1st Six in Cricket History: ನಿಮಗೆ ಗೊತ್ತಾ? ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಿಕ್ಸ್ ಯಾರು ಬಾರಿಸಿದ್ದು ಅಂತ? ಇಲ್ಲಿದೆ ಮಾಹಿತಿ

1st Six in Cricket History: ಸದ್ಯ ಕ್ರಿಕೆಟ್ ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಚ್ಚಾಗಿ ಪ್ರತಿಯೊಬ್ಬರು ಕ್ರಿಕೆಟ್ ಅಭಿಮಾನಿಗಳೇ. ಈಗಂತೂ ಕ್ರಿಕೆಟ್ ಅಂದಾಗ ಮೊದಲು ಕೇಳೋ ಪದ RCB. ಆರ್ ಸಿಬಿ ಗೆ ಬೇರೆನೇ ಒಂದು ಅಭಿಮಾನಿ ಬಳಗ ಇದೆ. ಸೋತರೂ, ಗೆದ್ದರೂ ಆ ಅಭಿಮಾನಿ ಬಳಗ ತಮ್ಮ ನೆಚ್ಚಿನ ಕ್ರಿಕೆಟ್ ತಂಡವನ್ನು ಬಿಟ್ಟುಕೊಡಲ್ಲ. ಸಚಿನ್ ತೆಂಡೂಲ್ಕರ್ (Sachin Tendulkar), ಎಂ ಎಸ್ ಧೋನಿ (MS Dhoni), ವಿರಾಟ್ ಕೋಹ್ಲಿ (Virat Kohli) ಇನ್ನೂ ಹಲವು ಕ್ರಿಕೆಟ್ ಸ್ಟಾರ್ಸ್ ತಮ್ಮ ಕ್ರಿಕೆಟ್ ಲೋಕದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ಆದರೆ ನಿಮಗೆ ಗೊತ್ತಾ? ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಿಕ್ಸ್ ಬಾರಿಸಿದ್ದು (1st Six in Cricket History) ಯಾರು ಅಂತ??. ಬನ್ನಿ ತಿಳಿಯೋಣ ಮಾಹಿತಿ.

 

ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಿಕ್ಸ್ ಬಾರಿಸಿದ್ದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜೋ ಡಾರ್ಲಿಂಗ್ (Joseph Darling) . ಇವರು ಈ ಸಾಧನೆ ಮಾಡಿದ ಮೊದಲ ವ್ಯಕ್ತಿ. ಡಾರ್ಲಿಂಗ್ 1898 ರಲ್ಲಿ ಅಡಿಲೇಡ್ ಓವಲ್‌ನಲ್ಲಿ ಈ ಸಾಧನೆ ಮಾಡಿದರು. ಆಗ ಸಿಕ್ಸರ್ ಹೊಡೆಯುವ ನಿಯಮವೇ ಬೇರೆ ಇತ್ತು. ವಾಸ್ತವವಾಗಿ ಈಗ ಇರುವಂತೆ ಚೆಂಡು ಬೌಂಡರಿ ಗೆರೆಯಿಂದ ಹೊರ ಹೋದರೆ 6 ರನ್ ಬರುತ್ತಿರಲಿಲ್ಲ. ಕೇವಲ 5 ರನ್’ಗಳು ಸಿಗುತ್ತಿತ್ತು. ಆದರೆ, ಸ್ಟೇಡಿಯಂ ದಾಟಿದರೆ ಮಾತ್ರ 6 ರನ್ ಸಿಗುತ್ತಿತ್ತು.

ಕ್ರೀಡಾಂಗಣ ದಾಟಿ ಬಾಲ್ ಹೊರಹೋದರೆ ಬ್ಯಾಟ್ಸ್‌ಮನ್‌ 6 ರನ್‌ಗಳು ಪಡೆಯುತ್ತಿದ್ದರು. ಇದನ್ನು ಡಾರ್ಲಿಂಗ್ (Joe Darling) 14 ನವೆಂಬರ್ 1898 ರಂದು ಇದನ್ನು ಸಾಧಿಸಿ, ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಿಕ್ಸ್ ಬಾರಿಸಿದ ವ್ಯಕ್ತಿ ಎನಿಸಿಕೊಂಡರು. ಡಾರ್ಲಿಂಗ್ ತಾಳ್ಮೆಯ ಬ್ಯಾಟ್ಸ್‌ಮನ್ ಆಗಿದ್ದರು ಮತ್ತು ಅವರ ಘನ ರಕ್ಷಣೆಗೆ ಹೆಸರುವಾಸಿಯಾಗಿದ್ದರು.

ಇದನ್ನೂ ಓದಿ : Beer Benefits: ಬಿಯರ್ ಕುಡಿಯೋದು ಆರೋಗ್ಯಕ್ಕೆ ತುಂಬಾ ಒಳ್ಳೇದಂತೆ!

Leave A Reply

Your email address will not be published.