Rakshith Shetty : ಸಪ್ತಸಾಗರದ ಕೆಲಸ ಮುಗಿಸಿದ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ! ಮುಂದಿನ ಕೆಲಸ ಇದು!

Rakshith Shetty: ಕಿರಿಕ್ ಪಾರ್ಟಿ ಮೂಲಕ ಸದ್ದು ಮಾಡಿದ ಸೈಲೆಂಟ್ ಬಾಯ್ ರಕ್ಷಿತ್ ಶೆಟ್ಟಿ(Rakshith Shetty)ಯವರ ಹೊಸ ಸಿನಿಮಾ ಸೆಟ್ಟೇರಿದೆ. 777 ಚಾರ್ಲಿ’ ತೆರೆ ಕಂಡ ಬಳಿಕ ಸಿಂಪಲ್ ಸ್ಟಾರ್ ನಟನೆಗೆ ಎಲ್ಲೆಡೆ ಮೆಚ್ಚುಗೆಯ ಸುರಿಮಳೆ ಹರಿದುಬಂದದ್ದು ಮಾತ್ರವಲ್ಲ ದೊಡ್ಡ ಮಟ್ಟದ ನೇಮ್ ಫೇಮ್ ಕೂಡ ಬಂದಿದ್ದು ಸುಳ್ಳಲ್ಲ.ಈ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ.ಸದ್ಯ, ರಕ್ಷಿತ್ ಶೆಟ್ಟಿ ಅವರ ಹೊಸ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದ್ದು ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟುಹಾಕಿದೆ.

 

‘ಸಪ್ತಸಾಗರದಾಚೆ ಎಲ್ಲೋ ‘ (Sapta Sagaradaache Yello)ಸಿನಿಮಾಗೆ ಚರಣ್ ರಾಜ್ ಸಂಗೀತ ನೀಡಿದ್ದು, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ. ಪರಂವ ಸಂಸ್ಥೆಯ ಅಡಿಯಲ್ಲಿ ಸ್ವತಃ ರಕ್ಷಿತ್ ಶೆಟ್ಟಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು,ಈಗಾಗಲೇ ರಿಲೀಸ್ ಆಗಿರುವ 2 ಟೀಸರ್ಗಳು ಸಿನಿಮಾದ ಮೇಲೆ ಹೆಚ್ಚು ನಿರೀಕ್ಷೆ ಮೂಡುವಂತೆ ಮಾಡಿದೆ. ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಕಾಂಬಿನೇಶನ್ ನಲ್ಲಿ ಬಹುನಿರೀಕ್ಷಿತ ಸಿನಿಮಾ ‘ಸಪ್ತಸಾಗರದಾಚೆ ಎಲ್ಲೋ’ ಮೂಡಿ ಬಂದಿದ್ದು, ಹೇಮಂತ್ ಕುಮಾರ್ ನಿರ್ದೇಶನದ ಈ ರೊಮ್ಯಾಂಟಿಕ್ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ (Rukmini Vasanth)ಹಾಗೂ ಚೈತ್ರಾ ಆಚಾರ್(Chaitra Achar) ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ‘ಕವಲು ದಾರಿ’ ಸಿನಿಮಾದ ಬಳಿಕ ಹೇಮಂತ್ ಕುಮಾರ್ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಕೈಗೆತ್ತಿಕೊಂಡಿದ್ದು, ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರಿಗೆ ಕೆಲ ದಿನಗಳ ಕಾಲ ವರ್ಕ್ಶಾಪ್ ನಡೆಸಿದ ಬಳಿಕ ಚಿತ್ರೀಕರಣ ಶುರು ಮಾಡಿದ್ದರಂತೆ.

ರಕ್ಷಿತ್ ಶೆಟ್ಟಿ ನಟಿಸಿರುವ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಬರೋಬ್ಬರಿ 137 ದಿನಗಳವರೆಗೆ ಚಿತ್ರೀಕರಣ ಮಾಡಲಾಗಿದೆ. ನಟ ರಕ್ಷಿತ್ ಶೆಟ್ಟಿ ವಿಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ (Social Media)ಚಿತ್ರತಂಡ ಚಿತ್ರೀಕರಣಕ್ಕೆ ಪೂರ್ಣ ವಿರಾಮ ಹಾಕಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಪ್ರಾರಂಭ ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಎರಡು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 25 ಮತ್ತು 45ರ ವಯೋಮಾನದ ಕುರಿತ ಕಥಾ ಹಂದರ ಇದಾಗಿದ್ದು, ಈ ಸಿನಿಮಾದಲ್ಲಿ ಸ್ಲಿಮ್ ಅಂಡ್ ಸ್ಮಾರ್ಟ್ ಕಾಲೇಜು ಹುಡುಗನಾಗಿ ರಕ್ಷಿತ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ.

ಈ ಪಾತ್ರದ ಸಲುವಾಗಿ ಒಮ್ಮೆ 15ರಿಂದ 20 ಕೆಜಿ ತೂಕ ಹೆಚ್ಚಿಸಿಕೊಂಡು ಮತ್ತೆ ತೂಕ ಇಳಿಸಿಕೊಂಡು ಅಭಿಮಾನಿಗಳ ಮನ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ.ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಒಂದೆಡೆ ಕಾಲೇಜ್ ಬಾಯ್ ಆಗಿ ಕಾಣಿಸಿಕೊಂಡರೆ ಮತ್ತೊಂದೆಡೆ ಸಾಲ್ಟ್ ಅಂಡ್ ಪೆಪ್ಪರ್ ಗಡ್ಡ ಬಿಟ್ಟು ತೂಕ ಹೆಚ್ಚಿಸಿಕೊಂಡು ರಗಡ್ ಲುಕ್ ನಲ್ಲಿ ಮಿಂಚಿದ್ದಾರೆ. ಕಾಲೇಜ್ ಸ್ಟೋರಿಯಲ್ಲಿ ರುಕ್ಮಿಣಿ ನಾಯಕಿಯಾಗಿ ಜೋಡಿಯಾಗಿದ್ದು ಆ ಬಳಿಕ ಚೈತ್ರಾ ಆಚಾರ್ ಜೋಡಿ ಆಗುತ್ತಾರೆ ಎಂದು ಅಂದಾಜಿಸಲಾಗಿದೆ. ಇದೊಂದು ಲವ್ ಸ್ಟೋರಿ ಎನ್ನಲಾಗಿದ್ದು ,2010ರಿಂದ 2020ರ ನಡುವಿನ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆಯಂತೆ.

ಕೊರೊನಾದಿಂದ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಶೂಟಿಂಗ್ ತಡವಾಗಿದ್ದು, ಹಾಗೋ ಹೀಗೋ ಸಿನಿಮಾ ಚಿತ್ರೀಕರಣ ಮುಗಿದಿದೆ. ಈ ಸಿನಿಮಾ ಶುರುವಾದ ಬಳಿಕ ರಕ್ಷಿತ್ ಶೆಟ್ಟಿ ಬೇರೆ ಯಾವುದೇ ಚಿತ್ರದ ಕಡೆಗೂ ಗಮನ ಕೊಟ್ಟಿರಲಿಲ್ಲ. ಇದೀಗ ಚಿತ್ರೀಕರಣ ಮುಗಿದಿರುವುದರಿಂದ ‘ರಿಚರ್ಡ್ ಆಂಟನಿ’ ಸಿನಿಮಾ ಕೈಗೆತ್ತಿಕೊಳ್ಳುವ ಸಂಭವ ಹೆಚ್ಚಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಚಿತ್ರವನ್ನು ಬಹಳ ಹಿಂದೆಯೇ ಘೋಷಣೆ ಮಾಡಲಾಗಿದ್ದು, ಇದು ‘ಉಳಿದವರು ಕಂಡಂತೆ’ ಸಿನಿಮಾದ ಫ್ರಿಕ್ವೆಲ್ ಎನ್ನಲಾಗಿದೆ. ಇನ್ನೂ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ನಿರ್ದೇಶಕ ಹೇಮಂತ್ ರಾವ್(Hemanth Rao) ಪ್ರೇಮ ಕಥೆಯನ್ನು ಪ್ರೇಕ್ಷಕರ ಮನಮುಟ್ಟುವ ನಿಟ್ಟಿನಲ್ಲಿ ಹರಸಾಹಸ ಮಾಡಿದ್ದು, ಚಿತ್ರ ತೆರೆ ಕಂಡ ಬಳಿಕವಷ್ಟೆ ಅಭಿಮಾನಿಗಳ ನಿರೀಕ್ಷೆಗೆ ಉತ್ತರ ತಿಳಿಯಬೇಕಾಗಿದೆ.

 

ಇದನ್ನೂ ಓದಿ : Chhattisgarh: ಈ ಊರ ಜನರಿಗೆ ಕೆಲ್ಸ ಇಲ್ಲ ಕಾರ್ಯ ಇಲ್ಲ, ಆದ್ರೂ ಲಕ್ಷ-ಲಕ್ಷ ದುಡಿತಾರೆ! ಏನಿವರ ಸಂಪಾದನೆಯ ಗುಟ್ಟು? ಕೇಳಿದ್ರೆ ನೀವೂ ಶಾಕ್ ಆಗ್ತೀರಾ!

Leave A Reply

Your email address will not be published.