Pet Care in Summer: ಬೇಸಿಗೆ ಶಾಖದಿಂದ ಸಾಕು ಪ್ರಾಣಿಗಳ ಆರೋಗ್ಯವನ್ನು ಕಾಪಾಡುವುದು ಹೇಗೆ? ಇಲ್ಲಿದೆ ಸಲಹೆ
Pet Care in Summer: ಬೇಸಿಗೆ ಕಾಲ ಆರಂಭವಾಯಿತು. ಮನುಷ್ಯರಾದರೆ ಬೇಸಿಗೆ ಶಾಖವನ್ನು ತಡೆಯಲಾರದೆ ಏನಾದರೂ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಮನೆಯಲ್ಲಿನ ಸಾಕು ಪ್ರಾಣಿಗಳಿಗೆ ಏನು ಪರಿಹಾರ? ಬೇಸಿಗೆ ಶಾಖದಿಂದ ಸಾಕು ಪ್ರಾಣಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಜಸ್ಟ್ ಡಾಗ್ಸ್ ಸಹ ಸಂಸ್ಥಾಪಕಿ ಪೂರ್ವಿ ಅಂಥೋನಿ ಅವರು ಬೇಸಿಗೆಯಲ್ಲಿ ನಾಯಿಗಳಿಗೆ ನೀಡಬೇಕಾದ ಆಹಾರಗಳ ಬಗ್ಗೆ ಸಲಹೆ ನೀಡಿದ್ದಾರೆ. ಇಲ್ಲಿದೆ ಸಲಹೆ (Pet Care in Summer).
ಮೊಸರು, ಬೆಣ್ಣೆ ಮತ್ತು ಹಾಲು (milk) : ಸಣ್ಣ ಮಕ್ಕಳಿಗೆ ಆರೋಗ್ಯ ಚೆನ್ನಾಗಿರಲು ಇದನ್ನು ನೀಡುತ್ತಾರೆ. ಇದು ಸಾಕು ಪ್ರಾಣಿಗಳಿಗೆ ಕೂಡ ಪ್ರಯೋಜನಕಾರಿಯಾಗಿದೆ. ಮೊಸರು (Yoghurt) ಮತ್ತು ಮಜ್ಜಿಗೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಸಾಕುಪ್ರಾಣಿಗಳಿಗೆ ತುಂಬಾ ಒಳ್ಳೆಯದು. ಇವುಗಳ ಪ್ರೋಬಯೊಟಿಕ್ ಅಂಶವು ಸಾಕು ಪ್ರಾಣಿಗಳ ಕರುಳಿನ ಆರೋಗ್ಯಕ್ಕೆ ಒಳ್ಳೆಯದು.
ಸೌತೆಕಾಯಿ (Cucumber): ಇದು ಕೂಡ ಯಥೇಚ್ಛವಾದ ನೀರಿನ ಅಂಶ ಹೊಂದಿದೆ. ಸೌತೆಕಾಯಿ ದೇಹವನ್ನು ತುಂಬಾ ತಂಪಾಗಿರಿಸುತ್ತದೆ. ಇದರಲ್ಲಿರುವ ವಿಟಮಿನ್ ಬಿ1, ಬಿ2, ವಿಟಮಿನ್ ಸಿ, ಕೆ ಮತ್ತು ತಾಮ್ರ, ಪೊಟ್ಯಾಸಿಯಂ, ಮೆಗ್ನೇಸಿಯಂ ಖನಿಜಾಂಶಗಳು ಸಾಕು ಪ್ರಾಣಿಗಳು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಕಲ್ಲಂಗಡಿ ಹಣ್ಣು (Watermelon): ಇದು ಹೆಚ್ಚಿನ ನೀರಿನ ಅಂಶ ಹೊಂದಿದೆ. ಹಾಗಾಗಿ ಸಾಕು ಪ್ರಾಣಿಗಳ ಅಗತ್ಯ ಪ್ರಮಾಣದ ಜಲಸಂಚಯನ ದೊರೆಯುತ್ತದೆ. ಇದರಲ್ಲಿ ಅನೇಕ ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕ ಅಂಶಗಳಿವೆ. ಇದು ಸಾಕುಪ್ರಾಣಿಯ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ.
ಮಾವಿನ ಹಣ್ಣು (mango): ಮಾವಿನ ಹಣ್ಣು ಯಾರಿಗಿಷ್ಟ ಇಲ್ಲ ಹೇಳಿ. ಆದರೆ ಸಾಕು ಪ್ರಾಣಿಗಳಿಗೆ ಇಷ್ಟು ಆಗುವುದಿಲ್ಲ. ಆದರೆ, ಇದು ನಿಮ್ಮ ನಾಯಿಗಳಿಗೆ ಆರೋಗ್ಯಕರವಾದ ಮತ್ತು ರುಚಿಕರವಾದ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಎ, ಬಿ6, ಸಿ, ಇ ಮತ್ತು ಅಗತ್ಯ ಉತ್ಕರ್ಷಣ ನಿರೋಧಕ ಅಂಶಗಳು ಇವೆ.
ಎಳನೀರು (Coconut water) : ಎಲ್ಲರಿಗೂ ತಿಳಿದಿರುವಂತೆ ಹೆಸರಲ್ಲೇ ನೀರು ಇದೆ. ಜನರು ಕೂಡ ದೇಹ ತಂಪಾಗಿರಲು ಇದನ್ನು ಕುಡಿಯುತ್ತಾರೆ. ಇದು ನಾಯಿಗೆ (dog) ಪ್ರಯೋಜನಕಾರಿಯಾಗಿದೆ. ಇದರಲ್ಲಿ ಅಗತ್ಯ ಪೋಷಕಾಂಶಗಳಾದ ಕ್ಯಾಲ್ಸಿಯಂ, ಮೆಗ್ನೇಸಿಯಂ, ಪೊಟ್ಯಾಸಿಯಂ ಇದ್ದು, ಇದು ಬೇಸಿಗೆ ಶಾಖದಲ್ಲಿ ಪ್ರಾಣಿಗಳ ದೇಹ ತಂಪಾಗಿರಿಸುವಂತೆ ಮಾಡುತ್ತದೆ.