Mahindra: ಮಹೀಂದ್ರಾದ ಈ ಕಾರುಗಳು ಭಾರೀ ರಿಯಾಯಿತಿಯಲ್ಲಿ ಲಭ್ಯ!!

Mahindra: ಸದ್ಯ ಹಲವು ಕಾರು ಕಂಪನಿಗಳು ನೂತನ ಕಾರುಗಳನ್ನು ಪರಿಚಯಿಸುತ್ತಿದೆ. ಈ ಮಧ್ಯೆ ಇದೀಗ ಜನಪ್ರಿಯ ಕಾರು ಕಂಪನಿ ಮಹೀಂದ್ರಾ (mahindra) ತನ್ನ ಕಾರುಗಳಿಗೆ ಭಾರೀ ರಿಯಾಯಿತಿ ಘೋಷಿಸಿದೆ. ಮಹೀಂದ್ರಾ ಥಾರ್ 4X4, ಬೊಲೆರೋ ಹಾಗೂ XUV300 ಎಸ್‍ಯುವಿಗಳ 2022, 2023 (BS6 ಹಂತ 1) ಮಾದರಿಗಳಿಗೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ.

ಮಹೀಂದ್ರಾ ಥಾರ್ 4X4 (Mahindra Thar) ರೂ.60,000 ವರೆಗೆ ರಿಯಾಯಿತಿ ಪ್ರಯೋಜನ ಹೊಂದಿದೆ. ಇದು ರೂ.9.99 ಲಕ್ಷದಿಂದ ರೂ.16.49 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 4WD (ಫೋರ್ ವೀಲ್ ಡ್ರೈವ್) ಆವೃತ್ತಿ, 2-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2 ಡಿಸೇಲ್ ಎಂಜಿನ್ ಹೊಂದಿದ್ದು, 6 ಸ್ವೀಡ್ ಮ್ಯಾನುವಲ್ ಅಥವಾ ಆಟೊಮೇಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಥಾರ್ RWD (ರೇರ್ ವೀಲ್ ಡ್ರೈವ್) ಆವೃತ್ತಿಯು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 118 PS ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 6 ಸ್ವೀಡ್ ಮ್ಯಾನುವಲ್ ಟ್ರಾಸ್ನ್ಮಿಷನ್ ಗೇರ್ ಬಾಕ್ಸ್, 7- ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಹ್ಯಾಲೊಜೆನ್ ಹೆಡ್‌ಲೈಟ್ಸ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಮಹೀಂದ್ರಾ XUV300 (mahindra XUV300) ಎಸ್‍ಯುವಿ ರೂ. 32,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಒಳಗೊಂಡಿದೆ. ಇದು ಗ್ಲೋಬಲ್ NCAPಯಿಂದ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದರ ಟಾಪ್ ಎಂಡ್ ರೂಪಾಂತರ W8 (O) ರೂ.22,000 ಕ್ಯಾಶ್ ಡಿಸ್ಕೌಂಟ್, ರೂ.10,000 ಪರಿಕರ (accessories) ರಿಯಾಯಿತಿಯನ್ನು ಪಡೆದಿದೆ.

XUV300 1.2 ಲೀಟರ್ ಟರ್ಬೊ ಪೆಟ್ರೋಲ್, 1.5 ಲೀಟರ್ ಡೀಸೆಲ್ ಎಂಜಿನ್ ಹಾಗೂ 1.2-ಲೀಟರ್ TGDI ಟರ್ಬೊ ಪೆಟ್ರೋಲ್ ಎಂಜಿನ್ ಈ ಮೂರು ಎಂಜಿನ್ ಆಯ್ಕೆಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಕಾರು ಐದು ಆಸನಗಳನ್ನು ಹೊಂದಿದ್ದು, 16.5 – 20.1 kmpl ಮೈಲೇಜ್ ನೀಡಲಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಕಂಪನಿಯು ಬೊಲೆರೋ (mahindra bolero) ಮೇಲೆ ರೂ.60,000 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಇದರ ಟಾಪ್ ಎಂಡ್ ರೂಪಾಂತರವಾದ B6 (O) ರೂ.45,000 ನಗದು ರಿಯಾಯಿತಿ ಹಾಗೂ ರೂ.15,000 ಇತರೆ ಡಿಸ್ಕೌಂಟ್ ಹೊಂದಿದೆ. ಈ ಬೊಲೆರೋ ಗ್ರಾಹಕರಿಗೆ ರೂ.9.78 ಲಕ್ಷದಿಂದ ರೂ.10.79 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ಮಹೀಂದ್ರಾ ಬೊಲೆರೋ 1.5-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, 75 PS ಪವರ್, 210 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಇದು 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. USB ಕನೆಕ್ಟಿವಿಟಿ ಹಾಗೂ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್ ಹೊಂದಿದೆ. ಹಾಗೆಯೇ ಸುರಕ್ಷತೆ ದೃಷ್ಟಿಯಿಂದ ಡ್ಯೂಯಲ್ ಫ್ರಂಟ್ ಏರ್‌ಬ್ಯಾಗ್ಸ್, ಎಬಿಎಸ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸರ್‌ನ್ನು ಒಳಗೊಂಡಿದೆ.

Leave A Reply

Your email address will not be published.