Vodafone – Idea : ಧಮಾಕ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದ ವೋಡಾಫೋನ್ ಐಡಿಯಾ ! ಗ್ರಾಹಕರು ಫುಲ್‌ ಖುಷ್‌!

Vodafone-idea Plan : ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್ಟೆಲ್ ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಇದೀಗ ಜನಪ್ರಿಯತೆ ಪಡೆಯಲು ವೊಡಾಫೋನ್ ಐಡಿಯಾ ಹರಸಾಹಸ ಪಡುತ್ತಿದೆ . ಅದಲ್ಲದೆ ಬಜೆಟ್ ಪ್ರಿಯರಿಗೆಂದೇ ಈ ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಗೆ ಆಕರ್ಷಕವಾದ ಯೋಜನೆಗಳನ್ನು ಕೂಡ ನೀಡಿದೆ. ಹೌದು ವೊಡಾಫೋನ್ ಐಡಿಯಾ (Vodafone-idea Plan)- ವಿಐ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗಾಗಿ ಎರಡು ಧಮಾಕ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ನೀವೂ ಕೂಡ ವಿಐ ಗ್ರಾಹಕರಾಗಿದ್ದರೆ, ಈ 2 ಹೊಸ ಯೋಜನೆಗಳ, ಪ್ರಯೋಜನಗಳನ್ನು ಪಡೆಯಬಹುದು.

 

ವೋಡಾಫೋನ್ ಐಡಿಯಾದಿಂದ (Vodafone-idea Prepaid Plan) ಎರಡು ಹೊಸ ಧಮಾಕ ಪ್ರಿಪೇಯ್ಡ್ ಪ್ಲಾನ್ಸ್ ಇಂತಿವೆ :
ವೊಡಾಫೋನ್ ಐಡಿಯಾ ಕಂಪನಿಯು ತನ್ನ ಗ್ರಾಹಕರಿಗಾಗಿ 289 ರೂ. ಮತ್ತು 429 ರೂ.ಗಳ ಎರಡು ಧಮಾಕ ಪ್ರಿಪೇಯ್ಡ್ ಪ್ಲಾನ್ಸ್ ಅನ್ನು ಘೋಷಿಸಿದೆ. Vi Store ಮತ್ತು ಅಧಿಕೃತ Vi ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಈ ಪ್ರಿಪೇಯ್ಡ್ ಪ್ಲಾನ್ಸ್ ಅನ್ನು ಖರೀದಿಸಬಹುದಾಗಿದೆ.

ವೋಡಾಫೋನ್ ಐಡಿಯಾದ 289 ರೂ. ಯೋಜನೆಯಲ್ಲಿ ನೀಡಲಾಗುವ ಕೊಡುಗೆಗಳು:
ವೋಡಾಫೋನ್ ಐಡಿಯಾ-ವಿಐನ 289 ರೂ.
ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಕಾಲ್ ಸೌಲಭ್ಯ ವಿದೆ. ಇದು 48 ದಿನಗಳ ವ್ಯಾಲಿಡಿಟಿಯೊಂದಿಗೆ ಬರಲಿದೆ.ಈ ಯೋಜನೆಯಲ್ಲಿ 4GB ಡೇಟಾ ಲಭ್ಯವಿದ್ದು, 600 ಉಚಿತ ಎಸ್ಎಂಎಸ್ ಸೌಲಭ್ಯವೂ ಲಭ್ಯವಾಗಲಿದೆ.

ವೋಡಾಫೋನ್ ಐಡಿಯಾ 429 ರೂ.ಗಳ ಯೋಜನೆಯಲ್ಲಿ ನೀಡಲಾಗುವ ಕೊಡುಗೆಗಳು:
ಈ ಪ್ಲಾನ್ 78 ದಿನಗಳ ಮಾನ್ಯತೆಯೊಂದಿಗೆ ಬರಲಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ ಜೊತೆಗೆ 1000 ಉಚಿತ ಎಸ್ಎಂಎಸ್ ಸೌಲಭ್ಯ ಲಭ್ಯವಾಗಲಿದೆ. ಇದಲ್ಲದೆ ಈ ಯೋಜನೆಯಲ್ಲಿ 6GB ವರೆಗಿನ ಹೈಸ್ಪೀಡ್ ಡೇಟಾ ಪ್ರಯೋಜನವೂ ಸಿಗಲಿದೆ.

ಈ ಮೇಲಿನಂತೆ ಎರಡು ಹೊಸ ಧಮಾಕ ಪ್ರಿಪೇಯ್ಡ್ ಪ್ಲಾನ್ಸ್ ಗಳ ಪ್ರಯೋಜನ ಪಡೆಯಬಹುದಾಗಿದೆ.

Leave A Reply

Your email address will not be published.