Telecom Recharge: ಏರ್ಟೆಲ್ ಗ್ರಾಹಕರಿಗೆ ಬಿಗ್ ಶಾಕಿಂಗ್ ನ್ಯೂಸ್!!!
Telecom Recharge: ಟೆಲಿಕಾಮ್ ಕಂಪನಿಗಳಲ್ಲಿ (Telicom Company)ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್ ಒನ್ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿತ್ತು. ಆದರೆ, ಇದೀಗ ಏರ್ಟೆಲ್ (Airtel)ತನ್ನ ಗ್ರಾಹಕರಿಗೆ ಶಾಕ್ ನೀಡಲು ಮುಂದಾಗಿದೆ.
ಟೆಲಿಕಾಂ (Telecom Companies) ಕಂಪೆನಿಗಳಲ್ಲಿ ಜಿದ್ದಾ ಜಿದ್ದಿನ ಪೈಪೋಟಿ ನಡೆಯುತ್ತಿದ್ದು, ಹೊಸ ರೀಚಾರ್ಜ್ ಪ್ಲಾನ್ (Recharge Plan) ದೇಶದ ಟೆಲಿಕಾಂ ಕಂಪೆನಿಗಳಲ್ಲಿ ನಂಬರ್ ಒನ್ ಎಂದು ಜಿಯೋ (Jio) ಇತ್ತೀಚೆಗೆ ಕಡಿಮೆ ಬೆಲೆಯ ರೀಚಾರ್ಜ್ ಅನ್ನು ಪರಿಚಯಿಸಿದೆ. ಇದೀಗ ಏರ್ಟೆಲ್ ತನ್ನ ಗ್ರಾಹಕರಿಗೆ ಶಾಕ್ ನೀಡಲು ಅಣಿಯಾಗಿದೆ. ಈ ಹಿಂದೆ ರೀಚಾರ್ಜ್ ಬೆಲೆಯನ್ನು (Recharge Price Hike) ಏರಿಕೆ ಮಾಡುವುದಾಗಿ ಹೇಳಿಕೊಂಡಿತ್ತು. ಇದೀಗ, ಏರ್ಟೆಲ್ ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿದೆ. ಈ ನಡುವೆ, ರಿಲಯನ್ಸ್ ಜಿಯೋ ಏರ್ಟೆಲ್ ಗೆ ಟಕ್ಕರ್ ನೀಡುವ ನಿಟ್ಟಿನಲ್ಲಿ ತನ್ನ ಜಿಯೋಫೋನ್ ಬಳಕೆದಾರರಿಗೆ 75 ರೂಪಾಯಿಯ ಯೋಜನೆಯನ್ನು ಪರಿಚಯಿಸಿದೆ. Jio.com ನಲ್ಲಿ ಒದಗಿಸಲಾದ ಮಾಹಿತಿಯ ಅನುಸಾರ, ಈ ಯೋಜನೆಯು ಉಚಿತ ಕರೆಗಳು ಸೇರಿದಂತೆ ಅನೇಕ ಉಪಯೋಗಗಳನ್ನು ನೀಡುತ್ತದೆ.
ಕಳೆದ ನವೆಂಬರ್‌ನಲ್ಲಿ ಏರ್‌ಟೆಲ್ ಕಂಪೆನಿಯು ಮೊದಲ ಬಾರಿಗೆ ರೀಚಾರ್ಜ್ ಬೆಲೆಯನ್ನು ಹೆಚ್ಚಳ ಮಾಡಿದೆ. ನಿರ್ಧಾರ ಒಡಿಶಾ, ಹರಿಯಾಣದಂತಹ ವಲಯಗಳಲ್ಲಿ ಮಾತ್ರ ಬೆಲೆ ಏರಿಕೆ ಮಾಡಲಾಗಿದೆ. ಏರ್ಟೆಲ್ ಗ್ರಾಹಕರ ಮೇಲೆ ಹೆಚ್ಚು ಪ್ರಭಾವ ಬೀರಿದ್ದು, ಇಲ್ಲಿಯವರೆಗೆ ಮೂಲ ಪ್ರಿಪೇಯ್ಡ್ ಯೋಜನೆಯು ರೂ. 99 ಆಗಿದ್ದು, ಆದರೆ ಈಗ ಎಲ್ಲಾ ವಲಯಗಳಲ್ಲಿ ಮೂಲ ಪ್ರಿಪೇಯ್ಡ್ ಪ್ಲಾನ್ ಬೆಲೆ ರೂ. 155ಕ್ಕೆ ಹೆಚ್ಚಳವಾಗಿದೆ.
ಏರ್ಟೆಲ್ ಇದೀಗ ತನ್ನ ಪ್ರೀಪೇಯ್ಡ್ ಪ್ಲ್ಯಾನ್ (Prepaid Plan) ಅನ್ನು ಹೆಚ್ಚಿಸಲು ತೀರ್ಮಾನ ಕೈಗೊಂಡಿದ್ದು, ಕೆಲ ನಗರಗಳಲ್ಲಿ ಮಾತ್ರ ಏರಿಕೆ ಕಂಡಿದ್ದು, ಕೆಲವೇ ದಿನಗಳಲ್ಲಿ ದೇಶದೆಲ್ಲೆಡೆ ಹೆಚ್ಚಾಗುವ ಸಾಧ್ಯತೆಗಳಿವೆ. ಏರ್‌ಟೆಲ್ ಇತ್ತೀಚೆಗೆ ದೇಶದ ಎಲ್ಲಾ ವಲಯಗಳಲ್ಲಿ ತನ್ನ ರೀಚಾರ್ಜ್ ಪ್ಲಾನ್ನ (Telecom Recharge)ಬೆಲೆಯನ್ನು ಹೆಚ್ಚಳ ಮಾಡಿದ್ದು, ಇದೀಗ 22 ವಲಯಗಳಲ್ಲಿ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯ ಬೆಲೆಯು 57 ಪ್ರತಿಶತದಷ್ಟು ಹೆಚ್ಚಳವಾಗಿದೆ. ಏರ್ಟೆಲ್ ಕಂಪೆನಿಯ ಸರಾಸರಿ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇನ್ಮುಂದೆ ಏರ್ಟೆಲ್ ಪ್ರೀಪೇಯ್ಡ್ ಯೋಜನೆಗಳು 200 ರೂಪಾಯಿಗಿಂತ ಹೆಚ್ಚಾಗುತ್ತದೆ.
ಭಾರ್ತಿ ಏರ್ಟೆಲ್ ಇತ್ತೀಚೆಗೆ, ಬೇಸ್ ಪ್ರಿಪೇಯ್ಡ್ ಯೋಜನೆಯ ಬೆಲೆಯನ್ನು ಹೆಚ್ಚಿಸಿದೆ. ಈ ಮೂಲಕ ಬೆಲೆಯಲ್ಲಿ 57 ಶೇಕಡಾದಷ್ಟು ಹೆಚ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಇದು ಏರ್‌ಟೆಲ್ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಏರ್ಟೆಲ್ ಕಂಪೆನಿಯು ಇತ್ತೀಚೆಗೆ ಕೆಲವೊಂದು ರೀಚಾರ್ಜ್ ಬೆಲೆಯಲ್ಲಿ ಸ್ವಲ್ಪ ಏರಿಕೆ ಮಾಡಿತ್ತು. ಇದೀಗ ಮತ್ತೆ ಪ್ರೀಪೇಯ್ಡ್ ಯೋಜನೆಗಳ ಬೆಲೆಯನ್ನು ಏರಿಕೆ ಮಾಡಿದೆ. ಏರ್ಟೆಲ್ನ 155 ರೂಪಾಯಿ ಯೋಜನೆಯಲ್ಲಿ ಗ್ರಾಹಕರು 1 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಇದಲ್ಲದೇ, 300 ಎಸ್ಎಮ್ಎಸ್ ಮಾಡುವ ಸೌಲಭ್ಯ ಪಡೆಯಬಹುದು. ಇನ್ನು ಯಾವುದೇ ನೆಟ್ವರ್ಕ್ಗೂ ಅನಿಯಮಿತ ಕರೆ ಮಾಡುವ ಸೌಲಭ್ಯ ಕೂಡ ದೊರೆಯಲಿದೆ.
ಇದನ್ನೂ ಓದಿ: Africa Splitting : ಇನ್ನು ಏಳು ಖಂಡಗಳಲ್ಲ, ಎಂಟು! ಬದಲಾಗಲಿದೆ ‘ವಿಶ್ವ ಭೂಪಟ’!!!