Solo Trips : ಮಹಿಳೆಯರೇ ನಿಮಗೇನಾದರೂ ಸೋಲೋ ಟ್ರಿಪ್ ಹೋಗೋಕೆ ಮನಸ್ಸಿದೆಯಾ? ಇಲ್ಲಿದೆ ನೋಡಿ ಬೆಸ್ಟ್ ಜಾಗ!
Solo Trips : ಇಂದಿನ ಒತ್ತಡಯುತ ಜೀವನ ಶೈಲಿಯಲ್ಲಿ ಕೊಂಚ ಮಟ್ಟಿಗೆ ಬ್ರೇಕ್ ಪಡೆದುಕೊಳ್ಳುವ ನಿಟ್ಟಿನಲ್ಲಿ ವೀಕೆಂಡ್ ಬಂದರೆ ಸಾಕಪ್ಪ ಎಂದು ಜಾತಕಪಕ್ಷಿಯಂತೆ ಕಾಯುವ ಮಂದಿಯೇ ಹೆಚ್ಚು. ಪ್ರವಾಸ (Tour)ಎಂದರೇ ಸಾಕು ಮೈಮನವೆಲ್ಲ ಪುಳಕಗೊಳ್ಳುವ ಜೊತೆಗೆ ಮನಸ್ಸು ರಿಲ್ಯಾಕ್ಸ್ ಆಗಿ ಮನೆಯವರ, ಸ್ನೇಹಿತರ ಜೊತೆಗೆ ಖುಷಿಯಾಗಿ ಕಾಲ ಕಳೆಯುವ ಸುಮಧುರ ಅನುಭವಗಳ ಸರಮಾಲೆಯನ್ನು ನೆನಪಿನ ಬುತ್ತಿಯಲ್ಲಿ ಕೂಡಿಡಲು ಅವಕಾಶ ದೊರೆಯುತ್ತದೆ. ಮತ್ತೆ ಕೆಲವರು ಏಕಾಂಗಿಯಾಗಿ ಸೋಲೋ ಟ್ರಿಪ್ (Solo Trips)ಹೋಗಬೇಕು ಅಂದುಕೊಂಡು ಬೈಕ್ ಸವಾರಿ ಮಾಡೋದು ಕಾಮನ್.
ಸೋಲೋ ಟ್ರಿಪ್ ಹೋಗೋಕೆ ಹುಡುಗರು ಯಾವಾಗಲು ಒಂದು ಹೆಜ್ಜೆ ಮುಂದೆ ಎಂದರೂ ತಪ್ಪಾಗಲಾರದು. ಅಷ್ಟೆ ಏಕೆ!! ಮನಸ್ಸು ಬಂದೊಡನೆ ಲಗ್ಗೇಜ್ ಪ್ಯಾಕ್ ಮಾಡಿಕೊಂಡು ಬೇಕಾದಲ್ಲಿಗೆ ರಾತ್ರೋ ರಾತ್ರಿ ಪ್ಲಾನ್ ಮಾಡಿಕೊಂಡು ಹೋದರು ಅಚ್ಚರಿಯಿಲ್ಲ. ಆದರೆ, ಹೆಣ್ಣು ಮಕ್ಕಳು(Woman) ಹಾಗೆ ಮಾಡಲು ಸಾಧ್ಯವಿಲ್ಲ. ಕೆಲವೊಮ್ಮೆ ಮನೆಯ ಜವಾಬ್ದಾರಿ, ಆಫೀಸ್ ಕೆಲಸ, ಹೋಗುವ ವಾತಾವರಣ(Weather)ಜಾಗ ಕಂಫರ್ಟ್(Comfort Zone) ಆಗುತ್ತಾ ಉಳಿಯೋದು ಹೀಗೆ ಹತ್ತು ಹಲವು ಸಾರಿ ಯೋಚಿಸಿ ಟ್ರಿಪ್ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ.
ಊರು ಸುತ್ತಿ ನೋಡು! ಕೋಶ ಓದಿ ನೋಡು ಎಂಬ ಮಾತಿನಂತೆ ಎಲ್ಲ ಕಡೆ ಸಂಚರಿಸಿದಾಗ ಮಾತ್ರ ಪ್ರಪಂಚದ ಸುತ್ತಮುತ್ತಲಿನ ಸುಂದರ ಪ್ರದೇಶ, ಅಲ್ಲಿರುವ ವೈಶಿಷ್ಟ್ಯತೆ, ಆಹಾರ ಶೈಲಿ, ಜೀವನ ವಿಧಾನ , ಅಲ್ಲಿರುವ ಆಚಾರ- ವಿಚಾರ ಹೀಗೆ ಅನೇಕ ವಿಚಾರಗಳ ಬಗ್ಗೆ ತಿಳಿಯಲು ಸಾಧ್ಯ. ಕೇವಲ ನಾನು ನನ್ನ ಮನೆಯೆಂದು ಅಷ್ಟಕ್ಕೆ ಸೀಮಿತವಾದರೆ, ಬಾವಿಯೊಳಗಿನ ಕಪ್ಪೆಯಂತೆ ಹೊರಗಿನ ಆಗು ಹೋಗುಗಳ ಬಗ್ಗೆ ತಿಳಿಯಲಾಗದು.
ವಾರಪೂರ್ತಿ ಮನೆ, ಆಫೀಸ್(Office) ಸಂಸಾರ ಜಂಜಾಟದ ನಡುವೆ ಬ್ಯುಸಿ ಇರುವ ಮಹಿಳೆಯರು (Woman ಕೊಂಚ ರಿಲೀಫ್ ಪಡೆಯಲು ಬಯಸಿ ವೀಕೆಂಡ್ ನಲ್ಲಿ ಸೋಲೋ ಟ್ರಿಪ್ (Solo Trip Tips)ಹೋಗುವ ಯೋಜನೆ ಹಾಕಿ ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಿದ್ದರೆ, ನಿಮಗಾಗಿ ಸುರಕ್ಷಿತ ಹಾಗೂ ಫುಲ್ ದಿಲ್ ಕುಶ್ ಆಗುವ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿ ನೀಡಲಾಗಿದೆ.
ಉತ್ತರ ಪ್ರದೇಶದ ವಾರಣಾಸಿ(Varanasi) :
ವಿಶ್ವದ ಅತ್ಯಂತ ಪುರಾತನ ನಗರಗಳಲ್ಲಿ ವಾರಣಾಸಿ ಕೂಡ ಒಂದಾಗಿದ್ದು, ಉತ್ತರ ಪ್ರದೇಶದ ಅತ್ಯಂತ ಪ್ರಾಚೀನ ನಗರವಾಗಿದೆ. ಹಿಂದೂಗಳ ಪವಿತ್ರ ಸ್ಥಾನವಾದ ವಾರಣಾಸಿಗೆ ಮಹಿಳೆಯರು ಸೋಲೋ ಟ್ರಿಪ್ ಮಾಡಬಹುದು.ಭಾರತದ ಪವಿತ್ರ ನದಿಯಾದ ಗಂಗಾ ನದಿ ತಟದಲ್ಲಿ ನೆಲೆಸಿರುವ ವಾರಣಾಸಿಗೆ(Varanasi) ಭೇಟಿ ನೀಡುವುದೇ ವಿಶೇಷ ಅನುಭವ. ಹಿಂದೂ (Hindu)ಧರ್ಮದ (Tradition)ಪ್ರಕಾರ ಹೇಳುವ ಏಳು ಪವಿತ್ರ ನಗರಗಳು ಅಂದರೆ ಸಪ್ತಪುರಿ ಪೈಕಿ ವಾರಣಾಸಿಯು ಪ್ರಮುಖವಾಗಿದೆ. ಗಂಗಾ ನದಿ (River Ganga)ಮತ್ತು ಗಂಗಾರತಿಯನ್ನು ನೋಡುವುದೇ ಪುಣ್ಯ ಎಂದರೂ ತಪ್ಪಾಗಲಾರದು. ಕಾಶಿ (.Kashi)ವಿಶ್ವನಾಥನ ದರ್ಶನದ ಜೊತೆಗೆ ದೋಣಿ ವಿಹಾರವನ್ನು ಕೂಡ ಮಾಡಬಹುದು. ಕಾಶಿ ವಿಶ್ವನಾಥನ ದರ್ಶನವನ್ನು ಕೂಡ ಪಡೆಯಬಹುದಾಗಿದ್ದು, ಏಕಾಂಗಿಯಾಗಿ ಓಡಾಡಬಹುದಾಗಿದ್ದು, ಪ್ರವಾಸಕ್ಕೆ ಹೋಗಬಯಸುವ ಮಹಿಳೆಯರಿಗೆ ಈ ಪ್ರೇಕ್ಷಣೀಯ ಸ್ಥಳವಾಗಿದೆ.
ಉತ್ತರಾಖಂಡದ(Uttarakhand) ನೈನಿತಾಲ್ : (Nainital)
ನೈನಿತಾಲ್ ಭಾರತದ ಅತ್ಯಂತ ಆಕರ್ಷಕ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ಸುಂದರವಾದ ಸರೋವರಗಳು, ಭವ್ಯವಾದ ಬೆಟ್ಟಗಳು ಮತ್ತು ಸುಂದರವಾದ ಹಸಿರಿಗೆ ಹೆಸರುವಾಸಿಯಾಗಿದೆ. ಪ್ರತಿ ವರ್ಷ, ಸಾವಿರಾರು ಪ್ರವಾಸಿಗರು ನೈನಿತಾಲ್‌ನ ನೈಸರ್ಗಿಕ ಸೌಂದರ್ಯವನ್ನು ಆನಂದಿಸಲು ಮತ್ತು ವಿವಿಧ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸಲು ಚಳಿಗಾಲ ಮತ್ತು ಬೇಸಿಗೆಯಲ್ಲಿ ಅನೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಎತ್ತರದ ಸ್ವರ್ಗವು ತಮ್ಮ ದೈನಂದಿನ ಗದ್ದಲದಿಂದ ಸ್ವಲ್ಪ ಸಮಯದವರೆಗೆ ತಪ್ಪಿಸಿಕೊಳ್ಳಲು ಬಯಸುವ ಎಲ್ಲಾ ಪರ್ವತ ಪ್ರೇಮಿಗಳಿಗೆ ಸೂಕ್ತ ತಾಣ.
ಒಂಟಿಯಾಗಿ ನೈನಿತಾಲ್ ಗೆ ಭೇಟಿ ನೀಡಬೇಕು ಅಂದುಕೊಂಡರೆ ಮಹಿಳೆಯರು ಬಸ್ ಇಲ್ಲವೇ ರೈಲಿನಲ್ಲಿ ನೈನಿತಾಲ್ ತಲುಪಬಹುದಾಗಿದ್ದು, ನೈನಿತಾಲ್ ತಲುಪಿದ ಬಳಿಕ ಮಹಿಳೆಯರು ಯಾವುದೇ ಭೀತಿಯಿಲ್ಲದೆ ನಗರಗಳಲ್ಲಿ ಓಡಾಟ ನಡೆಸಬಹುದು. ಇಲ್ಲಿ ನೈನಿ ಸರೋವರ, ನೈನಾ ದೇವಿಯ ದೇವಾಲಯ, ಮೃಗಾಲಯಕ್ಕೆ ಕೂಡ ಭೇಟಿ ನೀಡಬಹುದು. ಕುಮಾನ್ ಹಿಮಾಲಯದ ತಪ್ಪಲಿನಲ್ಲಿ ನೆಲೆಸಿರುವ ನೈನಿತಾಲ್ ಗಿರಿಧಾಮವು ಪ್ರಕೃತಿ ಪ್ರಿಯರಿಗೆ ಮತ್ತು ಸಾಹಸ ಪ್ರಿಯರಿಗೆ ಸ್ವರ್ಗವಾಗಿದ್ದು, ಟ್ರೆಕ್ಕಿಂಗ್( Trucking)ಮತ್ತು ಸ್ಕೀಯಿಂಗ್‌ನಿಂದ ಹಿಡಿದು ಕ್ಯಾಂಪಿಂಗ್ ಮತ್ತು ಪ್ಯಾರಾಗ್ಲೈಡಿಂಗ್, ದೋಣಿ ವಿಹಾರ, ಶಾಪಿಂಗ್ ಗೆ ನೈನಿತಾಲ್ ಸೂಕ್ತವಾದ ಜಾಗವಾಗಿದೆ.
ಉತ್ತರಾಖಂಡದ ಮಸೂರಿ ಗುಡ್ಡ : (Mussoorie)
ಉತ್ತರಾಖಂಡದ(Uttarakhand) ಮಸೂರಿಗೆ ಕೂಡ ಮಹಿಳೆಯರು ಒಬ್ಬಂಟಿಯಾಗಿ ಭೇಟಿ ನೀಡಬಹುದು. ಕ್ಯಾಂಪ್ಟಿ ಫಾಲ್ಸ್, ದಲೈ ಹಿಲ್ಸ್, ಮಾಲ್ ರೋಡ್, ಧಲೌಟಿ ಮುಂತಾದ ಸ್ಥಳಗಳಿಗೆ ಭೇಟಿ ಕೊಡಬಹುದಾಗಿದೆ. ಡೆಹರಾಡೂನ್ ನಿಂದ ಬಸ್ ಇಲ್ಲವೇ ಟ್ಯಾಕ್ಸಿ ಮೂಲಕ ಮಸೂರಿಗೆ ತಲುಪಿ ಅಲ್ಲಿ ಹೋಟೆಲ್ ರೂಮ್ ಬುಕ್ ಮಾಡಿಕೊಳ್ಳಲು ಅವಕಾಶವಿದೆ.ಹೆಚ್ಚೇನು ಖರ್ಚು ಮಾಡದೆ ಎರಡು ದಿನಗಳ ಪ್ರವಾಸ( Tour)ಮಾಡಬಹುದು.
ರಾಜಸ್ಥಾನದ ಜೈಸಲ್ಮೇರ್ (Jaisalmer)
ಭಾರತದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ( Tourist Places)ರಾಜಸ್ಥಾನ (Rajasthan) ಕೂಡ ಒಂದಾಗಿದ್ದು, ಜೈಸಲ್ಮೇರ್( Jaisalmer Fort)ಕೋಟೆಯು ಜೈಸಲ್ಮೇರ್ ನಗರದ ಅತ್ಯಂತ ಜನಪ್ರಿಯ ಹೆಗ್ಗುರುತಾಗಿದೆ. ಜೈಸಲ್ಮೇರ್ ನಲ್ಲಿ ಮಹಿಳೆಯರು ನೋಡಬಹುದಾದ ಅನೇಕ ಸ್ಥಳಗಳಿವೆ. ಶಾಪಿಂಗ್ ಗಳಿಗೆ (Shopping)ಸೂಕ್ತವಾದ ಸ್ಥಳೀಯ ಮಾರುಕಟ್ಟೆ ಕೂಡ ಇದೆ. ರಾಜಸ್ಥಾನದ ಜೈಸಲ್ಮೇರ್ ಕೋಟೆಯು ವಸ್ತುಸಂಗ್ರಹಾಲಯ, ಅಂಗಡಿ(Shops) ರೆಸ್ಟೋರೆಂಟ್‌ಗಳು, ವಸತಿ ಸೌಕರ್ಯಗಳು, ಹೋಟೆಲ್‌ಗಳು(Hotels) ಇತ್ಯಾದಿಗಳನ್ನು ಹೊಂದಿದೆ. ಸುದೀರ್ಘ ಇತಿಹಾಸವನ್ನು ಅರಹುವ ಈ ರಾಜ್ಯದಲ್ಲಿ ದೇವಾಲಯಗಳು(Temples), ಸರೋವರ, ಐತಿಹಾಸಿಕ ಕೋಟೆಗಳು, ಅರಮನೆಗಳು ಕಂಡುಬರುತ್ತವೆ. ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಮಹಿಳೆಯರು ಏಕಾಂಗಿಯಾಗಿ ಯಾವುದೇ ಭಯವಿಲ್ಲದೇ ಓಡಾಡಬಹುದು.