Alcohol : ಎಣ್ಣೆ ಪ್ರಿಯರಿಗೆ ಸರ್ಕಾರದಿಂದ ಬಿಗ್​ ಶಾಕ್!

Share the Article

Alcohol Price Hike: ಮದ್ಯಪಾನ ಆರೋಗ್ಯಕ್ಕೆ (health ) ಹಾನಿಕರ ಎಂದು ಬಾಟಲ್ ಮೇಲೆ ಬರೆದಿದ್ದರು ಜನ ಕ್ಯಾರೇ ಅನ್ನಲ್ಲ. ಹಾಗಂತ ಬೇಡಿಕೆ ಮತ್ತು ಪೂರೈಕೆ ಹೇಗೇ ಇರಲಿ ಆದರೆ ಮಿತಿಯಲ್ಲಿ ಉಪಯೋಗಿಸೋಣ. ಯಾಕಂದ್ರೆ ಹೊಟ್ಟೆಗೆ  ಹಿಟ್ಟಿಲ್ಲ ಅಂದ್ರೂ ಕುಡಿಯೋಕೆ ಎಣ್ಣೆ ಬೇಕು ಅಂತಾರೆ. ಏನೇ ಆಗಲಿ ನಮ್ಮ ನಡುವೆ ಎಣ್ಣೆ ಪ್ರಿಯರು ಇದ್ದೇ ಇರುತ್ತಾರೆ. ಅದಲ್ಲದೆ ಮದ್ಯ ಪ್ರಿಯರು ಎಣ್ಣೆ ಕುಡಿಯೋದು ಕಮ್ಮಿ ಮಾಡಲ್ಲ. ಇದೀಗ ಎಣ್ಣೆ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಸದ್ಯ ಮದ್ಯಪ್ರಿಯರಿಗೆ ಈ ರಾಜ್ಯ ಸರ್ಕಾರ ಬಿಗ್​ ಶಾಕ್ ನೀಡಿದ್ದು, ಮದ್ಯ ಮಾರಾಟದ ಮೇಲೆ ಹಿಮಾಚಲ ಪ್ರದೇಶ ಸರ್ಕಾರ ಹಸುವಿನ ಸೆಸ್​ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಮದ್ಯಗಳ ಬೆಲೆ ಏರಿಕೆಯಾಗಿದೆ(Alcohol Price Hike).

ಈಗಾಗಲೇ ಬಜೆಟ್​ ಮಂಡನೆ ವೇಳೆ ಮದ್ಯದ ಬಾಟಲಿ ಮಾರಾಟಕ್ಕೆ 10 ರೂಪಾಯಿ ಸೆಸ್​ ವಿಧಿಸುವುದಾಗಿ ಸರ್ಕಾರ ಹೇಳಿತ್ತು. ಆದರಂತೆ ಈಗ ಸೆಸ್​ ವಿಧಿಸಿದ್ದು, ಮದ್ಯ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್​ ಸಿಂಗ್​ ಸುಖು ಪ್ರಕಾರ, 10 ರೂಪಾಯಿ ಸೆಸ್​ ವಿಧಿಸುವುದರಿಂದ ವಾರ್ಷಿಕ 100 ಕೋಟಿ ರೂಪಾಯಿ ಆದಾಯ ಬರುತ್ತೆ ಎಂದಿದ್ದಾರೆ.

ಒಟ್ಟಿನಲ್ಲಿ ಹಸುವಿನ ಸೆಸ್ ವಿಧಿಸಿರೋದು ಸರಿ ಆದರೆ ಮಧ್ಯಪ್ರಿಯರಿಗೆ ಯಾಕೆ ಈ ಶಿಕ್ಷೆ, ಸ್ವಲ್ಪ ಡಿಸ್ಕೌಂಟ್ ಕೊಡಿ ಅಂತ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಎದ್ದಿದೆ.

Leave A Reply