Dhanush and Meena Marriage : ನಟ ಧನುಷ್‌ ಜೊತೆ ಮೀನಾ ಮದುವೆ! ತಮಿಳು ನಟ ಬಿಚ್ಚಿಟ್ರು ಶಾಕಿಂಗ್‌ ನ್ಯೂಸ್‌

Dhanush and Meena Marriage: ಕಾಲಿವುಡ್ ನಲ್ಲಿ ಮಿಂಚುತ್ತಿರುವ ಸ್ಟಾರ್ ನಟ ಧನುಷ್ (Dhanush) ರಜಿನಿಕಾಂತ್ (Rajinikanth)ಹಿರಿಯ ಪುತ್ರಿ ಐಶ್ವರ್ಯಾ(Aishwarya Rajinikanth) ಅವರನ್ನು ಪ್ರೀತಿಸಿ ವಯಸ್ಸಿನ ಅಂತರವಿದ್ದರೂ ಕೂಡ ಧನುಷ್​ ಮತ್ತು ಐಶ್ವರ್ಯಾ 2004ರ ನವೆಂಬರ್​ 18ರಂದು ದಾಂಪತ್ಯ(Marriage) ಜೀವನಕ್ಕೆ ಕಾಲಿಟ್ಟಿದ್ದು, ಈ ಸುಧೀರ್ಘ 18 ವರ್ಷಗಳ ಸುಂದರ ಜೀವನ ನಡೆಸಿ ಇಬ್ಬರು ಮುದ್ದಾದ ಮಕ್ಕಳನ್ನು ಹೊಂದಿದ್ದಾರೆ. ಜೋಡಿಯ ನಡುವೆ ಸಂಸಾರದಲ್ಲಿ ಬಿರುಗಾಳಿ ಎದ್ದು, ಇದ್ದಕಿದ್ದಂತೆ 2022ರ ಜನವರಿ 17ರಂದು ವಿಚ್ಛೇಧನ ( Divorce) ನೀಡಿದ ಜೋಡಿ ಚಿತ್ರರಂಗದವರಿಗೆ ಮಾತ್ರವಲ್ಲದೆ ಅಭಿಮಾನಿಗಳಿಗೂ ಶಾಕ್ ನೀಡಿದ್ದರು. ಇದೀಗ, ನಟ ಧನುಷ್ ಕುರಿತ ಹೊಸ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.

 

ಹೌದು!! ನಟ ಧನುಷ್ ನಟಿಯೊಬ್ಬರ ಜೊತೆ ಮರು ಮದುವೆ ಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ. ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಕಳೆದ ಕೆಲ ವರ್ಷಗಳಿಂದ ತಮ್ಮ ಯೂಟ್ಯೂಬ್​ ಚಾನೆಲ್​(YouTube Channel) ಮೂಲಕ ನಟ ಹಾಗೂ ನಟಿಯರನ್ನು ಕೇಂದ್ರೀಕರಿಸಿಕೊಂಡು ಅವರ ವಿರುದ್ದ ಸುಳ್ಳು ಸುದ್ದಿಗಳನ್ನು(Gossips) ಹಬ್ಬಿಸುವ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಸದ್ಯ ಇವರ ಈ ನಡೆಗೆ ನಟಿಯರನ್ನೇ ಹೆಚ್ಚು ಟಾರ್ಗೆಟ್ ಮಾಡುವ ಹಿನ್ನೆಲೆ ನಟಿಯರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಷ್ಟೆ ಅಲ್ಲದೇ, ಅನೇಕ ಕಲಾವಿದರು ಕೂಡ ರಂಗನಾಥನ್​ ವಿರುದ್ಧ ತಮ್ಮ ಧ್ವನಿ ಎತ್ತಿರುವುದು ಕೂಡ ಇದೆ. ಇದೀಗ ರಂಗನಾಥನ್​ ಧನುಷ್​ ಬಗ್ಗೆ ರೋಚಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಇದರ ಅಸಲಿ ಸತ್ಯದ ಬಗ್ಗೆ ನಟ ಧನುಷ್ ಮಾಹಿತಿ ನೀಡಿದ ಬಳಿಕವಷ್ಟೇ ಹೊರ ಬೀಳಬೇಕಾಗಿದೆ.

ನಟ ಧನುಷ್​, ದಕ್ಷಿಣ ಭಾರತದ ನಟಿ ಮೀನಾ(Dhanush and Meena Marriage) ಅವರನ್ನು ಮದುವೆಯಾಗುವ (Marriage)ಯೋಜನೆ ಹಾಕಿಕೊಂಡಿದ್ದಾರೆ ಎಂದು ಬೈಲ್ವಾನ್ ರಂಗನಾಥ್ ಹೇಳಿದ್ದಾರೆ. ಮೀನಾ ಮತ್ತು ವಿದ್ಯಾಸಾಗರ್​ ಅವರು 2009ರ ಜುಲೈ 12ರಲ್ಲಿ ಮದುವೆಯಾಗಿದ್ದು, ದಂಪತಿಗೆ ನೈನಿಕಾ ಹೆಸರಿನ ಹೆಣ್ಣು ಮಗಳಿದ್ದಾಳೆ. ಮೀನಾ ಅವರ ಪತಿ ವಿದ್ಯಾಸಾಗರ್​ , ಜೂನ್​ 28 2022ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ(Private Hospital) ಅಸುನೀಗಿದರು. ಪತಿಯನ್ನು ಕಳೆದುಕೊಂಡ ಬಳಿಕ ಮೀನಾ(Meena) ಏಕಾಂಗಿಯಾಗಿ ಜೀವನ ಬಂಡಿಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ, ಐಶ್ವರ್ಯಾ ಅವರ ಜೊತೆಗಿನ ಸಂಬಂಧವನ್ನು ಧನುಷ್ ಕಡಿದುಕೊಂಡಿರುವ ಹಿನ್ನಲೆಯಲ್ಲಿ ಜುಲೈನಲ್ಲಿ ಮೀನಾರನ್ನು ಧನುಷ್​ ಮದುವೆ ಆಗಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.


ಇಬ್ಬರು ಕೂಡ ಯುವ ವಯಸ್ಸಿನವರಾಗಿದ್ದು,ತಮ್ಮ ಜೀವನ ಸಂಗಾತಿಗಳಿಲ್ಲದೆ ಜೀವನ ನಡೆಸುತ್ತಿದ್ದು, ಹಾಗಾಗಿ ಇಬ್ಬರೂ ಒಂದಾಗಿ ಬೇರೆ ಜೀವನ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ. ಕೆಲವೊಮ್ಮೆ ಮದುವೆಯಾಗದೆ ಇಬ್ಬರೂ ಜೊತೆಯಾಗಿ ವಾಸಿಸುವ ಸಾಧ್ಯತೆಯಿರುವ ಬೈಲ್ವಾನ್ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹೇಳಿಕೊಂಡಿದ್ದು, ಇದೀಗ, ಮೀನಾ ಇಲ್ಲವೇ ಧನುಷ್​ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇವರು ಪ್ರತಿಕ್ರಿಯೆ ನೀಡಿದ ಬಳಿಕವಷ್ಟೇ ಅಸಲಿ ಸತ್ಯ ಗೊತ್ತಾಗಬೇಕಾಗಿದೆ.
ಧನುಷ್ ಮತ್ತು ಐಶ್ವರ್ಯಾ ಜೋಡಿಗೆ ಯಾತ್ರ ಮತ್ತು ಲಿಂಗ ಹೆಸರಿನ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದು, ಡಿವೋರ್ಸ್​ ಬಳಿಕ ಇಬ್ಬರು ತಮ್ಮ ಮಕ್ಕಳಿಗಾಗಿ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇದಲ್ಲದೆ, ಶೀಘ್ರದಲ್ಲೇ ವಿಚ್ಛೇದನ ಹಿಂತೆಗೆದುಕೊಳ್ಳಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೇ, ಎರಡು ಕುಟುಂಬಗಳ ಸದಸ್ಯರು ತಾರಾದಂಪತಿಯನ್ನು ಒಂದುಗೂಡಿಸಲು ಪ್ರಯತ್ನ ನಡೆಸುತ್ತಿದ್ದು, ಇದೆಲ್ಲ ಬೆಳವಣಿಗೆಯ ನಡುವೆ ಧನುಷ್ ಅವರ ಮುಂದಿನ ನಡೆ ಏನು ಎಂಬ ಕೌತುಕ ಎಲ್ಲರಲ್ಲಿಯೂ ಮನೆ ಮಾಡಿದೆ.

ಇದನ್ನೂ ಓದಿ: Dharmendra-Hema Malini Love : ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಹೇಮಾ ಮಾಲಿನಿಯನ್ನು ಪ್ರೀತಿಸಿ ಮದುವೆಯಾದ್ರ ಧರ್ಮೇಂದ್ರ?! ಇವರ ಲವ್‌ಸ್ಟೋರಿ ಅದ್ಭುತ!!

Leave A Reply

Your email address will not be published.