School Timing : ರಂಜಾನ್ ಹಿನ್ನೆಲೆ ಈ ಶಾಲೆಗಳಲ್ಲಿ ಸಮಯ ಬದಲಾವಣೆ! ಹೆಚ್ಚಿನ ವಿವರ ಇಲ್ಲಿದೆ

School Timing : ವಿಶ್ವವೇ ರಂಜಾನ್ ಹಬ್ಬದ ಆಚರಣೆಗೆ ಸಕಲ ತಯಾರಿಯಲ್ಲಿದೆ. ಮುಸ್ಲಿಮ್ ಬಾಂಧವರ ಪವಿತ್ರ ಹಬ್ಬವಾದ ರಂಜಾನ್(Ramadan), ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ರಂಜಾನ್ ಹಬ್ಬ (Ramzan)ಆಚರಣೆ ನಡೆಯುವ ನಿಮಿತ್ತ ಕೇವಲ ಬೆಳಗಿನ ಅವಧಿಯಲ್ಲಿ ಶಾಲೆ (School Timing)ಗಳನ್ನು ನಡೆಸುವಂತೆ ಮನವಿ ಸಲ್ಲಿಸಲಾಗಿದೆ.

 

ರಂಜಾನ್ ಉಪವಾಸ(Ramdan Fasting)ವನ್ನು ಇಸ್ಲಾಂ (Islam) ಧರ್ಮದ ಐದು ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆತ್ಮಾವಲೋಕನ, ಸ್ವಯಂ ಸುಧಾರಣೆ, ದಯೆ ಮತ್ತು ಆಧ್ಯಾತ್ಮಿಕತೆಗೆ ವಿಶೇಷ ತಿಂಗಳಾಗಿದೆ. ರಂಜಾನ್ ಸಮಯದಲ್ಲಿ ಮುಸ್ಲಿಮರು (Muslims) ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ, ನೀರು ಬಿಟ್ಟು ಒಂದು ತಿಂಗಳ ಕಾಲ ಉಪವಾಸ (Fasting) ಮಾಡುವ ಜೊತೆಗೆ ಇಫ್ತಾರ್ (Iftar) ಆಚರಣೆಯ ಭಾಗವಾಗಿ ಸಂಜೆ ಉಪವಾಸವನ್ನು ಮುರಿಯುತ್ತಾರೆ.

ಮಾರ್ಚ್​ 23 ರಿಂದ ರಂಜಾನ್​ ಆರಂಭವಾಗಲಿದ್ದು, ಹಬ್ಬದ ಸಲುವಾಗಿ ಉಪವಾಸ (Ramadan fasting) ನಡೆಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.ಈ ಸಂಪ್ರದಾಯ ಹಾಗೂ ಆಚರಣೆಯ ನಿಮಿತ್ತ ಶಾಲಾ ಸಮಯವನ್ನು ಬದಲಾವಣೆ( School Timing)ಮಾಡಲು ಮನವಿ ಸಲ್ಲಿಸಲಾಗಿದೆ. ರಂಜಾನ್ ತಿಂಗಳ ಅವಧಿಯಲ್ಲಿ ಶಾಲಾ ಅವಧಿ ಬದಲಾವಣೆ ಮಾಡುವ ಕುರಿತು ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ (ರಿ.) ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಹಿನ್ನೆಲೆ ಇದೀಗ, ಶಾಲಾ ಅವಧಿ ಬದಲಾವಣೆ ಮಾಡಲು ಅನುಮತಿ ಕೇಳಲಾಗಿದೆ. ಸದ್ಯ, ಈ ಕುರಿತಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರವನ್ನು ಬರೆದಿದ್ದಾರೆ.

ಮುಸ್ಲಿಂಮರಿಗೆ( Muslim)ಪವಿತ್ರವಾದ ಮಾಸ ವಾಗಿರುವ ಹಿನ್ನೆಲೆ ಈ ವೇಳೆ ರೋಜಾ ಅಥವಾ ಉಪವಾಸ(Ramadan Fasting) ಮಾಡುವ ಸಂಪ್ರದಾಯವಿದ್ದು, ದಿನಾಂಕ 23 .03. 2023ರಿಂದ ರಂಜಾನ್ ತಿಂಗಳು ಕೊನೆಗೊಳ್ಳುವ ತನಕ ಬೆಳಗಿನ ಅವಧಿಯಲ್ಲಿ(Ramadan Leave) ನಡೆಸುವಂತೆ ಮನವಿ ಮಾಡಿಕೊಳ್ಳಲಾಗಿದ್ದು, ಈ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವ ಕುರಿತು ಸೂಚಿಸಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಕುರಿತು ಮಾರ್ಚ್ 14ರ ಮಂಗಳವಾರ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ : ನೀಲಿ, ಕೆಂಪು ಮತ್ತು ಹಸಿರು ಬಣ್ಣಗಳು ಭಾರತದ ರೈಲುಗಳಲ್ಲಿ ಹೆಚ್ಚಾಗಿ ಕಾಣುತ್ತದೆ! ಇದು ಯಾಕಿದೆ ಗೊತ್ತಾ?

Leave A Reply

Your email address will not be published.