Hero Electric Scooter : ಗ್ರಾಹಕರಿಗೆ ಸಿಹಿ ಸುದ್ದಿ! ಕೈಗೆಟಕುವ ಬೆಲೆಯಲ್ಲಿ ಇನ್ನು ಮುಂದೆ ದೊರಕಲಿದೆ ಈ ಸೂಪರ್‌ ಸ್ಪೆಷಾಲಿಟಿ ಸ್ಕೂಟರ್‌!!

Hero Electric Scooter: ಎಲೆಕ್ಟಿಕ್ ವಾಹನಗಳ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ ಇದಕ್ಕೆ ದಿನೇ ದಿನೇ ಪೆಟ್ರೋಲ್-ಡೀಸೆಲ್ ದರಗಳು ಹೆಚ್ಚುತ್ತಿರುವುದು ಸಹ ಒಂದು ಕಾರಣ ಆಗಿರಬಹುದು. ದೇಶದಲ್ಲಿ ಹೆಚ್ಚುತ್ತಿರುವ ಎಲೆಕ್ಟ್ರಿಕ್ (electric) ವಾಹನಗಳ ಬೇಡಿಕೆಯಿಂದಾಗಿ, ಓಲಾ, ಎಥರ್, ಟಿವಿಎಸ್ ಐಕ್ಯೂಬ್ ಹಾಗೂ ಮತ್ತಿತರ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಸ್ಪರ್ಧಿಸಲು ಹೀರೋ ಎಲೆಕ್ಟ್ರಿಕ್ (Hero Electric Scooter) ಕೂಡ ತನ್ನ ಹೊಸ ಸ್ಮಾರ್ಟ್ ಮತ್ತು ಸಂಪರ್ಕಿತ ಶ್ರೇಣಿಯ ಆಪ್ಟಿಮಾ CX ಮತ್ತು NYX ಎಲೆಕ್ಟ್ರಿಕ್ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು (scooter ) ಜಪಾನೀಸ್ ಮೋಟಾರ್ ತಂತ್ರಜ್ಞಾನದೊಂದಿಗೆ ತಯಾರಾಗಿವೆ. ಅಂತೆಯೇ ವಿವಿಧ ಭಾರತೀಯ(India) ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ಜರ್ಮನ್ ಇಸಿಯು ತಂತ್ರಜ್ಞಾನವನ್ನು ಒಳಗೊಂಡಿದೆ. ಅದಲ್ಲದೆ ಡಿಸೈನ್ ಹಾಗೂ ಇವುಗಳ ಆಕರ್ಷಣೀಯ ನೋಟವು ಐಸಿಇ ಎಂಜಿನ್ ಸ್ಕೂಟರ್‌ಗಳಂತಲ್ಲದೇ ಬಹಳ ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಪಡೆದುಕೊಂಡಿವೆ.

ಆಪ್ಟಿಮಾ CX5.0 (ಡ್ಯುಯಲ್ ಬ್ಯಾಟರಿ),
ಆಪ್ಟಿಮಾ CX2.0 (ಸಿಂಗಲ್ ಬ್ಯಾಟರಿ) ಮತ್ತು
NYX CX5.0 (ಡ್ಯುಯಲ್ ಬ್ಯಾಟರಿ) ಎಂಬ ಮೂರು ಹೊಸ ಉತ್ಪನ್ನಗಳನ್ನು ಹೀರೋ ಬಹಿರಂಗಪಡಿಸಿದೆ.

ಸದ್ಯ ಹೀರೋ ಎಲೆಕ್ಟ್ರಿಕ್ ಕಂಫರ್ಟ್ ಮತ್ತು ಸಿಟಿ ಸ್ಪೀಡ್ ಸ್ಕೂಟರ್‌ಗಳು ಕ್ರಮವಾಗಿ ರೂ. 85 ಸಾವಿರ, ರೂ. 95 ಸಾವಿರ ಮತ್ತು ರೂ. 1,05,000 ಹಾಗೂ ರೂ. 1,30,000 ಬೆಲೆ ಶ್ರೇಣಿಯಲ್ಲಿ ಖರೀದಿಗೆ ಲಭ್ಯವಿರಲಿವೆ.

Optima CX5.0 :
Optima CX5.0 ಇದು 3 kWh C5 Li-ion ಬ್ಯಾಟರಿಯಿಂದ ಚಾಲಿತವಾಗಿದೆ. ಇದು ಗಂಟೆಗೆ 55 ಕಿ.ಮೀ ವೇಗದಲ್ಲಿ ಚಲಿಸಬಲ್ಲದು, 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. ಸ್ಕೂಟರ್ ಸಂಪೂರ್ಣವಾಗಿ ಚಾರ್ಜ್ ಆಗಲು 3 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಗ್ರಾಹಕರಿಗೆ Optima CX5.0 ಸ್ಕೂಟರ್ ಡಾರ್ಕ್ ಮ್ಯಾಟ್ ಬ್ಲೂ ಮತ್ತು ಮ್ಯಾಟ್ ಮರೂನ್‌ನಲ್ಲಿ ಲಭ್ಯವಿದೆ.

Optima CX2.0:
Optima CX2.0 ಇದು ಗಂಟೆಗೆ 48 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಇದು ಕೂಡ Optima CX5.0 ನಂತೆ 165 mm ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. ಇದನ್ನು 4.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಆಪ್ಟಿಮಾ CX2.0 ಅನ್ನು ಡಾರ್ಕ್ ಮ್ಯಾಟ್ ಬ್ಲೂ ಮತ್ತು ಚಾರ್ಕೋಲ್ ಬ್ಲ್ಯಾಕ್‌ನಲ್ಲಿ ನೀಡಲಾಗುತ್ತದೆ.

NYX CX5.0 :
NYX CX5.0 ಇದು ಇತರ ಎರಡು ಸ್ಕೂಟರ್‌ಗಳಿಗಿಂತ ಹೆಚ್ಚಿನ 175 mm ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. ಗಂಟೆಗೆ 48 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ವಾಹನವು 3 kWh C5 Li-ion ಬ್ಯಾಟರಿಯಿಂದ ತನ್ನ ಶಕ್ತಿಯನ್ನು ಪಡೆಯುತ್ತದೆ. ಇದನ್ನು 3 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. NYX CX5.0 ಸ್ಕೂಟರ್ ಚಾರ್ಕೋಲ್ ಬ್ಲಾಕ್ ಮತ್ತು ಪರ್ಲ್ ವೈಟ್ ಬಣ್ಣದ ಯೋಜನೆಗಳಲ್ಲಿ ಲಭ್ಯವಿದೆ

ಮುಖ್ಯವಾಗಿ ಆಪ್ಟಿಮಾ CX5.0 ಸ್ಕೂಟರ್,
ಆಪ್ಟಿಮಾ CX2.0 ಸ್ಕೂಟರ್,
NYX CX5.0 ಸ್ಕೂಟರ್ ಈ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳು ಬ್ಯಾಟರಿ ಸುರಕ್ಷತಾ ಎಚ್ಚರಿಕೆ, ಡ್ರೈವ್ ಮೋಡ್ ಲಾಕ್, ರಿವರ್ಸ್ ರೋಲ್ ಪ್ರೊಟೆಕ್ಷನ್, ಸೈಡ್ ಸ್ಟ್ಯಾಂಡ್ ಸೆನ್ಸಾರ್‌ಗಳನ್ನು ಒಳಗೊಂಡಿರುವ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ತಯಾರಾಗಿವೆ.

ಇದೀಗ ಹೀರೊ ಇತ್ತೀಚೆಗಿನ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಗೆ ಅನುಗುಣವಾಗಿ ತನ್ನ ಸ್ಕೂಟರ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಆದರೆ ಪ್ರಸ್ತುತ ತನ್ನ ಪ್ರತಿಸ್ಪರ್ಧಿಗಳಿಂದ ತೀರ್ವ ಪೈಪೋಟಿ ಎದುರಿಸಬೇಕಿದ್ದು, ಹೀರೋ ತನ್ನ ಹೊಸ ಎಲೆಕ್ಟ್ರಿಕ್ ಮಾದರಿಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನ ಹವಾ ತೋರಿಸಲಿದೆ.

Mahindra: ಮಹೀಂದ್ರಾದ ಈ ಕಾರುಗಳು ಭಾರೀ ರಿಯಾಯಿತಿಯಲ್ಲಿ ಲಭ್ಯ!!

Leave A Reply

Your email address will not be published.