Niharika Chaitanya : ಮೆಗಾ ಫ್ಯಾಮಿಲಿಯಲ್ಲಿ ನಡೆಯಲಿದೆಯೇ ಮತ್ತೊಂದು ಡಿವೋರ್ಸ್‌! ಇಲ್ಲಿದೆ ಸಾಕ್ಷಿ!

Niharika Chaitanya: ಸೆಲೆಬ್ರಿಟಿ ಎಂದರೆ ಸಾಕು!! ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜನರಿಗೆ ಸಹಜವಾಗಿ ಹೆಚ್ಚಿರುತ್ತದೆ. ಅವರ ಮನೆಯ ಆಗು ಹೋಗುಗಳ ಬಗ್ಗೆ ಇಣುಕುವ ಸ್ವಭಾವ ಹೆಚ್ಚಿನವರಿಗಿದೆ. ಈ ವಿಚಾರಗಳ ಬಗ್ಗೆ ಪ್ರಚಾರ ಮಾಡುವವರು ಕಡಿಮೆಯಿಲ್ಲ. ಇದೀಗ, ಚೈತನ್ಯ ಮತ್ತು ನಿಹಾರಿಕಾ(Niharika Konidela)ಸಂಸಾರದ ಕುರಿತಂತೆ ಗುಸುಗುಸು ಕೇಳಿಬರುತ್ತಿದೆ.

 

ತೆಲುಗು ನಟ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಪುತ್ರಿ ನಿಹಾರಿಕಾ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ. ನಿಹಾರಿಕಾ ಡಿಸೆಂಬರ್ 2020 ರಲ್ಲಿ ಚೈತನ್ಯ ಜೊನ್ನಲಗಡ್ಡ ಅವರ ಜೊತೆಗೆ ಸಪ್ತಪದಿ ತುಳಿದಿದ್ದರು. ಸುಂದರವಾಗಿ ಸಾಗುತ್ತಿದ್ದ ಸಂಸಾರದಲ್ಲಿ ಇದೀಗ ಅಪಶೃತಿ ಕೇಳಿಬಂದಿದ್ದು, ಈ ಜೋಡಿ ಡೈವೋರ್ಸ್ ( Divorce) ಕೂಡ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಮದುವೆ ಎಂಬ ವಿಚಾರ ಒಂದು ರೀತಿಯ ಫ್ಯಾಷನ್ ರೀತಿ ಆಗಿ ಬಿಟ್ಟಿದೆ. ಸಿನಿಮಾ ತಾರೆಯರ ವೈಯಕ್ತಿಕ ವಿಚಾರವನ್ನು ತಿಳಿದುಕೊಳ್ಳುವ ಹುಚ್ಚು ಕುತೂಹಲ ಎಲ್ಲರಿಗೂ ಇರುವಂತಹದ್ದೇ!! ಈಗ ಚಿರಂಜೀವಿ ಮಗಳು ನಿಹಾರಿಕಾ ಕೊನಿಡೆಲಾ (Niharika Konidela) ಮತ್ತು ಅವರ ಪತಿ ಚೈತನ್ಯ ಜೆವಿ ಸಂಬಂಧ ಮುರಿದು ಬಿದ್ದಿದೆ ಎಂಬ ಸುದ್ದಿ ಜೋರಾಗಿದೆ.

ಮೆಗಾ ಫ್ಯಾಮಿಲಿಯಿಂದ ಬಂದ ಏಕೈಕ ಹೀರೊಯಿನ್ ಆಗಿರುವ ನಿಹಾರಿಕಾ(Niharika Chaitanya) ಕೋನಿದೇಲ 2016ರಲ್ಲಿ ‘ಒಕ ಮನಸು’ ಎನ್ನುವ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡ ಬಳಿಕ, ಹ್ಯಾಪಿ ವೆಡ್ಡಿಂಗ್’, ‘ಸೂರ್ಯಕಾಂತಂ’ ಎನ್ನುವ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಇದಲ್ಲದೆ, ಕಿರುತೆರೆಯ ‘ಡಿ ಜ್ಯೂನಿಯರ್ಸ್’ ಡ್ಯಾನ್ಸ್ ಶೋ ನಿರೂಪಣೆ ಕೂಡ ಮಾಡಿದ್ದಾರೆ. ಇನ್ನು ಜೀ-5ಗಾಗಿ ವೆಬ್ ಸೀರಿಸ್ ಕೂಡ ಮಾಡುತ್ತಿದ್ದಾರಂತೆ. ನಿಹಾರಿಕಾ ಹಾಗೂ ಚೈತನ್ಯಾ ಅವರದ್ದು ಲವ್ ಮ್ಯಾರೇಜ್( Love Marriage)ಆಗಿದ್ದು, 2020 ಡಿಸೆಂಬರ್ 9ರಂದು ರಾಜಸ್ಥಾನದ ಉದಯ್ಪುರ್ದಲ್ಲಿರುವ ಒಬೆರಾಯ್ ಉದಯ್ ವಿಲಾಸದಲ್ಲಿ ಗ್ರಾಂಡ್ ಫಂಕ್ಷನ್ ನಡೆದು ಈ ಲವ್ ಬರ್ಡ್ಸ್ ಹೊಸ ಜೀವನಕ್ಕೆ ಮುನ್ನುಡಿ ಬರೆದದ್ದು ಹಳೆ ವಿಚಾರ.

ಡೆಸ್ಟಿನೇಷನ್ ಮ್ಯಾರೇಜ್ಗೆ ಮೆಗಾ ಫ್ಯಾಮಿಲಿ ಸ್ಟಾರ್ಗಳ ಜೊತೆಗೆ ಟಾಲಿವುಡ್ ಸೆಲೆಬ್ರೆಟಿಗಳು ಕೂಡ ಭಾಗಿಯಾಗಿ ಈ ಮುದ್ದಾದ ಜೋಡಿಗೆ ಶುಭ ಕೋರಿದ್ದರು. ಆದರೆ, ಇದೀಗ, ಈ ಜೋಡಿಯ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಊಹಾಪೋಹ ಎಲ್ಲೆಡೆ ಹಬ್ಬಿದ್ದು, ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗಷ್ಟೆ ಚೈತನ್ಯ ಮತ್ತು ನಿಹಾರಿಕಾ ತಮ್ಮ ಮದುವೆ ಫೋಟೋಗಳನ್ನು(Marrige Photos) ಇನ್ಸ್ಟಾಗ್ರಾಮ್ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.

ಇದನ್ನೆಲ್ಲಾ ನೋಡಿ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಇದೇ ಕಾರಣಕ್ಕೆ ಎಲ್ಲಾ ಸೆಲೆಬ್ರೆಟಿಗಳು ಡಿವೋರ್ಸ್‌ಗೆ ಮುನ್ನ ಮಾಡುವ ಕೆಲಸವನ್ನು ಇವರಿಬ್ಬರು ಕೂಡ ಮಾಡಿದ್ದಾರಾ? ಪರೋಕ್ಷವಾಗಿ ಇಬ್ಬರು ದೂರಾಗುತ್ತಿರುವ ಬಗ್ಗೆ ಸುಳಿವು ಕೊಟ್ಟಿದ್ದಾರಾ? ಎನ್ನುವ ಗುಸುಗುಸು ಶುರುವಾಗಿದೆ.

ಇದಲ್ಲದೆ, ನಿಹಾರಿಕಾ ಮತ್ತು ಚೈತನ್ಯ ಇನ್ಸ್ಟಾಗ್ರಾಮ್ನಲ್ಲಿ(Instagram) ಪರಸ್ಪರ ಅನ್ಫಾಲೋ( Unfollow)ಮಾಡಿಕೊಂಡಿದ್ದಾರೆ. ಮೆಗಾ ಫ್ಯಾಮಿಲಿಯ ಎಲ್ಲರನ್ನೂ ಫಾಲೋ ಮಾಡುತ್ತಿರುವ ಚೈತನ್ಯ, ನಿಹಾರಿಕಾ ಅವರನ್ನು ಮಾತ್ರ ಅನ್​ಫಾಲೋ ಮಾಡಿದನ್ನ ಕಂಡು ಇದೇನಪ್ಪಾ ಹೊಸ ವರಸೆ? ಏನಾಯ್ತು ಈ ಜೋಡಿಗೆ ಎಂದು ಅಭಿಮಾನಿಗಳು ತಮ್ಮಲ್ಲೇ ಚರ್ಚೆ ಮಾಡಿಕೊಳ್ಳುತ್ತಿದ್ದಾರೆ. ಮುದ್ದಿನ ನಾಯಿ ಜೊತೆ ಬಹಳ ಹಿಂದೆ ನಿಹಾರಿಕಾ ಕ್ಲಿಕ್ಕಿಸಿಕೊಂಡಿದ್ದ ಫೋಟೊವನ್ನು ಮಾತ್ರ ಚೈತನ್ಯಾ ಖಾತೆಯಲ್ಲಿ ಇರಿಸಿಕೊಂಡಿದ್ದು ಈ ಜೋಡಿ ಜೊತೆಯಾಗಿ ತೆಗೆದುಕೊಂಡ ಬೇರೆ ಯಾವುದೇ ಫೋಟೋ ಖಾತೆಯಲಿಲ್ಲ ಇದನ್ನು ನೋಡಿ ಅಭಿಮಾನಿಗಳು ಉಳಿದವರಂತೆ ಈ ಜೋಡಿ ವಿಚ್ಛೇದನ ಪಡೆದುಕೊಂಡು ದೂರ ಆಗುತ್ತಿರುವ ಬಗ್ಗೆ ಸುಳಿವು ನೀಡುತ್ತಿದ್ದಾರಾ?? ಎಂದು ತಮ್ಮಲ್ಲೇ ಚರ್ಚೆ ಮಾಡುತ್ತಿದ್ದಾರೆ.

ಆದರೆ, ಈ ಜೋಡಿಯ ವಿಚ್ಛೇದನದ ಸುದ್ದಿ ಕೇಳಿ ಬರುತ್ತಿರುವುದು ಇದೆ ಮೊದಲೇನಲ್ಲ!! ನಿಹಾರಿಕಾ ಹಾಗೂ ಚೈತನ್ಯ ಮದುವೆಯಾದ ಒಂದೂವರೆ ವರ್ಷದ ಬಳಿಕ ವಿಚ್ಛೇದನದ ವದಂತಿಗಳು ಹುಟ್ಟಿಕೊಂಡಿತ್ತು. ಆ ಬಳಿಕ, ಚೈತನ್ಯ ಅವರು ನಿಹಾರಿಕಾ ಅವರನ್ನು ಉದ್ದೇಶಿಸಿ ಪಾಸಿಟಿವ್ ಆಗಿ ಸ್ಟೋರಿ ಪೋಸ್ಟ್ ಮಾಡಿ ವಿಚ್ಛೇದನದ ಸುದ್ದಿ ವದಂತಿ ಎಂದು ನಿರೂಪಿಸಿ ಊಹಾಪೋಹಕ್ಕೆ ತೆರೆ ಎಳೆದಿದ್ದರು. ಆದರೆ, ಈಗ ಮತ್ತೊಮ್ಮೆ ವಿಚ್ಛೇದನದ ಸುದ್ದಿ ಮತ್ತೆ ಮುನ್ನಲೆಗೆ ಬಂದಿದೆ. ಈ ನಡುವೆ, ಕಳೆದ ಕೆಲವು ತಿಂಗಳುಗಳಿಂದ ನಿಹಾರಿಕಾ ಅವರು ಕೂಡ ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟಿವ್ ಆಗಿಲ್ಲದೆ ಇರುವ ಹಿನ್ನೆಲೆ ಈ ಸುದ್ದಿ ನಿಜವಿರಬಹುದೇನೋ ಎಂಬ ಅನುಮಾನ ಜನವಲಯದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಇದಕ್ಕೆ ಮೆಗಾ ಫ್ಯಾಮಿಲಿಯವರು ನೋ ರೆಸ್ಪಾನ್ಸ್ ಎಂಬಂತೆ ಮೌನ ತಳೆದಿದ್ದಾರೆ. ಇನ್ನೂ ವಿಚ್ಛೇದನದ ಬಗ್ಗೆ ನಿಹಾರಿಕ ಅವರ ಉತ್ತರವೇನು ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Leave A Reply

Your email address will not be published.