Jugalbandi Trailer: ಕಾಂತಾರ ಕಮಲಕ್ಕನ ಹೊಸ ಸಿನಿಮಾ ಟ್ರೇಲರ್‌ ಹೇಗಿದೆ ನೋಡಿ! ಜುಗಲ್‌ಬಂದಿ ಮೋಜು ಇಲ್ಲಿದೆ ನೋಡಿ

Jugalbandi Trailer: ಕಾಂತಾರ (kantara) ಸಿನಿಮಾದಲ್ಲಿ ಕಮಲಕ್ಕ ಪಾತ್ರ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಮಾನಸಿ ಸುಧೀರ್ (mansi sudhir) ಅವರು ಈಗ ಮತ್ತೊಮ್ಮೆ ಜುಗಲ್ ಬಂದಿ (Jugalbandi) ಮೂಲಕ ಸಿನಿ ಪ್ರಿಯರನ್ನು ರಂಜಿಸಲಿದ್ದಾರೆ. ಜುಗಲ್ ಬಂದಿ ಸಿನಿಮಾ (Cinema) ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇದೀಗ ‘ಜುಗಲ್ ಬಂದಿ’ ಟ್ರೇಲರ್‌ (Jugalbandi Trailer) ಬಿಡುಗಡೆ ಆಗಿದೆ.

 

ನಾಲ್ಕು ಡಿಫರೆಂಟ್ ಪ್ಲಾಟ್ ಒಳಗೊಂಡ ಸಿನಿಮಾ ‘ಜುಗಲ್ ಬಂದಿ’.
ಈ ಸಿನಿಮಾವನ್ನು ದಿವಾಕರ ಡಿಂಡಿಮ ನಿರ್ದೇಶಿಸಿದ್ದಾರೆ. ಇದು ದಿವಾಕರ ಅವರ ಮೊದಲು ಸಿನಿಮಾವಾಗಿದ್ದು, ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನದ ಜೊತೆಗೆ ತಮ್ಮ ಮೊದಲ ಸಿನಿಮಾಗೆ ತಾವೇ ಬಂಡವಾಳ ಕೂಡಾ ಹೂಡುತ್ತಿದ್ದಾರೆ. ಪ್ರದ್ಯೋತ್ತನ್ ಸಂಗೀತ ನಿರ್ದೇಶನ, ಪ್ರಸಾದ್ ಹೆಚ್ ಎಂ ಸಂಕಲನ ಈ ಚಿತ್ರಕ್ಕಿದೆ.

Jugalbandi ಸಸ್ಪೆನ್ಸ್, ಥ್ರಿಲ್ಲರ್ (thriller movie) ಕಥಾಹಂದರ ಒಳಗೊಂಡಿದೆ. ಫಸ್ಟ್ ಲುಕ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದ ಸಿನಿಮಾ ಸದ್ಯದಲ್ಲೇ ರಿಲೀಸ್‌ ಕೂಡಾ ಆಗಲಿದೆ. ಅದಕ್ಕೂ ಮುನ್ನ ಚಿತ್ರತಂಡ ಟ್ರೇಲರ್ ಮೂಲಕ ಸಿನಿಮಾಗೆ ಆಮಂತ್ರಣ ನೀಡಿದೆ. ಚಿತ್ರದಲ್ಲಿ ತಾಯಿ ಹೃದಯದ ಮಿಡಿತ, ಪ್ರೀತಿ, ವಂಚನೆ ಒಳಗೊಂಡ ಟ್ರೇಲರ್ ತುಣುಕು ವಿಭಿನ್ನವಾಗಿ, ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ.

ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಕಾಂತಾರ ಖ್ಯಾತಿಯ ಮಾನಸಿ ಸುಧೀರ್, ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.

Leave A Reply

Your email address will not be published.