Nissan Magnite : ನಿಸ್ಸಾನ್ ಇಂಡಿಯಾದಿಂದ ಗೇಮ್ ಚೇಂಜರ್ ಮ್ಯಾಗ್ನೈಟ್ ಎಸ್‌ಯುವಿಗೆ ಭಾರೀ ಕಡಿತ !!

Nissan Magnite: ಇಂದು ಓಡಾಟ ನಡೆಸಲು ವಾಹನಗಳು ಎಷ್ಟು ಅವಶ್ಯಕ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.ಈ ದುಬಾರಿ ದುನಿಯಾದಲ್ಲಿ ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡುಬರುತ್ತಿರುವ ನಡುವೆಯೇ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಇದೀಗ, ದೇಶಾದ್ಯಂತ ‘ನಿಸ್ಸಾನ್ ಇಂಡಿಯಾ'(Nissan India) BS6 2ನೆ ಹಂತದ ಎಮಿಷನ್ ಮಾನದಂಡಗಳು ಜಾರಿಯಾಗುವ ಮೊದಲೇ ತನ್ನ ಗ್ರಾಹಕರಿಗಾಗಿ ಭರ್ಜರಿ ಸಿಹಿ ಸುದ್ದಿ ನೀಡಿದೆ.

 

ಹೌದು!! 2022 ಮತ್ತು 2023ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮ್ಯಾಗ್ನೈಟ್ ಎಸ್‌ಯುವಿಯ (Nissan Magnite)ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ನೂತನ ಮ್ಯಾಗ್ನೈಟ್ ಎಸ್‌ಯುವಿ (SUV) ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪುಶ್ ಬಟನ್ ಸ್ಟಾರ್ಟ್, ಸ್ಮಾರ್ಟ್ ಕೀ, ಆಟೋ ಎಸಿ, ರೇರ್ ಎಸಿ ವೆಂಟ್ಸ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಏರ್ ಪ್ಯೂರಿಫೈಯರ್ ಅನೇಕ ವಿಶೇಷತೆಯನ್ನು ಹೊಂದಿದೆ.

ಮ್ಯಾಗ್ನೈಟ್ ಎಸ್‌ಯುವಿ (Nissan Magnite) ಸುರಕ್ಷತೆಯನ್ನು ಗಮನ ಹರಿಸಿದರೆ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಪಾರ್ಕಿಂಗ್ ಸೇನಾರ್ಸ್, ISOFIX ಚೈಲ್ಡ್ ಸೀಟ್ ಮೌಂಟ್ಸ್ ಅನ್ನು ಹೊಂದಿದೆ. ಟಾಪ್ ಎಂಡ್ ರೂಪಾಂತರವು 360-ಡಿಗ್ರಿ ಕ್ಯಾಮೆರಾ ಹಾಗೂ ಟೈರ್ ಪ್ರೆಶರ್ ಮಾನಿಟರ್ ಸಿಸ್ಟಮ್ ಸೇರಿದಂತೆ ಅನೇಕ ವಿಶೇಷತೆಯನ್ನು ಒಳಗೊಂಡಿದೆ.

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ, ಗರಿಷ್ಠ ರೂ.90,000 ವರೆಗಿನ ಆಫರ್ ಹೊಂದಿದ್ದು, ಅದರಲ್ಲಿ ರೂ.20,000 ಎಕ್ಸ್ಚೇಂಜ್ ಬೋನಸ್, ರೂ.20,000 ನಗದು ರಿಯಾಯಿತಿ, ರೂ.10,000 ಲಾಯಲ್ಟಿ ಬೋನಸ್ ಹಾಗೂ ರೂ.15,000 ವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ. ಇದಲ್ಲದೇ,ರೂ.12,100 (3 ವರ್ಷಗಳು) ಪ್ರಿ- ಮೈಂಟೆನನ್ಸ್ ಪ್ಯಾಕೇಜ್ ಹಾಗೂ ರೂ.2,000 ವರೆಗೆ ಆನ್‌ಲೈನ್ ಬುಕಿಂಗ್ ಕೂಡ ಮಾಡುವ ಅವಕಾಶ ಕೂಡ ನಿಸ್ಸಾನ್ ಗ್ರಾಹಕರಿಗೆ ದೊರೆಯಲಿದೆ. ನಿಸ್ಸಾನ್ ಕಂಪನಿಯ ಈ ಮ್ಯಾಗ್ನೈಟ್ ಎಸ್‌ಯುವಿಯ ಎಂಜಿನ್ ಕಾರ್ಯಕ್ಷಮತೆ ಗಮನಿಸಿದರೆ, 1.0-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 72 bhp ಗರಿಷ್ಠ ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 1.0-ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆದಿರುವ ಕಾರು, 98.6 bhp ಪವರ್, 160 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಭಾರತದ ಮಾರಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಮ್ಯಾಗ್ನೈಟ್ ಎಸ್‌ಯುವಿ ರೂ.6 ಲಕ್ಷದಿಂದ ರೂ.10.94 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯಲಿದೆ. ಉತ್ತಮ ಇಂಧನ ದಕ್ಷತೆಯನ್ನು ಒಳಗೊಂಡಿದೆ. 18.75 – 20.0 kmpl ಮೈಲೇಜ್ ನೀಡಲಾಗಿದ್ದು, ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. ದೊಡ್ಡ ಮಟ್ಟದಲ್ಲಿ ರಿಯಾಯಿತಿ ಘೋಷಣೆಯಿಂದ ಈ ಎಸ್‌ಯುವಿಯ ಮಾರಾಟ ಪ್ರಮಾಣದಲ್ಲಿ ಬೆಳವಣಿಗೆ ಆಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: Hero Splender : ನಂಬರ್‌ 1 ಸ್ಥಾನ ಪಟ್ಟ ಗಿಟ್ಟಿಸಿಕೊಂಡ ಹೀರೋ ಸ್ಪ್ಲೆಂಡರ್‌! ಇಲ್ಲಿದೆ ಅಂಕಿಅಂಶ!

 

Leave A Reply

Your email address will not be published.