Hero Splender : ನಂಬರ್‌ 1 ಸ್ಥಾನ ಪಟ್ಟ ಗಿಟ್ಟಿಸಿಕೊಂಡ ಹೀರೋ ಸ್ಪ್ಲೆಂಡರ್‌! ಇಲ್ಲಿದೆ ಅಂಕಿಅಂಶ!

Hero Splender: ಮಾರುಕಟ್ಟೆಯಲ್ಲಿ ‘ಹೀರೋ ಸ್ಪ್ಲೆಂಡರ್’ ಹವಾ ಬಹಳ ಜೋರಾಗಿಯೇ ಇದ್ದು, ಮಾರಾಟದ ಮೂಲಕ ಸಾಬೀತು ಕೂಡ ಮಾಡಿದೆ. 2022ರ ಡಿಸೆಂಬರ್‌ನಲ್ಲಿ 2,25,443 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಹೀರೋ ಸ್ಪ್ಲೆಂಡರ್ (Hero Splender) ಮತ್ತೊಮ್ಮೆ ದೇಶದಲ್ಲಿ ಅತಿಹೆಚ್ಚು ಮಾರಾಟವಾದ ಬೈಕ್ (bike ) ಎಂಬ ಹಿರಿಮೆ ಹೊಂದಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 288,605 ಯುನಿಟ್ ಮಾರಾಟ ಮಾಡಿದೆ. 2022ರ ಫೆಬ್ರವರಿಯಲ್ಲಿ 193,731 ಯುನಿಟ್ ಸ್ಪ್ಲೆಂಡರ್ ಬೈಕ್ ಮಾರಾಟ ಮಾಡಲು ಕಂಪನಿ ಯಶಸ್ವಿಯಾಗಿತ್ತು. ವರ್ಷದಿಂದ ವರ್ಷಕ್ಕೆ 48.97% (94,874 ಯುನಿಟ್ ಹೆಚ್ಚು) ಬೆಳವಣಿಗೆ ಸಾಧಿಸಿದೆ.

 

ಸದ್ಯ ‘ಹೀರೋ ಸ್ಪ್ಲೆಂಡರ್’ ಹೋಂಡಾ ಆಕ್ಟಿವಾ ಮತ್ತು ಬಜಾಜ್ ಪಲ್ಸರ್ ನಂತರದ ಸ್ಥಾನದಲ್ಲಿವೆ. ಸದ್ಯ 2023ರ ಫೆಬ್ರವರಿಯಲ್ಲಿ ಮಾರಾಟವಾದ ಟಾಪ್ ಹತ್ತು ದ್ವಿಚಕ್ರ ವಾಹಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಹೀರೋ, ಸ್ಪ್ಲೆಂಡರ್‌ XTECನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಅವುಗಳೆಂದರೆ, ಫ್ರಂಟ್ ಡ್ರಮ್ ಬ್ರೇಕ್ ಆವೃತ್ತಿ ಬೆಲೆ ರೂ.83,368 ಇದ್ದು, ಫ್ರಂಟ್ ಡಿಸ್ಕ್ ಬ್ರೇಕ್ ಆವೃತ್ತಿ ರೂ.87,268, ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗಲಿದೆ. ಇದು 124.7 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಫ್ಯುಯೆಲ್ ಇಂಜೆಕ್ಟ್ದ್ ಎಂಜಿನ್ ಹೊಂದಿದ್ದು, 10.7 bhp ಪವರ್, 10.6 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ.

ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಜನಪ್ರಿಯ ಸ್ಕೂಟರ್ ಗಳಲ್ಲಿ ಹೋಂಡಾ ಆಕ್ಟಿವಾ ಒಂದು . ಕಳೆದ ಫೆಬ್ರವರಿ ತಿಂಗಳಲ್ಲಿ ಹೋಂಡಾ ಕಂಪನಿಯು 174,503 ಯುನಿಟ್ ಆಕ್ಟಿವಾ ಸ್ಕೂಟರ್ ಗಳನ್ನೂ ಸೇಲ್ ಮಾಡಿದೆ. ಇನ್ನು 2022ರ ಫೆಬ್ರವರಿಯಲ್ಲಿ 145,317 ಯುನಿಟ್ ಮಾರಾಟ ಮಾಡಿತ್ತು. ಸದ್ಯ ಶೇಕಡ 20.08% (29,186 ಯುನಿಟ್) ಪ್ರಗತಿ ಸಾಧಿಸಿದೆ.

ಅದಲ್ಲದೆ ಸ್ಪೋರ್ಟ್ ಬೈಕ್, ಲೈನ್-ಅಪ್ ನಲ್ಲಿ ಬಜಾಜ್ ಪಲ್ಸರ್ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ಕಳೆದ ಫೆಬ್ರವರಿ ತಿಂಗಳಲ್ಲಿ ಕಂಪನಿಯು 80,106 ಯುನಿಟ್ ಪಲ್ಸರ್ ಸರಣಿ ಬೈಕ್ ಗಳನ್ನು ಮಾರಾಟ ಮಾಡಿ ಉತ್ತಮ ಪ್ರಗತಿ ಕಂಡಿದ್ದು, 2022ರ ಫೆಬ್ರವರಿಯಲ್ಲಿ 54,951 ಯುನಿಟ್ ಸೇಲ್ ಮಾಡಿತ್ತು. ಒಟ್ಟಿನಲ್ಲಿ ಶೇಕಡ 45.78% (25,155 ಯುನಿಟ್) ಬೆಳವಣಿಗೆ ಸಾಧಿಸಿದೆ.

ಹೀರೋ ಕಂಪನಿ HF ಡಿಲಕ್ಸ್ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ಫೆಬ್ರವರಿಯಲ್ಲಿ 56,290 ಯುನಿಟ್ ಮಾತ್ರ ಮಾರಾಟ ಮಾಡಿದ್ದು, 2022ರ ಫೆಬ್ರವರಿಯಲ್ಲಿ 75,927 ಯುನಿಟ್ ಸೇಲ್ ಮಾಡಿತ್ತು. ಇದರಲ್ಲಿ 25.86% ಇಳಿಕೆಯಾಗಿದೆ. ಆದರೆ, ಟಿವಿಎಸ್ ಕಂಪನಿ ಮಾತ್ರ ಜುಪಿಟರ್ ಸ್ಕೂಟರ್ ಮಾರಾಟದಲ್ಲಿ ಯಶಸ್ವಿಯಾಗಿದ್ದು, ಕಳೆದ ತಿಂಗಳು 53,891 ಯುನಿಟ್ ಸೇಲ್ ಮಾಡಿದ್ದು, 2022ರಲ್ಲಿ 47,092 ಯುನಿಟ್ ಸ್ಕೂಟರ್ ಮಾರಾಟವಾಗಿದ್ದವು. ಶೇಕಡ 14.44% (6,799 ಯುನಿಟ್‌ಗಳು) ಪ್ರಗತಿ ಸಾಧಿಸಿದೆ.

ಜಪಾನಿನ ಪ್ರಮುಖ ವಾಹನ ತಯಾರಕ ಸುಜುಕಿ, ತನ್ನ ಆಕ್ಸೆಸ್ ಸ್ಕೂಟರ್ ಮಾರಾಟದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ. ಕಳೆದ ಫೆಬ್ರವರಿಯಲ್ಲಿ 37,512 ಯೂನಿಟ್‌ ಸ್ಕೂಟರ್‌ ಸೇಲ್ ಮಾಡಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 7.15% ಬೆಳೆವಣಿಗೆ ಕಂಡಿದೆ. 2022ರ ಫೆಬ್ರವರಿಯಲ್ಲಿ 37,512 ಯುನಿಟ್ ಮಾರಾಟ ಮಾಡಿತ್ತು.

ಹೋಂಡಾ ಕಂಪನಿ ಹೋದ ತಿಂಗಳು 35,594 ಶೈನ್ ಬೈಕ್ ಮಾರಾಟ ಮಾಡಲು ಯಶಸ್ವಿಯಾಗಿದ್ದು, 56.43% ನಷ್ಟ ಅನುಭವಿಸಿದೆ. 2022ರ ಫೆಬ್ರವರಿಯಲ್ಲಿ 81,700 ಯುನಿಟ್ ಸೇಲ್ ಮಾಡಿತ್ತು.

ಸದ್ಯ ಎಲ್ಲ ಸ್ಥಾನವನ್ನು ಟಿವಿಎಸ್ ಕಂಪನಿಯೇ ಆವರಿಸಿಕೊಂಡಿದ್ದು, XL 100ರ 35,346 ಯುನಿಟ್, ಅಪಾಚೆ ಸರಣಿಯ 34,935 ಯುನಿಟ್ ಬೈಕ್ ಹಾಗೂ ರೈಡರ್ ಸರಣಿಯ 30,346 ಯುನಿಟ್ ಬೈಕ್ ಮಾರಾಟ ಮಾಡಿದ್ದು, ಒಟ್ಟಿನಲ್ಲಿ ಸ್ಪ್ಲೆಂಡರ್ ಬೈಕ್ ಗಳು ಭಾರತದ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿ ಪಡೆದುಕೊಂಡಿದೆ.

ಇದನ್ನೂ ಓದಿ : Moto Tab G70 : ಮೊಟೊ ಟ್ಯಾಬ್‌ G70 ಬೆಲೆಯಲ್ಲಿ ಇಳಿಕೆ ! ಈ ಆಫರ್‌ ಮಿಸ್‌ ಮಾಡಬೇಡಿ!!!

Leave A Reply

Your email address will not be published.