Tax Benefits : SBI ನ ಎನ್ ಪಿಎಸ್ ಪಿಂಚಣಿ ಖಾತೆಯಲ್ಲಿ ತೆರಿಗೆ ಪ್ರಯೋಜನದ ಮಾಹಿತಿ!
Tax Benefits : ಸರ್ಕಾರವು (government) ಸ್ಥಾಪಿಸಿದ ಎನ್‌ಪಿಎಸ್, (NPS) ಹೂಡಿಕೆದಾರರಿಗೆ ಸ್ವಯಂಪ್ರೇರಿತ ನಿವೃತ್ತಿ ಉಳಿತಾಯ ಯೋಜನೆ ಆಗಿದ್ದು, ಯೋಜಿತ ಉಳಿತಾಯಕ್ಕೆ ಜನರಿಗೆ ನಿರ್ದಿಷ್ಟ ಕೊಡುಗೆಯನ್ನು ನೀಡಲು ಸಹಾಯ ಮಾಡುತ್ತದೆ. ರಾಷ್ಟ್ರೀಯ ಪಿಂಚಣಿ (National pension) ವ್ಯವಸ್ಥೆ (ಎನ್‌ಪಿಎಸ್) ಜನರಿಗೆ ಕೊಡುಗೆ ನೀಡುವ ಮೂಲಕ ತೆರಿಗೆ (Tax Benefits) ಉಳಿಸುವ ಅವಕಾಶಗಳ ಲಾಭವನ್ನು ಪಡೆಯಲು ದೇಶದ ಅಗ್ರ ಬ್ಯಾಂಕ್ ಸ್ಟೇಟ್ ಆಫ್ ಇಂಡಿಯಾ(ಎಸ್‌ಬಿಐ) (state bank of India) ಗ್ರಾಹಕರನ್ನು(customer) ಪ್ರೋತ್ಸಾಹಿಸುವ ಕೆಲಸ ಮಾಡುತ್ತದೆ. ಹಾಗೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತಿ ನಂತರದ ಭವಿಷ್ಯವನ್ನು ಕೂಡ ಪೆನ್ಷನ್ (pension) ರೂಪದಲ್ಲಿ ಜನರ ಜೀವನವನ್ನು ಭದ್ರತಾ ರೂಪದಲ್ಲಿ ಕಾಪಾಡುತ್ತದೆ.
ಎನ್‌ಪಿಎಸ್ ನಿರ್ವಹಣೆ ಮತ್ತು ನಿಯಂತ್ರಣ ಕೆಲಸವನ್ನು ಪಿಎಫ್‌ಆರ್‌ಡಿಎ (PFRDA) ಮಾಡುತ್ತದೆ. ಇದು ವಿಶ್ವದಲ್ಲಿಯೇ (universe) ಕಡಿಮೆ ಹಣದ ಪೆನ್ಷನ್ ಯೋಜನೆಯಾಗಿದೆ. ಬಳಕೆದಾರರು ತಮ್ಮ ಸ್ವಂತ ಹೂಡಿಕೆಯ ಆಯ್ಕೆಗಳು ಮತ್ತು ತಮಗೆ ನೀಡುವ ಪಿಂಚಣಿ ನಿಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ಅವರ ಹಣ ಯಾವ ರೀತಿ ಬೆಳವಣಿಗೆ ಆಗುತ್ತದೆ ಎಂಬುದನ್ನು ಗಮನಿಸಬಹುದು.
ಎಸ್‌ಬಿಐ (SBI) ಜನರ ಹಿತದೃಷ್ಟಿಗಾಗಿ ಎರಡು ರೀತಿಯ ಎನ್‌ಪಿಎಸ್ ಯೋಜನೆಗಳನ್ನು ನೀಡುತ್ತಿದೆ. ಶ್ರೇಣಿ 1 ಇದು ಕಡ್ಡಾಯ ಪಿಂಚಣಿ ಖಾತೆ. ಶ್ರೇಣಿ 11 ಇದು ಹೂಡಿಕೆ ಖಾತೆ ಇದು ಜನರಿಗೆ ಉತ್ತಮವಾಗಿದೆ. ಶ್ರೇಣಿ 1 ಖಾತೆಗೆ ಕನಿಷ್ಠ ಕೊಡುಗೆ 500 ರೂಪಾಯಿ ಮತ್ತು ಶ್ರೇಣಿ II ಗೆ 1,000 ರೂಪಾಯಿ ಇದೆ ಎಂದು ಎಸ್ ಬಿಐ ಈ ರೀತಿಯ ಯೋಜನೆಯನ್ನು ತಿಳಿಸಿಕೊಟ್ಟಿದೆ.
ಶ್ರೇಣಿ I ಖಾತೆಗೆ ಎಲ್ಲಾ ರೀತಿಯ ತೆರಿಗೆ (tax)ಪ್ರಯೋಜನವಿದೆ. ಶ್ರೇಣಿ II ಖಾತೆಯಲ್ಲಿ (account) ಅಂತಹ ಯಾವುದೇ ತೆರಿಗೆ ಪ್ರಯೋಜನವಿಲ್ಲ. ಆದರೆ ಯಾವುದೇ ಸಮಯದಲ್ಲಿ ಬೇಕಾದರೂ ಕಾರ್ಪಸ್ (Corpus) ಹಿಂಪಡೆಯುವಿಕೆಯನ್ನು ಅನುಮತಿಸುವ ಸೌಲಭ್ಯವನ್ನು ಈ ಯೋಜನೆಯು ಹೊಂದಿದೆ. ಈ ಯೋಜನೆಯಲ್ಲಿ ಯಾರು ಬೇಕಾದರೂ ತಮ್ಮ ಎನ್ ಪಿಎಸ್ ಖಾತೆಯನ್ನು 18 ರಿಂದ 70 ವರ್ಷಗಳ ನಡುವಿನ ವಯಸ್ಸಿನ ಭಾರತೀಯರು ಮತ್ತು ಅನಿವಾಸಿ ಭಾರತೀಯರು ಸೇರಿ ಭಾರತದ ಎಲ್ಲ ನಾಗರಿಕರು(citizens) ತೆರೆಯಬಹುದು.
ಶ್ರೇಣಿ I ಖಾತೆಗೆ, ಉದ್ಯೋಗಿ ಕೊಡುಗೆಗೆ ಸಂಬಂಧಿಸಿದ್ದು, ಐಟಿ (IT)ಕಾಯಿದೆಯ ಸೆಕ್ಷನ್(section) 80CCD (1B) ಅಡಿಯಲ್ಲಿ ತೆರಿಗೆ ವಿನಾಯಿತಿ 50,000 ರೂಪಾಯಿವರೆಗಿನ ಕೊಡುಗೆಗೆ ಇದು ಅನ್ವಯಿಸುತ್ತದೆ. ಹಾಗೆಯೇ, ಒಟ್ಟಾರೆ 1.50 ಲಕ್ಷ ರೂಪಾಯಿ ಮಿತಿಯೊಳಗೆ ಹೂಡಿಕೆಗಳಿಗೆ (ಮೂಲ ಮತ್ತು DA ಯ 10%) 80CCE ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯವಿದೆ ಎಂದು ಎಸ್ ಬಿಐ ನ ವೆಬ್ ಸೈಟ್(website) ನಲ್ಲಿ ಈ ರೀತಿಯ ಮಾಹಿತಿಯು ತಿಳಿದು ಬಂದಿದೆ.
ಇಷ್ಟೇ ಅಲ್ಲದೆ ಉದ್ಯೋಗದಾತರ ಕೊಡುಗೆಯ ಸಂದರ್ಭದಲ್ಲಿ, ಸಂಬಳದ 10% ವರೆಗಿನ ತೆರಿಗೆ ಕಡಿತವು ಯು/ಎಸ್ 80ಸಿಸಿಡಿ (2) 7.5 ಲಕ್ಷ ರೂಪಾಯಿ (ಪಿಎಫ್, ನಿವೃತ್ತಿ ವೇತನ, ಇತ್ಯಾದಿ) ವಿತ್ತೀಯ ಸೀಲಿಂಗ್‌ಗೆ ಒಳಪಟ್ಟಿರುತ್ತದೆ.
ಶ್ರೇಣಿ 1 ಯೋಜನೆಯ ಅಡಿಯಲ್ಲಿ 60 ವರ್ಷ ವಯಸ್ಸನ್ನು ತಲುಪಿದಾಗ ಎಸ್ ಬಿ ಐ ನ ನಿರ್ಗಮನ ಆಯ್ಕೆಗಳು ಯಾವ ರೀತಿ ಇದೆ ಎಂದು ತಿಳಿಯೋಣ ಬನ್ನಿ.
ಕಾರ್ಪಸ್‌ನ ಕನಿಷ್ಠ 40% ಅನ್ನು ವರ್ಷಾಶನ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಕಾರ್ಪಸ್‌ನ 60% ಅನ್ನು 75 ವರ್ಷ ವಯಸ್ಸಿನವರೆಗೆ ಯಾವುದೇ ಸಮಯದಲ್ಲಿ ಹಿಂತೆಗೆದುಕೊಳ್ಳಬಹುದು ಹಾಗೆಯೇ ಈ ಮೊತ್ತವು ತೆರಿಗೆ ಮುಕ್ತವಾಗಿದೆ. ಒಟ್ಟು ಕಾರ್ಪಸ್ 5 ಲಕ್ಷ ರೂಪಾಯಿಗೆ ಸಮನಾಗಿದ್ದರೆ ಅಥವಾ ಕಡಿಮೆ ಇದ್ದರೆ, ನಂತರ ಸಂಪೂರ್ಣ ಕಾರ್ಪಸ್(Corpus) ಅನ್ನು ಹಿಂಪಡೆಯಬಹುದು.
ಶ್ರೇಣಿ 1 ರಲ್ಲಿ 60 ವರ್ಷ ವಯಸ್ಸಿಗಿಂತ ಮೊದಲು ಅಂದರೆ 5 ವರ್ಷ ಪೂರ್ಣಗೊಂಡ ನಂತರ, ಎಸ್ ಬಿ ಐ (SBI)ನ ನಿರ್ಗಮನ ಆಯ್ಕೆ ಯಾವ ರೀತಿ ಎಂದು ನೋಡೋಣ.
ಕಾರ್ಪಸ್‌ನ 20% ಅನ್ನು ಒಂದೇ ಹಣದಲ್ಲಿ ಕಮ್ಯುಟ್ (commute) ಮಾಡಬಹುದು. ಅಂದರೆ ಹಿಂಪಡೆದುಕೊಳ್ಳಬಹುದು. 80% ಕಾರ್ಪಸ್ ಅನ್ನು ‘ಆನ್ಯುಟಿ ಸ್ಕೀಮ್’ ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಒಟ್ಟು ಕಾರ್ಪಸ್ 2.50 ಲಕ್ಷ ರೂಪಾಯಿಗೆ ಸಮನಾಗಿದ್ದರೆ ಅಥವಾ ಕಡಿಮೆ ಇದ್ದರೆ, ನಂತರ ಸಂಪೂರ್ಣ ಕಾರ್ಪಸ್ ಅನ್ನು ಕಮ್ಯುಟ್ ಮಾಡಬಹುದು. ಶ್ರೇಣಿ I ರಲ್ಲಿ, 3 ವರ್ಷ ಲಾಕ್-ಇನ್ ಅವಧಿಯ ನಂತರ 25% ನಷ್ಟು ಉದ್ಯೋಗಿ ಕೊಡುಗೆಗಳನ್ನು ಮೀರದಂತೆ ಸಂಚಿತ ಪೆನ್ಷನ್ (Sanchita pension) ಸಂಪತ್ತಿನ ಭಾಗಶಃ ಹಿಂತೆಗೆದುಕೊಳ್ಳುವಿಕೆಯನ್ನು ಅನುಮತಿಸಲಾಗಿದೆ. ಜಾಸ್ತಿ ಆಗಿ ಶ್ರೇಣಿ 1 ಯೋಜನೆಯು ನಿಯಂತ್ರಕರು ಸೂಚಿಸಿದ ರೂಲ್ಸ್ (rules) ಗಳಿಗೆ ಒಳಪಟ್ಟು ಸಂಪೂರ್ಣ ಅವಧಿಯಲ್ಲಿ ಗರಿಷ್ಠ ಮೂರು (3) ಬಾರಿ ಮಾತ್ರ ಕಮ್ಯುಟ್ (commute) ಮಾಡಲು (ಹಿಂಪಡೆಯಲು) ಅನುಮತಿಸುತ್ತದೆ.