NMPT Recruitment 2023: ಮಂಗಳೂರಿನಲ್ಲಿ ಉದ್ಯೋಗವಕಾಶ ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

NMPT Recruitment 2023: ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಸಿಹಿಸುದ್ದಿ ಇಲ್ಲಿದೆ. ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ಮಾರ್ಚ್ 2023 ರ NMPT ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಡೆಪ್ಯೂಟಿ ಚೀಫ್ ಅಕೌಂಟ್ಸ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ (NMPT Recruitment 2023). ಆಫ್ ಲೈನ್ (offline) ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಈ ಕೂಡಲೆ ಅರ್ಜಿ ಸಲ್ಲಿಸಿ.

ಹುದ್ದೆಯ ವಿವರ:
ಸಂಸ್ಥೆ- ಮಂಗಳೂರು ಪೋರ್ಟ್ ಟ್ರಸ್ಟ್ (NMPT)
ಹುದ್ದೆಯ ಸಂಖ್ಯೆ – 1
ಹುದ್ದೆಯ ಹೆಸರು- ಉಪ ಮುಖ್ಯ ಖಾತೆ ಅಧಿಕಾರಿ(deputy chief accounts officer)

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 14/02/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31/3/2023

ವಿದ್ಯಾರ್ಹತೆ- CA ಅಥವಾ ICWA
ವಯೋಮಿತಿ: ಗರಿಷ್ಠ 40 ವರ್ಷ
ವೇತನ -ರೂ.13000-18250/- ಪ್ರತಿ ತಿಂಗಳು
ಉದ್ಯೋಗ ಸ್ಥಳ: ಮಂಗಳೂರು – ಕರ್ನಾಟಕ

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು

ಅರ್ಜಿ ಸಲ್ಲಿಸಲು ಇರುವ ಕ್ರಮಗಳು:
• NMPT ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು.
• ಸಂವಹನಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿರಿ.
• ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
• ಕೆಳಗೆ ನೀಡಿರುವ ಲಿಂಕ್‌ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
• ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ).

ಅರ್ಜಿ ಸಲ್ಲಿಕೆ:
ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ:
FA&CAO, New Mangalore Port Authority,
Panambur,
Mangalore-575010,

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ newmangaloreport.gov.in ಗೆ ಭೇಟಿ ನೀಡಿ.

ಇದನ್ನೂ ಓದಿ : 2ನೇ ದಿನಕ್ಕೆ 100 ಕೋಟಿ ಬಾಚಿದ ‘ಕಬ್ಜ’

Leave A Reply

Your email address will not be published.