌ ಇನ್ನು ಕೆಲವೇ ದಿನಗಳಲ್ಲಿ ಪ್ರಸಾರವಾಗುಲಿದೆ. ಅದಕ್ಕಾಗಿ ದೇಶದ ಅದೆಷ್ಟೋ ಜನರು ಕಾದು ಕುಳಿತಿದ್ದಾರೆ. ಈ ಬಾರಿ ಸಾಧಕರ ಕುರ್ಚಿಯಲ್ಲಿ ಯಾರೆಲ್ಲಾ ಕೂರಲಿದ್ದಾರೆ ಎಂಬ ಕುತೂಹಲಕಾರಿ ಪ್ರಶ್ನೆ ಹೊತ್ತುಕೊಂಡು ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದ್ರೆ ಈ ಸೀಸನ್ ಅಲ್ಲಿ ಯಾರೆಲ್ಲಾ ಅತಿಥಿಗಳಾಗಿ ಭಾಗವಹಿಸುತ್ತಾರೆ? ಇಲ್ಲಿದೆ ನೋಡಿ ಪೂರ್ಣ ಮಾಹಿತಿ.

ಸೀಸನ್ 5ರಲ್ಲಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ, ಸಾಮಾನ್ಯ ಸಾಧಕರಿಗೂ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಕ್ರಿಕೆಟ್ (cricketers) , ರಾಜಕಾರಣಿಗಳು (polititians), ಸಿನಿಮಾ, ಕಿರುತೆರೆ, ರಂಗಭೂಮಿ ಹೀಗೆ ಬೇರೆ ಬೇರೆ ಕ್ಷೇತ್ರಗಳ ಸಾಧಕರು ಈ ಬಾರಿ ವೀಕೆಂಡ್ ಕುರ್ಚಿಯ ಮೇಲೆ ಕೂತು, ತಮ್ಮ ಜೀವನ ಕಥೆಯನ್ನು ಹೇಳಿಕೊಳ್ಳಲಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಸಿಹಿ-ಕಹಿ ಘಟನೆಗಳನ್ನು ಹಂಚಿಕೊಳ್ಳಲಿದ್ದಾರೆ. ಎಂದಿನಂತೆ ರಮೇಶ್ ಅರವಿಂದ್ ಅವರ ಮಾತಿಗೆ ಕಿವಿಯಾಗಲಿದ್ದಾರೆ.

ವೀಕೆಂಡ್ ವಿತ್ ರಮೇಶ್ (Weekend With Ramesh) ಸೀಸನ್ 5 ಮಾರ್ಚ್ 25 ರಿಂದ ಪ್ರಸಾರವಾಗಲಿದೆ. ಈ ಸೀಸನ್​ನಲ್ಲಿ ಸಾಧಕರ ಕುರ್ಚಿ ಮೇಲೆ ಕೂರಲಿರುವ ಅತಿಥಿಗಳ ಪಟ್ಟಿಯನ್ನು ನಿರೂಪಕ ರಮೇಶ್ ಅರವಿಂದ್ ಬಹಿರಂಗಗೊಳಿಸಿದ್ದಾರೆ. ಶೋನ ಪ್ರೋಮೋಗಳು (Weekend With Ramesh Season 5 promo) ಈಗಾಗಲೇ ಬಿಡುಗಡೆಯಾಗಿದ್ದು, ವೀಕೆಂಡ್ ವಿತ್ ರಮೇಶ್ ಸೀಸನ್ 5 ಮೊದಲ ಸಂಚಿಕೆ ಮಾರ್ಚ್ 25 ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸೀಸನ್ ಪ್ರಾರಂಭಕ್ಕೂ ಮುನ್ನ ನಿರೂಪಕ ರಮೇಶ್ ಅರವಿಂದ್ (Ramesh Arvind) ಹಾಗೂ ಜೀ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಅವರು ಪತ್ರಿಕಾಗೋಷ್ಠಿಯಲ್ಲಿ ಶೋ ಕುರಿತಾಗಿ ಕೆಲವು ಮಾಹಿತಿ ನೀಡಿದ್ದಾರೆ. ಮೊದಲು ಎಪಿಸೋಡ್​ನಲ್ಲಿ ಕುರ್ಚಿಯ ಮೇಲೆ ಕೂರುವ ಅತಿಥಿ ಯಾರು? ಎಂಬ ಮಾಹಿತಿ ಬಹಿರಂಗಪಡಿಸಿದ್ದಾರೆ. ಹಾಗೇ ಈ ಸೀಸನ್​ನಲ್ಲಿ ಕಾಣಿಸಿಕೊಳ್ಳುವ ಇತರೆ ಕೆಲವು ಅತಿಥಿಗಳ ಹೆಸರನ್ನು ತಿಳಿಸಿದ್ದಾರೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಈ ಬಾರಿಯ ಸೀಸನ್ ನಲ್ಲಿ ಮೊದಲ ಅತಿಥಿಯಾಗಿ ಸದ್ಯ ಕನ್ನಡದಲ್ಲಿ ಮನೆಮಾತಾಗಿರೋ ಖ್ಯಾತ ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishabh Shetty) ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮಾಹಿತಿ ಪ್ರಕಾರ, ರಿಷಬ್ ಮೊದಲ ಅತಿಥಿಯಾಗಿ ಬರುತ್ತಿಲ್ಲ. ಬದಲಾಗಿ, ಮೊದಲ ಎಪಿಸೋಡ್​ಗೆ ಸ್ಯಾಂಡಲ್​ವುಡ್ ಕ್ವೀನ್ ನಟಿ ರಮ್ಯಾ (actress ramya) ಅತಿಥಿಯಾಗಿ ಭಾಗಿಯಾಗಲಿದ್ದಾರೆ. ರಮ್ಯಾ ಜೊತೆಗಿನ ಎಪಿಸೋಡ್​ನ ಚಿತ್ರೀಕರಣ ಮಾರ್ಚ್ 21 ರಿಂದ ಅಂದ್ರೆ ಇಂದಿನಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.

5ನೇ ಸೀಸನ್ ನ ಎರಡನೇ ಅತಿಥಿಯಾಗಿ ಖ್ಯಾತ ನೃತ್ಯ ನಿರ್ದೇಶಕ, ಚಿತ್ರ ನಿರ್ದೇಶಕ, ನಟ ಪ್ರಭುದೇವ (Prabhudeva) ಅವರು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಈ ಸೀಸನ್ ನಲ್ಲಿ ಇನ್ನು ಇತರೆ ಅತಿಥಿಗಳು ಕುರ್ಚಿ ಅಲಂಕರಿಸಲಿದ್ದಾರೆ. ಯಾರೆಲ್ಲಾ ಅಂದ್ರೆ, ನಟ ಧ್ರುವ ಸರ್ಜಾ (dhruva sarja), ನಟಿ ರಚಿತಾ ರಾಮ್ (rachita ram), ನಟಿ ಮಾಲಾಶ್ರೀ (Malashri), ಇಶಾ ಫೌಂಡೇಶನ್​ನ (isha foundation) ಜಗ್ಗಿ ವಾಸುದೇವ್ (jaggi vasudev) (Sadhguru) , ಖ್ಯಾತ ಹೃದ್ರೋಗ ತಜ್ಞ ಮಂಜುನಾಥ್ ಸೇರಿದಂತೆ ಇನ್ನೂ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

“ಈವರೆಗೂ 84 ಸಾಧಕರು ಕುರ್ಚಿಯ ಮೇಲೆ ಕೂತಿದ್ದಾರೆ. 110 ಸಂಚಿಕೆಗಳು ಪ್ರಸಾರವಾಗಿವೆ. ವಿಶೇಷವೆಂದರೆ ಇನ್ನು 16 ಸಾಧಕರು ಅದ ಬಳಿಕ ನೂರನೇ ಸಾಧಕರು ಬರಲಿದ್ದು, ಆ ಎಪಿಸೋಡ್​ಗೆ ಬಹಳ ವಿಶೇಷ ಅತಿಥಿಯೊಬ್ಬರು ಸಾಧಕರ ಕುರ್ಚಿ ಏರಲಿದ್ದಾರೆ. ನೂರನೇ ಎಪಿಸೋಡ್​ಗೆ ಬರುವ ಅತಿಥಿ ಆ ಚೇರ್​ಗೆ ನ್ಯಾಯ ಕೊಡಲಿದ್ದಾರೆ ಎಂದು” ನಟ ರಮೇಶ್ ಹೇಳಿದ್ದಾರೆ.

“ಎಲ್ಲಾ ಸಾಧಕರು ಸಾಧನೆಗೆ ಹೋರಾಟವನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ಸಾಧಕರಿಗೆ ಕೊರತೆ ಇಲ್ಲ. ಕೇವಲ ನಟ (actor), ರಾಜಕಾರಣಿ ಅಲ್ಲ ವೈದ್ಯರು (doctor), ರೈತರು (former), ನರ್ಸ್(nurse), ಹೀಗೆ ಹಲವರನ್ನು ಕರೆಸಬಹುದು. ಸ್ಪೂರ್ತಿ ತುಂಬುವಂತಹ ಕೆಲಸ ಮಾಡಬೇಕು. ಇದರಿಂದ, ಕರ್ನಾಟಕದಲ್ಲಿರುವ ಎಲ್ಲರಿಗೂ ತಮ್ಮ ನಿಜವಾದ ಶಕ್ತಿಯ ಅರಿವಾಗಿ, ಎಲ್ಲರೂ ತಮ್ಮ ಅತ್ಯುತ್ತಮ ವ್ಯಕ್ತಿತ್ವನ್ನು ಹೊರಗೆ ತೋರಬೇಕು ಎನ್ನುವುದೇ ವೀಕೆಂಡ್ ವಿತ್ ರಮೇಶ್ ಉದ್ದೇಶ” ಎಂದು ರಮೇಶ್ ಅರವಿಂದ್ ಹೇಳಿದರು.

ಇದನ್ನೂ ಓದಿ: Dharmendra-Hema Malini Love : ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಹೇಮಾ ಮಾಲಿನಿಯನ್ನು ಪ್ರೀತಿಸಿ ಮದುವೆಯಾದ್ರ ಧರ್ಮೇಂದ್ರ?! ಇವರ ಲವ್‌ಸ್ಟೋರಿ ಅದ್ಭುತ!!

Leave A Reply

Your email address will not be published.