SSLC Exams: ವಿದ್ಯಾರ್ಥಿಗಳೇ ಗಮನಿಸಿ! ನಿಮಗಿದೋ ಸಹಾಯಕ್ಕಾಗಿ ಸಹಾಯವಾಣಿ! ಪರೀಕ್ಷೆ ಗೊಂದಲಗಳಿದ್ದರೆ ಕರೆ ಮಾಡಿ
SSLC Exams: ಎಸೆಸೆಲ್ಸಿ (SSLC) ವಿದ್ಯಾರ್ಥಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. ಎಸೆಸೆಲ್ಸಿ ಪರೀಕ್ಷೆಗೆ ( SSLC Exams) ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಹೀಗಾಗಿ ಪರೀಕ್ಷೆಯ ಕುರಿತಂತೆ ಏನೇ ಗೊಂದಲಗಳಿದ್ದರೂ ಕೂಡ ನೆರವಾಗುವ ನಿಟ್ಟಿನಲ್ಲಿ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿದೆ.
ಎಸ್.ಎಸ್.ಎಲ್.ಸಿ. ಪರೀಕ್ಷೆ (Karnataka SSLC Exams)ಇದೇ ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ಜರುಗಲಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಗೊಂದಲ ಗಳನ್ನು ನಿವಾರಿಸುವ ನಿಟ್ಟಿನಲ್ಲಿ, ಪರೀಕ್ಷಾ ಸಹಾಯವಾಣಿ (Exam Helpline) ಪ್ರಾರಂಭಿಸಲಾಗಿದೆ. ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ರೀತಿಯ ಅನುಮಾನಗಳಿದ್ದರೂ ವಿದ್ಯಾರ್ಥಿಗಳು ಇಲ್ಲವೇ ಪೋಷಕರು ಸಂದೇಹ, ಆತಂಕ ಪರಿಹರಿಸಿಕೊಳ್ಳುವ ಸಲುವಾಗಿ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಇಲ್ಲವೇ ಪೋಷಕರು ಎಸ್.ಎಸ್.ಎಲ್.ಸಿ. ಪರೀಕ್ಷೆ ಕುರಿತಾದ ಯಾವುದೇ ಅನುಮಾನಗಳಿದ್ದರೂ ಕೂಡ 080 -23310075/76 ಸಂಪರ್ಕಿಸಿ ಮಾಹಿತಿ ಪಡೆಯಬಹುದು. ವಿದ್ಯಾರ್ಥಿಗಳ ಗೊಂದಲ ನಿವಾರಿಸಲು ಸಹಾಯವಾಣಿ (Helpline)ಸಂಖ್ಯೆ ನೀಡಿದ್ದು, ಇದರ ಸದುಪಯೋಗ ಮಾಡಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಶಿಕ್ಷಣ ಇಲಾಖೆ ಮನವಿ ಮಾಡಿದೆ.
ಪರೀಕ್ಷೆಗಳು (Exams)ಎಂದಾಗ ವಿದ್ಯಾರ್ಥಿಗಳಿಗೆ (Students)ಭಯ (Exam Fear) ಆತಂಕ ಮನೆ ಮಾಡುವುದು ಸಹಜ. ಬಾಲ್ಯದಿಂದಲೂ ಸರ್ಕಾರ ನಿಗದಿಪಡಿಸಿರುವ ಪಠ್ಯಕ್ರಮವನ್ನೂ ಓದಿ ಪರೀಕ್ಷೆಗಳನ್ನು ಎದುರಿಸಿದ ಬಳಿಕ ಎಸ್ಎಸ್ಎಲ್ಸಿ (SSLC) ಬಳಿಕ ಮುಂದೇನು? ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ವಿಜ್ಞಾನ (Science), ವಾಣಿಜ್ಯ (Commerce), ಕಲಾ (Arts) ವಿಭಾಗಗಳಲ್ಲಿ ಯಾವುದನ್ನು ಆರಿಸಿಕೊಂಡರೆ ಒಳ್ಳೆಯದು ಎಂಬ ಗೊಂದಲ ಇರುವುದು ಸಾಮಾನ್ಯ. ಕೆಲವೊಮ್ಮೆ ಪೋಷಕರ ಒತ್ತಡಕ್ಕೆ ವಿದ್ಯಾರ್ಥಿಗಳು ತಮಗಿಷ್ಟಲ್ಲದ ವಿಷಯ ಆರಿಸಿಕೊಂಡು ಓದಿನಲ್ಲಿ ಹಿಂದೆ ಬೀಳುವ ಸಾಧ್ಯತೆ ಕೂಡ ಇದ್ದು, ಇಲ್ಲಿ ವಿದ್ಯಾರ್ಥಿ ತೆಗೆದುಕೊಳ್ಳುವ ನಿರ್ಧಾರ ಅವರ ಭವಿಷ್ಯವನ್ನು(Future) ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
ಎಸೆಸೆಲ್ಸಿ ಪರೀಕ್ಷೆಗಳು SSLC Exam ಇದೇ ಮಾರ್ಚ್ 31 ರಿಂದ ಏಪ್ರಿಲ್ 15 ವರೆಗೆ ನಡೆಯಲಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ( Exam Timetable)ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದ್ದು, ಪರೀಕ್ಷೆಗಳು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45ರ ವರಗೆ ನಡೆಯಲಿವೆ. ‘ಮಹಾವೀರ ಜಯಂತಿ’ ಸಾರ್ವತ್ರಿಕ ರಜೆಯ ಹಿನ್ನೆಲೆ ಏಪ್ರಿಲ್ 3ರಿಂದ ಏಪ್ರಿಲ್ 4ಕ್ಕೆ ನಿಗದಿಯಾಗಿರುವ ಕಾರಣ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. ಮಾರ್ಚ್ 20 ರಿಂದ 28 ರವರೆಗೆ ರಜಾ ದಿನಗಳನ್ನು ಹೊರತುಪಡಿಸಿದರೆ, ಇನ್ನುಳಿದ ದಿನಗಳಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7:30ರ ವರೆಗೆ ಮತ್ತು ಮಾರ್ಚ್ 26ರಂದು ಬೆಳಗ್ಗೆ 11 ಗಂಟೆಯಿಂದ 6 ಗಂಟೆಯವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ